ETV Bharat / bharat

ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ಜೀವನದ ಗುರಿ: ಸಾರಾ - sara ali khan latest news

ಇತ್ತೀಚಿನ ನಿಯತಕಾಲಿಕೆಯ ಸಂದರ್ಶನದಲ್ಲಿ, ತಾಯಿಯ ಮೇಲೆ ತುಂಬಾ ಅವಲಂಬಿತಳಾಗಿದ್ದು, ತಾಯಿ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಸಾರಾ ಹೇಳಿದ್ದರು.

Sara's goal in life is to make Amrita proud: 'Mom gave up her life for me, Ibrahim'
ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ಜೀವನದ ಗುರಿ
author img

By

Published : Feb 22, 2021, 5:36 PM IST

ಹೈದರಾಬಾದ್: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನೆಲ್ಲಾ ಸರ್ವಸ್ವವೂ ತಾಯಿ ಅಮೃತಾ ಸಿಂಗ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತನ್ನ ತಾಯಿಯನ್ನು ಹೆಮ್ಮೆ ಪಡಿಸುವುದು ತನ್ನ ಜೀವನದ ಏಕೈಕ ಗುರಿ ಎಂದು ಅವರು ಹೇಳಿದ್ದಾರೆ.

ತನ್ನ ತಾಯಿ ತನ್ನ ಸ್ಫೂರ್ತಿಯ ಮೂಲ ಮಾತ್ರವಲ್ಲ, ಅವಳು ಎಲ್ಲವನ್ನೂ ಹಂಚಿಕೊಳ್ಳಬಲ್ಲ ಸ್ನೇಹಿತೆ ಎಂದು ಹೇಳಿದ್ದಾರೆ. ಇನ್ನು ಇತ್ತೀಚಿನ ನಿಯತಕಾಲಿಕೆಯ ಸಂದರ್ಶನದಲ್ಲಿ, ತಾಯಿಯ ಮೇಲೆ ತುಂಬಾ ಅವಲಂಬಿತಳಾಗಿದ್ದು, ತಾಯಿ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ನಾನು ನನ್ನ ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ಅವಳು ನನ್ನ ಇಡೀ ಜಗತ್ತು. ಅವಳು ನನ್ನವಳು. ಕಳೆದ ರಾತ್ರಿ ನಾನು ಸ್ನೇಹಿತರ ಬಳಿ ಹೋಗಬೇಕಾಗಿತ್ತು. ಆ ವೇಳೆ ಮನೆಯಲ್ಲಿ ನನ್ನಮ್ಮ ಇರಲಿಲ್ಲ, ಹಾಗಾಗಿ ನಾನು ಏನು ಧರಿಸಬೇಕೆಂದು ಯೋಚಿಸಲು ಅವಳನ್ನೇ ಎದುರು ನೋಡುತ್ತಿದ್ದೆ ಎಂದಿದ್ದಾರೆ.

ನನ್ನ ತಾಯಿ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ, ಆಕೆ ಸಂತೋಷದಿಂದ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಗುರಿಯಾಗಿದೆ. ಅವಳು ನನ್ನ ಸಹೋದರ ಮತ್ತು ನನಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಜೀವನದಲ್ಲಿ ನನ್ನ ನಿಜವಾದ ಉದ್ದೇಶ ಆ ತ್ಯಾಗದ ಹತ್ತನೇ ಒಂದು ಭಾಗದಷ್ಟಾದರೂ ಮಾಡಬೇಕು ಎಂಬುದು ಎಂದು ತಾಯಿ ಬಗ್ಗೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.