ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಆಕ್ಸಿಜನ್ ಸಮಸ್ಯೆ ಉದ್ಭವವಾಗಿದೆ. ಇದರ ಮಧ್ಯೆ ಅನೇಕರು ಕೈಲಾದ ಸಹಾಯ ಮಾಡ್ತಿದ್ದು, ಇದೀಗ ಕ್ರಿಕೆಟ್ ದೇವರು ಸಚಿನ್ ಕೂಡ ದೇಣಿಗೆ ನೀಡಿದ್ದಾರೆ.
- — Sachin Tendulkar (@sachin_rt) April 29, 2021 " class="align-text-top noRightClick twitterSection" data="
— Sachin Tendulkar (@sachin_rt) April 29, 2021
">— Sachin Tendulkar (@sachin_rt) April 29, 2021
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿರುವ ಸಚಿನ್ ತೆಂಡೂಲ್ಕರ್ ಮಿಷನ್ ಆಕ್ಸಿಜನ್ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 250ಕ್ಕೂ ಯುವ ಉದ್ಯಮಿಗಳ ಗುಂಪು ಆಕ್ಸಿಜನ್ ಸಾಂದ್ರಕ ಆಮದು ಮಾಡಿಕೊಳ್ಳಲು ಹಾಗೂ ದೇಶಾದ್ಯಂತ ಇರುವ ಆಸ್ಪತ್ರೆಗಳಿಗೆ ದಾನ ಮಾಡುವ ಉದ್ದೇಶದಿಂದ ಮಿಷನ್ ಆಕ್ಸಿಜನ್ ಪ್ರಾರಂಭಿಸಿದ್ದಾರೆ.
ಈಗಾಗಲೇ ಬ್ರೆಟ್ ಲೀ, ಪ್ಯಾಟ್ ಕಮ್ಮಿನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಮ್ಮ ಕೈಲಾದ ಸಹಾಯ ಮಾಡಿ, ಕೊರೊನಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಸಹಾಯ ಹಸ್ತ ಚಾಚಿದ ಸುನಿಲ್ ಶೆಟ್ಟಿ
-
We are going through some testing times, but a ray of hope in this is the way our people have joined hands to help each other. I am grateful to be a part of this initiative along with @FeedMyCity1, an initiative of #KVNFoundation, to provide free oxygen concentrators. pic.twitter.com/uhOrvn6tZA
— Suniel Shetty (@SunielVShetty) April 28, 2021 " class="align-text-top noRightClick twitterSection" data="
">We are going through some testing times, but a ray of hope in this is the way our people have joined hands to help each other. I am grateful to be a part of this initiative along with @FeedMyCity1, an initiative of #KVNFoundation, to provide free oxygen concentrators. pic.twitter.com/uhOrvn6tZA
— Suniel Shetty (@SunielVShetty) April 28, 2021We are going through some testing times, but a ray of hope in this is the way our people have joined hands to help each other. I am grateful to be a part of this initiative along with @FeedMyCity1, an initiative of #KVNFoundation, to provide free oxygen concentrators. pic.twitter.com/uhOrvn6tZA
— Suniel Shetty (@SunielVShetty) April 28, 2021
ಕೆವಿಎನ್ ಪ್ರತಿಷ್ಠಾನದ ಜೊತೆಗೊಡಿ ಆಕ್ಸಿಜನ್ ಕಾನ್ಸಸ್ಟ್ರೆಟರ್ಗಳನ್ನ ಉಚಿತವಾಗಿ ಬಿಪಿಎಲ್ ಕುಟುಂಬಗಳಿಗೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಪರೀಕ್ಷೆ ಕಾಲ. ಈ ಸಂದರ್ಭದಲ್ಲಿ ಜನರು ಪರಸ್ಪರ ಸಹಾಯ ಮಾಡುತ್ತಿದ್ದು, ಉಚಿತವಾಗಿ ಆಕ್ಸಿಜನ್ ಕಾನ್ಸನ್ಟ್ರೆಟರ್ಗಳನ್ನ ನೀಡುತ್ತಿರುವ ಅಭಿಯಾನಕ್ಕೆ ಭಾಗಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ವಿನಂತಿ ಮಾಡಿದ್ದು, ತಮಗೆ ಸಹಾಯ ಬೇಕಾದಲ್ಲಿ ಸಂದೇಶ ರವಾನೆ ಮಾಡುವಂತೆ ಕೇಳಿಕೊಂಡಿದ್ದಾರೆ.