ಜಲಪೈಗುರಿ( ಪಶ್ಚಿಮ ಬಂಗಾಳ): ತೀವ್ರ ಜ್ವರ ಮತ್ತು ಅತಿಸಾರ (Diarrhea) ದಿಂದ ಕನಿಷ್ಠ 130 ಮಕ್ಕಳನ್ನು ಜಲಪೈಗುರಿ ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಮಕ್ಕಳಲ್ಲಿ ಕೆಲವರು ಕೂಚ್‌ಬೆಹಾರ್ ಜಿಲ್ಲೆಗೆ ಸೇರಿದವರೂ ಆಗಿದ್ದಾರೆ. ಈ ಮಕ್ಕಳಲ್ಲಿ ಕೆಲವರ ಸ್ಥಿತಿ ಗಂಭೀರವಾದ ಕಾರಣದಿಂದ ಅವರನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ.
ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಡೆಂಗ್ಯೂ, ಚಿಕೂನ್ ಗುನ್ಯಾ ಅಥವಾ ಜಪಾನೀಸ್ ಎನ್ಸೆಫಾಲಿಟಿಸ್ ಇರಬಹುದು. ನಾವು ಸ್ವ್ಯಾಬ್ ಮತ್ತು ರಕ್ತದ ಮಾದರಿಗಳನ್ನು ಕೋಲ್ಕತಾಗೆ ಕಳುಹಿಸುತ್ತೇವೆ. ಈ ಆಸ್ಪತ್ರೆಯಲ್ಲೂ ಕೆಲವು ಪರೀಕ್ಷೆಗಳನ್ನು ಮಾಡುತ್ತೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರ ತಂಡದ ವೈದ್ಯರೊಬ್ಬರು ಹೇಳಿದ್ದಾರೆ.
ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐವರು ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡವು ಮಕ್ಕಳ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿದೆ. ಜೊತೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ.
ಮಕ್ಕಳನ್ನು ಜ್ವರದ ಕಾರಣವನ್ನು ಕಂಡುಹಿಡಿಯಲು ಕೋಲ್ಕತಾದ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಆಫ್ ಮೆಡಿಕಲ್ ಕಾಲೇಜಿಗೆ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿತ್ತು.
ಇದನ್ನೂ ಓದಿ: ಬಯಸಿದ್ದು ಸಿಗದಿದ್ದಾಗ ಎಲ್ಲರೂ ಅತೃಪ್ತರೇ: ನಿತಿನ್ ಗಡ್ಕರಿ ಶಾಸಕರಿಗೆ ಹೇಳಿದ ಕಿವಿ ಮಾತಿದು!