ETV Bharat / bharat

ಸಬರಮತಿ ಆಶ್ರಮ: ಭಾರತ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು - Sabarmati Ashram news

ಈ ಆಶ್ರಮವು ಕೇವಲ ಗಾಂಧೀಜಿ ಅಥವಾ ಇತರ ಸತ್ಯಾಗ್ರಹಿಗಳಿಗೆ ಮಾತ್ರ ಆಶ್ರಯ ತಾಣವಾಗಿರಲಿಲ್ಲ. ಬದಲಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖಸ್ಥಾನ ಪಡೆದುಕೊಂಡಿತು. ಇದು ರಾಷ್ಟ್ರೀಯ ಜಾಗೃತಿ ಮತ್ತು ಸಾಮಾಜಿಕ ಬದಲಾವಣೆಯ ಹಲವು ಚಳವಳಿಗಳ ಆರಂಭದ ಕೇಂದ್ರಬಿಂದುವಾಯಿತು.

Sabarmati Ashram
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರ ಬಿಂದು
author img

By

Published : Oct 3, 2021, 10:44 AM IST

ಭಾರತದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ ಮಹಾತ್ಮ ಗಾಂಧೀಜಿ ಮತ್ತು ಸಬರಮತಿ ನದಿಯ ನಡುವೆ ಅನನ್ಯ ಸಂಬಂಧವಿದೆ. ಇದೇ ಕಾರಣಕ್ಕೆ ಗಾಂಧೀಜಿಯನ್ನು ಸಬರಮತಿಯ ಸಂತನೆಂದು ಕರೆಯಲಾಗುತ್ತೆ.

ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗ, ಅವರು ಅಹಮದಾಬಾದ್‌ನಲ್ಲಿ ಆಶ್ರಮ ನಿರ್ಮಿಸಲು ನಿರ್ಧರಿಸಿದರು. ಅದರಂತೆ 1917 ರಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು. ಸಬರಮತಿ ಆಶ್ರಮಕ್ಕಿಂತ ಮುಂಚೆ, ಅವರು ಎರಡು ವರ್ಷಗಳ ಕಾಲ ಕೊಚ್ರಾಬ್ ಆಶ್ರಮದಲ್ಲಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರ ಬಿಂದು

ಗಾಂಧೀಜಿಗೆ ಆಶ್ರಮದ ಬಗ್ಗೆ ಒಂದು ಕಲ್ಪನೆ ಇತ್ತು. ಸಬರಮತಿ ನದಿಯ ದಡದಲ್ಲಿ ನಿರ್ಮಾಣಗೊಂಡ ಈ ಆಶ್ರಮ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿತು. ಅಲ್ಲದೇ ಬಾಪು ಸಬರಮತಿ ಆಶ್ರಮದ ಸ್ಥಳವನ್ನು ತುಂಬಾ ಇಷ್ಟಪಟ್ಟರು.

ಸರಳತೆಯು ಗಾಂಧಿ ಜೀವನಕ್ಕೆ ಸಮಾನಾರ್ಥಕ ಪದದಂತೆ. ಅದೇ ಸಮಯದಲ್ಲಿ ಆಶ್ರಮದಲ್ಲಿ ಸಾಮೂಹಿಕ ಕೆಲಸಗಳಿಗೆ ವಿಶೇಷ ಗಮನ ನೀಡಲಾಯಿತು. ಗಾಂಧಿ ಆಶ್ರಮದ ಪ್ರಮುಖ ಭಾಗವನ್ನು ಹೃದಯಕುಂಜ್ ಎಂದು ಕರೆಯಬಹುದು. ಈ ಹೃದಯ ಕುಂಜ್ ಗಾಂಧಿಯ ವಾಸಸ್ಥಾನವಾಗಿದೆ. ಅದರ ಹೆಸರಿನ ಹಿಂದೆ ಒಂದು ವಿಶೇಷ ಘಟನೆಯಿದೆ.

