ETV Bharat / bharat

ಶಶಿಕಲಾ ಅವರನ್ನು ಮತ್ತೆ ಎಐಎಡಿಎಂಕೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಡಿ ಜಯಕುಮಾರ್

ವಿ.ಕೆ.ಶಶಿಕಲಾ ಅವರನ್ನು ಮತ್ತೆ ಎಐಎಡಿಎಂಕೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಐಎಡಿಎಂಕೆ ಮುಖಂಡ ಡಿ.ಜಯಕುಮಾರ್ ಹೇಳಿದ್ದಾರೆ.

D Jayakumar
ಡಿ ಜಯಕುಮಾರ್
author img

By

Published : Mar 26, 2021, 11:29 AM IST

ಚೆನ್ನೈ(ತಮಿಳುನಾಡು): ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ತಮಿಳುನಾಡು ಸಚಿವ ಮತ್ತು ಎಐಎಡಿಎಂಕೆ ಮುಖಂಡ ಡಿ.ಜಯಕುಮಾರ್ ಹೇಳಿದ್ದಾರೆ.

ತಮಿಳುನಾಡಿನ ರಾಯಪುರಂ ಪ್ರದೇಶದಲ್ಲಿ ಗುರುವಾರ ಪ್ರಚಾರ ನಡೆಸಿ ಮಾತನಾಡಿದ ಜಯಕುಮಾರ್, ಎಐಎಡಿಎಂಕೆ ಎಲ್ಲ ವಿಷಯಗಳಲ್ಲಿ ತಮಿಳುನಾಡಿನ ಜನರ ಪರವಾಗಿದೆ ಮತ್ತು ಯಾವುದೇ ಅಭಿಪ್ರಾಯ ಸಂಗ್ರಹವು ಅವರ ಗೆಲುವಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ನಾವು ಮತದಾರರನ್ನು ಸೆಳೆಯಲು ಹಣದ ಆಮಿಷ ಒಡ್ಡುವುದಿಲ್ಲ, ನನ್ನ ಬೆಂಬಲಿಗರು ಸುಡುವ ಬಿಸಿಲಿನಲ್ಲಿ ನನ್ನೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಶಶಿಕಲಾ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಕ್ಷದ ನಿಲುವು ನನ್ನ ನಿಲುವಾಗಿದೆ, ವಿ.ಕೆ.ಶಶಿಕಲಾ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ರು. ನಾವು ತಮಿಳುನಾಡಲ್ಲಿ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.