ETV Bharat / bharat

ಪುಟಾಣಿಗಳ ಕ್ರಿಕೆಟ್‌ನಲ್ಲಿ ಚೆಂಡು ಹಿಡಿದುಕೊಡುವ ಶ್ವಾನ: ವಿಡಿಯೋ ಹಂಚಿಕೊಂಡ ಸಚಿನ್‌

ಶ್ವಾನವೊಂದು ಇಬ್ಬರು ಮಕ್ಕಳೊಂದಿಗೆ ಸೇರಿಕೊಂಡು ಕ್ರಿಕೆಟ್​​ ಆಡುತ್ತಿದ್ದು, ಅದರ ಫೀಲ್ಡಿಂಗ್ ಹಾಗೂ ವಿಕೆಟ್ ಕೀಪಿಂಗ್​​​ ಕೌಶಲ್ಯಕ್ಕೆ ಮಾಸ್ಟರ್ ಬ್ಲಾಸ್ಟರ್​ ಸಚಿನ್​ ಫಿದಾ ಆಗಿದ್ದಾರೆ.

author img

By

Published : Nov 22, 2021, 9:32 PM IST

Sachin tendulkar
Sachin tendulkar

ಮುಂಬೈ(ಮಹಾರಾಷ್ಟ್ರ): ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ (Sachin Tendulkar) ಸದಾ ಒಂದಿಲ್ಲೊಂದು ಕುತೂಹಲಕಾರಿ ವಿಡಿಯೋವನ್ನು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್​ ಮಾಡ್ತಿರುತ್ತಾರೆ. ಸದ್ಯ ಅಂತಹದ್ದೇ ಹಳೆಯ ವಿಡಿಯೋ ತುಣುಕೊಂದನ್ನು ಅವರು ಶೇರ್ ಮಾಡಿದ್ದಾರೆ.

  • Received this from a friend and I must say, those are some 'sharp' ball catching skills 😉

    We've seen wicket-keepers, fielders and all-rounders in cricket, but what would you name this? 😄 pic.twitter.com/tKyFvmCn4v

    — Sachin Tendulkar (@sachin_rt) November 22, 2021 " class="align-text-top noRightClick twitterSection" data=" ">

ಈ ವಿಡಿಯೋದಲ್ಲಿ ಕಾಣುವ ಹಾಗೆ, ಇಬ್ಬರು ಮಕ್ಕಳು ಕ್ರಿಕೆಟ್​​ ಆಡುತ್ತಿದ್ದಾರೆ. ಇದರಲ್ಲಿ ಶ್ವಾನ ವಿಕೆಟ್ ಕೀಪಿಂಗ್ (Dog playing cricket) ಜೊತೆಗೆ, ಬಾಲ್​ ಹುಡುಕಿಕೊಂಡು ತಂದು ಕೊಡುವ ಕೆಲಸ ಮಾಡ್ತಿದೆ. ವಿಕೆಟ್ ಕೀಪಿಂಗ್​​ ವೇಳೆ ಶ್ವಾನ ಚುರುಕಾಗಿ ತನ್ನ ಬಾಯಲ್ಲಿ ಬಾಲ್​ ಹಿಡಿದುಕೊಳ್ಳುತ್ತಿದೆ. ಈ ವಿಡಿಯೋ ಶೇರ್ ಮಾಡಿರುವ ಸಚಿನ್​, ನನ್ನ ಸ್ನೇಹಿತ ಈ ವಿಡಿಯೋ ಕಳುಹಿಸಿಕೊಟ್ಟಿದ್ದಾನೆ. ಶ್ವಾನದ ಕೌಶಲ್ಯ ನಿಜಕ್ಕೂ ಮೆಚ್ಚುವಂಥದ್ದು​. ನಾವು ಕ್ರಿಕೆಟ್​​ನಲ್ಲಿ ವಿಕೆಟ್ ಕೀಪರ್​ಗಳು, ಫೀಲ್ಡರ್​ಗಳು ಮತ್ತು ಆಲ್​ರೌಂಡರ್​ಗಳು ಈ ರೀತಿಯಾಗಿ ಬಾಲ್​ ಹಿಡಿಯುವುದನ್ನು ನೋಡುತ್ತೇವೆ. ಆದರೆ ನೀವಿದಕ್ಕೆ ಏನು ಹೆಸರಿಡುತ್ತೀರಿ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಪಾಕ್‌ನಲ್ಲಿ 2025ರ ಚಾಂಪಿಯನ್​ ಟ್ರೋಫಿ: ಭಾರತದ ಪಾಲ್ಗೊಳ್ಳುವಿಕೆ ಬಗ್ಗೆ ಐಸಿಸಿ ಹೇಳಿದ್ದೇನು?

ಸಚಿನ್ ತೆಂಡೂಲ್ಕರ್ ಶೇರ್ ಮಾಡಿರುವ ವಿಡಿಯೋ ನೋಡಿರುವ ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಇದೊಂದು ಫರ್ಫೆಕ್ಟ್​ ಆಲ್​ರೌಂಡರ್ ಎಂದು ಅನೇಕರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.