ಜಮುಯಿ: ಬಿಹಾರದಲ್ಲಿ ಸಲಿಂಗಗಳ ವಿವಾಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಹುಡುಗಿಯರು ದೇವಸ್ಥಾನದಲ್ಲಿ ಪರಸ್ಪರ ಮದುವೆಯಾಗಿದ್ದಾರೆ. ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಸಲಿಂಗಿಗಳ ಮದುವೆ ವಿಚಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು.. ಸೇಮ್ ಸೆಕ್ಸ್ ಮ್ಯಾರೇಜ್ ಕಾನೂನಿನ ಪ್ರಕಾರ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು.
ಜಿಲ್ಲೆಯ ಜಮುಯಿ ಮತ್ತು ಲಖಿಸರಾಯ್‌ನಿಂದ ಈ ಸುದ್ದಿ ವರದಿಯಾಗಿದೆ. ಇದರಲ್ಲಿ ಒಬ್ಬ ಹುಡುಗಿ ಜಮುಯಿಯ ಲಕ್ಷ್ಮೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ಗಿ ಗ್ರಾಮದ ನಿವಾಸಿಯಾಗಿದ್ದು, ಮತ್ತೊಬ್ಬಳು ಲಖಿಸರಾಯ್ ಜಿಲ್ಲೆಯ ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಸಂದ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 24 ರಂದು ಇಬ್ಬರ ಮದುವೆ: ಸಂಬಂಧಿಕರ ಮದುವೆ ಸಮಾರಂಭದಲ್ಲಿ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು ಎಂದು ಹೇಳಲಾಗುತ್ತಿದೆ. ಇದಾದ ನಂತರ ಇಬ್ಬರೂ ಸ್ನೇಹಿತರಾಗಿ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಕ್ರಮೇಣ ಇಬ್ಬರೂ ಒಬ್ಬನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಅಕ್ಟೋಬರ್ 24 ರಂದು ಇಬ್ಬರೂ ಜಮುಯಿ ದೇವಸ್ಥಾನಕ್ಕೆ ತೆರಳಿ ಮದುವೆಯಾಗಿದ್ದಾರೆ. ಈ ಮೂಲಕ ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ. ಇಬ್ಬರ ಈ ವರ್ತನೆ ಹಾಗೂ ಮದುವೆ ಆಗಿದ್ದು, ಸುತ್ತಮುತ್ತಲಿನ ಜನರು ಆಶ್ಚರ್ಯಚಕಿತರಾಗುವಂತೆ ಮಾಡಿದೆ.
ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು: ಜಮುಯಿಯ ಅಶೋಕ ತಂತಿ ಎಂಬುವರ ಮಗಳು ನಿಶಾ ಕುಮಾರಿ (18) ಮತ್ತು ಕಾಮೇಶ್ವರನ ಮಗಳು ಕುಂಕುಮ ಕುಮಾರಿ ಅಲಿಯಾಸ್ ಕೋಮಲ್ (20) ಪರಸ್ಪರ ಮದುವೆ ಆಗಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ನಿಶಾ ಅವರ ಮಾವನ ವಿವಾಹವಾಗಿತ್ತು. ಈ ಮದುವೆ ಸಮಾರಂಭದಲ್ಲಿ ನಾನು ಕೋಮಲ್ ಕುಮಾರಿಯನ್ನು ಭೇಟಿಯಾದೆ. ಇಬ್ಬರೂ ಹತ್ತಿರದ ಜಿಲ್ಲೆಯ ನಿವಾಸಿಗಳಾಗಿದ್ದರಿಂದ ನಿಯಮಿತವಾಗಿ ಭೇಟಿಯಾಗಲು ಶುರು ಮಾಡಿದೆವು. ನಂತರ ಇಬ್ಬರೂ ಮದುವೆಯಾದೆವು ಎಂದು ಈ ಜೋಡಿ ಹೇಳಿಕೊಂಡಿದೆ.
ಇದನ್ನು ಓದಿ:ಜಡ್ಜ್ಗಳಿಗೆ ಶಿಸ್ತು ಮುಖ್ಯ, ತಮಗೆ ವಹಿಸದ ಪ್ರಕರಣ ಕೈಗೆತ್ತಿಕೊಳ್ಳಬಾರದು: ಸುಪ್ರೀಂ ಕೋರ್ಟ್
ಸಂಸತ್ತು ಹೊಸ ಕಾನೂನು ರಚಿಸುವವರೆಗೂ ಸಲಿಂಗ ವಿವಾಹಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಬಹುಮತದ ತೀರ್ಪು ಪ್ರಕಟಿಸಿದೆ. LGBTQIA + ಜೋಡಿಗಳ ಮದುವೆಗೆ ಯಾವುದೇ ಹಕ್ಕು ಇಲ್ಲ. ಕಾನೂನಿನ ಮೂಲಕ ಮಾತ್ರವೇ ಇದಕ್ಕೆ ಮಾನ್ಯತೆ ನೀಡಲು ಸಾಧ್ಯ ಎಂದು ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಬಹುಮತದ ತೀರ್ಪಿನಲ್ಲಿ ಹೇಳಲಾಗಿದೆ.