ETV Bharat / bharat

ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರ ಬಸ್​ ಅಪಘಾತ.. ದರ್ಶನಕ್ಕೆ ದಾಖಲೆ ಬುಕ್ಕಿಂಗ್​ - ಶಬರಿಮಲೆಗೆ ದಾಖಲೆಯ ಜನ

ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುತ್ತಿದ್ದ ವೇಳೆ ಆದ ಅಪಘಾತದಲ್ಲಿ ಕರ್ನಾಟಕದ ಮಿನಿ ಬಸ್​ ಜಖಂಗೊಂಡಿದೆ. ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾತ್ರೆ ಮುಂದುವರಿಸಿದ್ದಾರೆ. ಅಲ್ಲದೇ, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಭಕ್ತರು ದರ್ಶನಕ್ಕೆ ಬುಕ್ಕಿಂಗ್​ ಮಾಡಿಕೊಂಡಿದ್ದಾರೆ.

accident-in-kerala
ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರ ಬಸ್​ ಅಪಘಾತ
author img

By

Published : Dec 12, 2022, 2:18 PM IST

ಕೋಯಿಕ್ಕೋಡ್(ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಮಿನಿ ಬಸ್​​ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದು, ಕೆಲ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್​​ಗೆ ಗುದ್ದಿದ ಪಿಕಪ್​ ವಾಹನ ಜಖಂಗೊಂಡಿದ್ದು, ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಯಿಕ್ಕೋಡ್​​ನ ವಡಕರ ಕುಂಜಿಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್​ ಎದುರಿನಿಂದ ಬಂದ ಪಿಕಪ್​ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆ ಬಳಿಕ 15 ಪ್ರಯಾಣಿಕರಿಗೆ ಶಬರಿಮಲೆಗೆ ತೆರಳಲು ವಾಹನ ಸೌಕರ್ಯ ಮಾಡಿಕೊಡುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆಗೆ ದಾಖಲೆಯ ಜನ: ಶಬರಿಮಲೆ ದೇವಸ್ಥಾನಕ್ಕೆ ಮುಡಿಕಟ್ಟಿಕೊಂಡು ದಾಖಲೆಯ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಸೋಮವಾರ ಒಂದೇ ದಿನ 1.07 ಲಕ್ಷಕ್ಕೂ ಅಧಿಕ ಜನರು ದರ್ಶನಕ್ಕೆ ಬುಕ್ಕಿಂಗ್​ ಮಾಡಿಕೊಂಡಿದ್ದು, ದಾಖಲೆಯಾಗಿದೆ. ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತರ ಸುರಕ್ಷತೆ ಮತ್ತು ಕಾಲ್ತುಳಿತವನ್ನು ತಪ್ಪಿಸಲು ಬಿಗಿ ಭದ್ರತೆ ನೀಡಲಾಗಿದೆ.

ಭಕ್ತರನ್ನು ಪಂಪಾದಿಂದ ಅಯ್ಯಪ್ಪನ ಸನ್ನಿಧಾನಕ್ಕೆ ತರಲು ನಿಯಂತ್ರಿತ ಹಾಗೂ ವಿಭಾಗೀಯ ಮಾದರಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಕ್ತರ ಹೆಚ್ಚಳದಿಂದಾಗಿ ಆಗುವ ನೂಕುನುಗ್ಗಲನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಸೆಗ್ಮೆಂಟ್ ಸರದಿ ಮಾಡಲಾಗಿದೆ. ಅಂದರೆ ಇಂತಿಷ್ಟು ಜನರನ್ನು ನಿಗದಿತ ಅವಧಿಯೊಳಗೆ ದರ್ಶನ ಪಡೆಯುವಂತೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ಭಕ್ತರಿಗೆ ಲಘು ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ದರ್ಶನ ಸಮಯ ವಿಸ್ತರಣೆ: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಲೆಗೆ ಬರುತ್ತಿರುವ ಕಾರಣ ದರ್ಶನ ಅವಧಿ ನಿಗದಿಗಿಂತಲೂ ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಬರಿಮಲೆ ದರ್ಶನಕ್ಕೆ ಡಿಸೆಂಬರ್ 13 ರಂದು ಸುಮಾರು 77,216 ಮತ್ತು ಡಿಸೆಂಬರ್ 14 ರಂದು 64,617 ಜನರು ಆನ್‌ಲೈನ್‌ನಲ್ಲಿ ಬುಕಿಂಗ್​ ಮಾಡಿಕೊಂಡಿದ್ದರು. ಶನಿವಾರ ಸಂಜೆ 5 ಗಂಟೆಯವರೆಗೆ ಸುಮಾರು 60,000 ಜನರು ಶಬರಿಮಲೆಗೆ ಭೇಟಿ ನೀಡಿದ್ದಾರೆ.

ಓದಿ: ಹಿಂದೂ ಧರ್ಮಕ್ಕೆ ವಾಪಸ್​ ಆದ 80 ಮಂದಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.