ETV Bharat / bharat

Afghanistan Crisis: ಕತಾರ್​ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ ಎಸ್​.ಜೈಶಂಕರ್​​ - ಎಸ್.ಜೈಶಂಕರ್ ಲೇಟೆಸ್ಟ್ ಸುದ್ದಿ

ಅಮೆರಿಕದ ನಂತರ ಕತಾರ್​ಗೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್​.ಜೈಶಂಕರ್ ಅಫ್ಘಾನಿಸ್ತಾನ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಲಾಗಿದೆ.

S Jaishankar holds talks on Afghanistan with Qatari counterpart in Doha
Afghanistan Crisis: ಕತಾರ್​ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ ಎಸ್​.ಜೈಶಂಕರ್​​
author img

By

Published : Aug 21, 2021, 3:40 AM IST

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕತಾರ್​ನ ವಿದೇಶಾಂಗ ಸಚಿವರಾದ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್​​ ಅಲ್ ಥಾನಿಯೊಂದಿಗೆ ಅಫ್ಘಾನಿಸ್ತಾನದ ಪ್ರಸ್ತುತ ಬೆಳವಣಿಗೆಗಳ ಕುರಿತು ಶುಕ್ರವಾರ ಮಾತುಕತೆ ನಡೆಸಿದ್ದಾರೆ.

ಅಮೆರಿಕದಿಂದ ಭಾರತಕ್ಕೆ ಹಿಂದಿರುವ ವೇಳೆ ಕತಾರ್​ಗೆ ತೆರಳಿದ್ದ ಅವರು ಕೆಲವೊಂದು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಕತಾರ್ ಆಫ್ಘನ್ ಶಾಂತಿ ಮಾತುಕತೆಗೆ ವೇದಿಕೆಯಾಗಿದ್ದು, ಅತ್ಯಂತ ಪ್ರಮುಖ ದೇಶವಾಗಿ ಹೊರಹೊಮ್ಮಿದೆ.

ಕತಾರ್ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಎಸ್​.ಜೈಶಂಕರ್ ಕತಾರ್​ನ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್​ ಅಲ್ ಥಾನಿ ಅವರನ್ನು ಭೇಟಿಯಾಗಿದ್ದೇನೆ. ಅಫ್ಘಾನಿಸ್ತಾನದ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಕತಾರ್​ನ ವಿಶೇಷ ಪ್ರತಿನಿಧಿ ಮುತ್ಲಾಕ್ ಬಿನ್ ಮಜೀದ್ ಅಲ್-ಕಹ್ತಾನಿ ಭಾರತಕ್ಕೆ ಭೇಟಿ ನೀಡಿದ್ದು, ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: ಸಿಆರ್​ಪಿಎಫ್ ಬಂಕರ್​ ಮೇಲೆ ದಾಳಿಗೆ ಉಗ್ರರ ಯತ್ನ: ಅದೃಷ್ಟವಶಾತ್ ಸಿಡಿಯದ ​ಗ್ರೆನೇಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.