ETV Bharat / bharat

Galaxy Book Go ; ಹೊಸ ಲ್ಯಾಪ್​ಟಾಪ್​ ಪರಿಚಯಿಸಿದ ಸ್ಯಾಮ್ಸಂಗ್​

author img

By

Published : Jun 3, 2021, 8:08 PM IST

ಗ್ಯಾಲಕ್ಸಿ ಗೋ 5ಜಿ ಇದು ಕ್ವಾಲ್ಕಾಂ ಸ್ನ್ಯಾಪ್​ ಡ್ರ್ಯಾಗನ್ 8cx Gen 2 5G ಪ್ಲಾಟ್​ಫಾರ್ಮ್​ ಹಾಗೂ ಗ್ಯಾಲಕ್ಸಿ ಬುಕ್​ ಗೋ LTE ಮಾದರಿಯು ಕ್ವಾಲ್ಕಾಂ ಸ್ನ್ಯಾಪ್​ ಡ್ರ್ಯಾಗನ್ 7c Gen 2 ಸಿಸ್ಟಂ ಹೊಂದಿವೆ.

samsung-introduces-new-galaxy-book-go-laptops
Galaxy Book Go ; ಹೊಸ ಲ್ಯಾಪ್​ಟಾಪ್​ ಪರಿಚಯಿಸಿದ ಸ್ಯಾಮ್ಸಂಗ್​

ಸಿಯೋಲ್: ಸೌತ್ ಕೊರಿಯಾ ಮೂಲದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್​ ತನ್ನ ಗ್ಯಾಲಕ್ಸಿ - ಬುಕ್ ಸರಣಿಯಲ್ಲಿ ಹೊಸ ಲ್ಯಾಪ್​ಟಾಪ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಬಹುತೇಕ ಕೆಲಸಗಳು ವರ್ಕ್​ ಫ್ರಂ ಹೋಮ್​ ಮಾದರಿಯಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ವಿಶ್ವಾದ್ಯಂತ ಲ್ಯಾಪ್​ಟಾಪ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಕಂಪನಿ ಹೊಸ ಅವಕಾಶಗಳನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಹೊಸ ಲ್ಯಾಪ್​ಟಾಪ್​ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಕ್ವಾಲ್ಕಾಂ ಸ್ನ್ಯಾಪ್​ ಡ್ರ್ಯಾಗನ್ ಪ್ಲಾಟ್​ಫಾರ್ಮ್ ಹೊಂದಿರುವ ಗ್ಯಾಲಕ್ಸಿ ಬುಕ್​ ಗೋ ಹಾಗೂ ಗ್ಯಾಲಕ್ಸಿ ಬುಕ್ ಗೋ 5ಜಿ ಹೆಸರಿನ ಹೊಸ ಲ್ಯಾಪ್​ಟಾಪ್​ಗಳನ್ನು ಸ್ಯಾಮ್ಸಂಗ್ ಪರಿಚಯಿಸಿದೆ.

ಇನ್ನು ಗ್ಯಾಲಕ್ಸಿ ಬುಕ್ ಗೋ ವೈ-ಫೈ ಹಾಗೂ LTE ಮಾಡೆಲ್​ಗಳು ಈ ತಿಂಗಳಾಂತ್ಯಕ್ಕೆ ಕೆಲ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಾವೆ. ಸದ್ಯ ಇವುಗಳ ಬೆಲೆ 349 ಯುಎಸ್​ ಡಾಲರ್​ಗಳಾಗಿದೆ. 5ಜಿ ಮಾದರಿಯು ವರ್ಷಾಂತ್ಯಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಬುಕ್​ ಗೋ ಸರಣಿಯ ಲ್ಯಾಪ್​ಟಾಪ್​ಗಳು ಮೈಕ್ರೊಸಾಫ್ಟ್​ ವಿಂಡೋಸ್ 10​ ಆಪರೇಟಿಂಗ್​ ಸಿಸ್ಟಂ, 14 ಇಂಚಿನ ಪರದೆ, 180 ಡಿಗ್ರಿ ಮಡಚಬಹುದಾದ ಸೌಲಭ್ಯ, ಡಾಲ್ಬಿ ಆಟ್ಮಾಸ್​ ಸ್ಪೀಕರ್ಗ​ಳನ್ನು ಹೊಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.