ETV Bharat / bharat

1.5 ಟನ್​ ಟೊಮೆಟೊದಲ್ಲಿ ಸಾಂಟಾ ಕ್ಲಾಸ್​ ವಿರಾಜಮಾನ: ಮರಳು ಕಲಾವಿದ ಸುದರ್ಶನ್ ಕೈಚಳಕ - Sand Artist Creates Sculpture Of Santa Claus

ಅದ್ಭುತ ಮರಳು ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಕ್ರಿಸ್​ಮಸ್​ ಹಬ್ಬದ ಹಿನ್ನೆಲೆಯಲ್ಲಿ ಒಡಿಶಾದ ಗೋಪಾಲ್‌ಪುರ ಬೀಚ್‌ನಲ್ಲಿ 1.5 ಟನ್​ ಟೊಮೆಟೊದಿಂದ ಸಾಂಟಾ ಕ್ಲಾಸ್​ ನಿರ್ಮಿಸಿದ್ದಾರೆ.

sculpture-of-santa-claus
ಟೊಮೆಟೊದಲ್ಲಿ ಸಾಂಟಾ ಕ್ಲಾಸ್
author img

By

Published : Dec 25, 2022, 10:25 AM IST

Updated : Dec 25, 2022, 10:41 AM IST

ಟೊಮೆಟೊದಲ್ಲಿ ಸಾಂಟಾ ಕ್ಲಾಸ್​ ವಿರಾಜಮಾನ

ಬರ್ಹಾಂಪುರ (ಒಡಿಶಾ): ಇಂದು ಕ್ರಿಸ್‌ಮಸ್ ಹಬ್ಬದ ಸಂಭ್ರಮ. ಏಸುಕ್ರಿಸ್ತ ಜನಿಸಿದ ದಿನವನ್ನು ಆಚರಿಸುವ ಪುಣ್ಯ ದಿನ. ವಿಶ್ವಾದ್ಯಂತ ಆಚರಿಸುವ ಹಬ್ಬಗಳಲ್ಲಿ ಇದೂ ಕೂಡ ಒಂದು. ಹಬ್ಬದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಗೋಪಾಲ್‌ಪುರ ಬೀಚ್‌ನಲ್ಲಿ ಸಾಂಟಾ ಕ್ಲಾಸ್‌ನ ಬೃಹತ್ ಮರಳು ಶಿಲ್ಪವನ್ನು ಟೊಮೆಟೊಗಳಿಂದ ರಚಿಸಿದ್ದು, ಗಮನ ಸೆಳೆಯುತ್ತಿದೆ.

ಕಲಾಕಾರ ಸುದರ್ಶನ್ ಅವರು, ಬೀಚ್​ನಲ್ಲಿ 27 ಅಡಿ ಎತ್ತರ, 60 ಅಡಿ ಅಗಲದ ಮರಳಿನ ಸಾಂಟಾ ಕ್ಲಾಸ್ ಅನ್ನು ಸುಮಾರು 1,500 ಕೆಜಿ ಟೊಮೆಟೊಗಳೊಂದಿಗೆ 'ಮೆರಿ ಕ್ರಿಸ್ಮಸ್' ಎಂಬ ಶುಭಾಶಯ ಸಂದೇಶವನ್ನು ಕೂಡ ಬಿಡಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸುದರ್ಶನ್​,' ಕ್ರಿಸ್​ಮಸ್​​ಗೂ ಒಂದು ದಿನದ ಮೊದಲು ಒಡಿಶಾದ ಗೋಪಾಲ್​ಪುರ ಬೀಚ್​ನಲ್ಲಿ ವಿಶ್ವದ ಅತಿದೊಡ್ಡ ಟೊಮೆಟೊ ಮತ್ತು ಮರಳು ಮಿಶ್ರಿತ ಸಾಂಟಾಕ್ಲಾಸ್​ ನಿರ್ಮಿಸಿದ್ದೇವೆ. ಇದು 1.5 ಟನ್​ ಟೊಮೆಟೊದಿಂದ 27 ಅಡಿ ಎತ್ತರದ 60 ಅಗಲದಿಂದ ಕೂಡಿದೆ. ಇದರ ರಚನೆಯಲ್ಲಿ ನನ್ನ ವಿದ್ಯಾರ್ಥಿಗಳು ನೆರವು ನೀಡಿದರು' ಎಂದು ಬರೆದುಕೊಂಡಿದ್ದಾರೆ.

ಸುದರ್ಶನ್​ ಪಟ್ನಾಯಕ್ ಯಾರು?​: ಒಡಿಶಾದ ಮರಳು ಕಲಾವಿದರಾದ ನವೀನ್​ ಪಟ್ನಾಯಕ್​ ಅವರು ಹಲವಾರು ಕಲಾಕೃತಿಗಳನ್ನು ಮರಳಿನಲ್ಲಿ ಬಿಡಿಸುತ್ತಾರೆ. 2017ರಲ್ಲಿ ವಿಶ್ವದ ಅತಿ ದೊಡ್ಡ ಮರಳಿ ಕೋಟೆ ನಿರ್ಮಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ವಿಶೇಷ ದಿನಗಳಂದು ಬೀಚ್​​ನಲ್ಲಿ ಮರಳಿನ ಮೂಲಕ ಕಲಾಕೃತಿ ಬಿಡಿಸುತ್ತಾರೆ. ಈಚೆಗಷ್ಟೇ ಫಿಫಾ ವಿಶ್ವಕಪ್‌ನ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ಮಧ್ಯೆ ಫೈನಲ್​ ಪಂದ್ಯಕ್ಕೂ ಮೊದಲು 148 ಫುಟ್ಬಾಲ್​ಗಳನ್ನು ಬಳಸಿ ವಿಶ್ವಕಪ್​ ಕಲಾಕೃತಿಯನ್ನು ರೂಪಿಸಿದ್ದರು. ಉಭಯ ತಂಡಗಳ ನಾಯಕರನ್ನು ಮರಳಿನಲ್ಲೇ ಬಿಡಿಸಿ ಗುಡ್​​ಲಕ್​ ಹೇಳಿದ್ದರು.

ಮರಳು ಕಲೆಯಲ್ಲಿ ಮಾಡಿದ ಸಾಧನೆಗಾಗಿ ಕೇಂದ್ರ ಸರ್ಕಾರ 2019 ರಲ್ಲಿ ಇವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿದೆ. 2014 ರಲ್ಲಿ ಮರಳು ಕಲೆಯ ವಿಶ್ವಕಪ್​ನಲ್ಲಿ ಜನರ ಆಯ್ಕೆಯ ಕಲಾವಿದ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇದನ್ನೂ ಓದಿ: ಮಲೇಷಿಯಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಐಐಟಿ ಖರಗ್​ಪುರ್ ಚಿಂತನೆ

Last Updated : Dec 25, 2022, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.