ETV Bharat / bharat

2 ಸಾವಿರ ನೋಟ್​​ ಹಿಂಪಡೆದ ಆರ್​ಬಿಐ: 14 ಸಾವಿರ ಕೋಟಿ ಮೌಲ್ಯದ 2 ಸಾವಿರ ನೋಟ್​​ಗಳನ್ನ ಪಡೆದ ಎಸ್​​ಬಿಐ - SBI has received deposits of 2000 notes

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ 2,000 ಮುಖಬೆಲೆ ನೋಟುಗಳು ಖಾತೆಗಳಿಗೆ ಠೇವಣಿಯಾಗಿ ಬಂದಿದೆ ಎಂದು ತಿಳಿದುಬಂದಿದೆ.

sbi-has-received-deposits-of-2000-notes-worth-rs-14000-crore
2 ಸಾವಿರ ನೋಟ್​​ ಹಿಂಪಡೆದ ಆರ್​ಬಿಐ: 14 ಸಾವಿರ ಕೋಟಿ ಮೌಲ್ಯದ 2 ಸಾವಿರ ನೋಟ್​​ಗಳ ಠೇವಣಿ ಪಡೆದ ಎಸ್​​ಬಿಐ
author img

By

Published : May 30, 2023, 7:09 PM IST

ನವದೆಹಲಿ: 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನ ಭಾರತೀಯ ರಿಸರ್ವ್​ ಬ್ಯಾಂಕ್​​ (ಆರ್​​ಬಿಐ) ಹಿಂಪಡೆದ ಹಿನ್ನೆಲೆ, ಒಂದು ವಾರದಲ್ಲಿ ಸ್ಟೇಟ್​​​​ ಬ್ಯಾಂಕ್​​ ಆಫ್​​ ಇಂಡಿಯಾ ಸುಮಾರು 14 ಸಾವಿರ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ಕರೆನ್ಸಿ ನೋಟುಗಳನ್ನು ಠೇವಣಿ ಸ್ವೀಕರಿಸಿದೆ ಎಂದು ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾದ ಅಧ್ಯಕ್ಷ ದಿನೇಶ್​​​ ಕುಮಾರ್​​ ಖಾರಾ ತಿಳಿಸಿದ್ದಾರೆ.

ವರದಿಗಳ ಪ್ರಕಾರ "ಸುಮಾರು 14,000 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ಮುಖಬೆಲೆ ನೋಟುಗಳು ಖಾತೆಗಳಿಗೆ ಠೇವಣಿಯಾಗಿ ಬಂದಿದೆ ಮತ್ತು ಸುಮಾರು 3,000 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬ್ಯಾಂಕ್​ ಶಾಖೆಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿರುವ ಶೇ 20ರಷ್ಟು ನೋಟುಗಳು ಸ್ಟೇಟ್​​ ಬ್ಯಾಂಕ್​​ ಆಫ್​ ಇಂಡಿಯಾಗೆ ಬಂದಿದೆ ಎಂದು ಅಧ್ಯಕ್ಷ ದಿನೇಶ್​​​ ಕುಮಾರ್​​ ಖಾರಾ ತಿಳಿಸಿದರು.

ಆರ್​ಬಿಐ ನೋಟು ಹಿಂಪಡೆದಿದ್ದು ಏಕೆ?: ಆರ್​ಬಿಐ ಪ್ರಕಾರ, 2,000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016ರಲ್ಲಿ ಪರಿಚಯಿಸಲಾಯಿತು. ಆರ್ಥಿಕತೆಯ ಕರೆನ್ಸಿ ಅಗತ್ಯತೆಯನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲ 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಪಡಿಸಲಾಗಿತ್ತು. ಇತರ ಮುಖಬೆಲೆಯ ಕರೆನ್ಸಿ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿತು. ಆರ್​ಬಿಐ ಈಗಾಗಲೇ 2018 -19 ರಿಂದ 2 ಸಾವಿರ ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಿದೆ.

ಹಳೆಯ 500 ಮತ್ತು 1,000 ರು ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯಗೊಳಿಸಿದ ನವೆಂಬರ್ 2016 ರ ಡಿಮಾನಿಟೈಸೇಶನ್‌ಗಿಂತ ಭಿನ್ನವಾಗಿ 2,000 ರೂ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ. ಬ್ಯಾಂಕ್ ಖಾತೆಗಳಲ್ಲಿ ವಿನಿಮಯ ಮತ್ತು ಠೇವಣಿ ಮಾಡಲು ಸಾಕಷ್ಟು ಸಮಯ ಲಭ್ಯವಿದೆ. ಆದ್ದರಿಂದ ಜನರು ಭಯಪಡಬಾರದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ಸೋಮವಾರ ಹೇಳಿದ್ದರು. ಆರ್‌ಬಿಐನಲ್ಲಿ ಮಾತ್ರವಲ್ಲದೇ ಬ್ಯಾಂಕ್‌ಗಳು ನಿರ್ವಹಿಸುವ ಕರೆನ್ಸಿ ಚೆಸ್ಟ್‌ಗಳಲ್ಲಿಯೂ ಸಾಕಷ್ಟು ಪ್ರಮಾಣದ ಮುದ್ರಿತ ನೋಟುಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: 2 ಸಾವಿರದ ನೋಟು ಚಲಾವಣೆಗೆ ತಂದು ಬ್ಯಾನ್​ ಮಾಡಿದ್ದು ಅಸಂಬದ್ಧ: ಚಿದಂಬರಂ ಟೀಕೆ

ಸೆಪ್ಟೆಂಬರ್​ 30 ರವೆರೆಗೆ ವಿನಿಮಯಕ್ಕೆ ಅವಕಾಶ: ನೀವು 2 ಸಾವಿರ ಮುಖಬೆಲೆ ನೋಟುಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್​ 30 ರವೆರೆಗೆ ಯಾವುದೇ ಬ್ಯಾಂಕ್​ನಲ್ಲಿ ಬೇಕಾದರು ವಿನಿಮಯ ಮಾಡಿಕೊಳ್ಳಬಹುದಾಗಿದೆ.

75 ರೂ. ನಾಣ್ಯ ಬಿಡುಗಡೆ: ಇತ್ತೀಚಿಗೆ ನಡೆದ ನೂತನ ಸಂಸತ್​ ಭವನ ಉದ್ಘಾಟನೆ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 75 ರೂ. ಮುಖಬೆಲೆಯ ನಾಲ್ಕು ಲೋಹ ಮಿಶ್ರಿತ 75 ರೂ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದರು.

ಇದನ್ನೂ ಓದಿ: ಗೃಹ ಸಾಲ ಹೊರೆ ಕಡಿಮೆ ಮಾಡಲು ವರ್ಗಾವಣೆ ಆಯ್ಕೆ ನೋಡುತ್ತಿದ್ದರೆ, ಈ ಅಂಶಗಳು ನೆನಪಿರಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.