ಈ ಹೃದಯಕುಂಜ್ ಬಳಿ ಪ್ರಾರ್ಥನಾ ಸಭೆಯ ಸ್ಥಳವಿದೆ. ಗಾಂಧೀಜಿ ಪ್ರಾರ್ಥನೆಗೆ ಆದ್ಯತೆ ನೀಡುತ್ತಿದ್ದರು. ಆಶ್ರಮದ ದಿನಚರಿಯು ಪ್ರಾರ್ಥನೆಯೊಂದಿಗೆ ಆರಂಭವಾಗುತ್ತಿತ್ತು. ಗಾಂಧೀಜಿ ಆ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಆದ್ದರಿಂದ ಅವರನ್ನು ಭೇಟಿ ಮಾಡಲು ದೇಶ ಮತ್ತು ವಿದೇಶಗಳಿಂದ ಅನೇಕರು ಸಬರಮತಿ ಆಶ್ರಮಕ್ಕೆ ಬರುತ್ತಿದ್ದರು. ಆದರೆ, ಆಶ್ರಮದ ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತಿದ್ದವು.

ಈ ಆಶ್ರಮವು ಕೇವಲ ಗಾಂಧೀಜಿ ಅಥವಾ ಇತರ ಸತ್ಯಾಗ್ರಹಿಗಳಿಗೆ ಮಾತ್ರ ಆಶ್ರಯ ತಾಣವಾಗಿರಲಿಲ್ಲ. ಬದಲಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು. ಇದು ರಾಷ್ಟ್ರೀಯ ಜಾಗೃತಿ ಮತ್ತು ಸಾಮಾಜಿಕ ಬದಲಾವಣೆಯ ಹಲವು ಚಳವಳಿಗಳ ಆರಂಭದ ಕೇಂದ್ರಬಿಂದುವಾಯಿತು.

ಪ್ರಸ್ತುತ ಸಬರಮತಿ ಆಶ್ರಮದಲ್ಲಿ 165 ಕಟ್ಟಡಗಳಿವೆ. ಗಾಂಧೀಜಿ ನಿಧನದ ನಂತರ, ಆಶ್ರಮದಲ್ಲಿ 'ನನ್ನ ಜೀವನವೇ ನನ್ನ ಸಂದೇಶ' ಗ್ಯಾಲರಿಯನ್ನು ಸ್ಥಾಪಿಸಲಾಯಿತು. ಈ ಗ್ಯಾಲರಿಯು ಬಾಪು ಅವರ ಬಾಲ್ಯದಿಂದ ಅವರ ಅಂತಿಮ ಪ್ರಯಾಣದವರೆಗಿನ ಜೀವನ ಶೈಲಿಯನ್ನು ಚಿತ್ರಿಸುತ್ತದೆ. ಈ ಆಶ್ರಮ ಸ್ಥಾಪನೆಯ ಮುಖ್ಯ ಉದ್ದೇಶ, ಜನರನ್ನು 'ಆತ್ಮ ನಿರ್ಭರ' ಅಂದರೆ ಸ್ವಾವಲಂಬಿಗಳನ್ನಾಗಿ ಮಾಡುವುದು.

ಸ್ಥಳೀಯ ವಸ್ತುಗಳಿಗೆ ಪ್ರೋತ್ಸಾಹ ನೀಡುವುದು. ಅದೇ ಸಮಯದಲ್ಲಿ ಗಾಂಧಿಯವರ ನಿಧನದ ನಂತರ ಅವರ ನೆನಪಿಗಾಗಿ ಈ ಆಶ್ರಮದಲ್ಲಿ ಬಾಪು ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಗಾಂಧೀಜಿಯ ಕನ್ನಡಕ, ನೀರು ಕುಡಿಯಲು ಬಳಸಿದ ತಾಮ್ರದ ಪಾತ್ರೆ ಮತ್ತು ವಾಕಿಂಗ್ ಸ್ಟಿಕ್ ಜತೆಗೆ ನೂಲುವ ಚಕ್ರದಂತಹ ಸ್ಮರಣಿಕೆಗಳನ್ನು ರಕ್ಷಿಸಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.