ಪಣಜಿ(ಗೋವಾ): ಕೊರಿಯನ್ ಯೂಟ್ಯೂಬರ್ ಮೇಲೆ ಮಹಾರಾಷ್ಟ್ರದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಮಾಸುವ ಮುನ್ನವೇ, ಗೋವಾದಲ್ಲಿ ರಷ್ಯಾದ ಮಹಿಳಾ ಪ್ರಜೆಯ ಮೇಲೆ ಇಬ್ಬರು ಅತ್ಯಾಚಾರ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಆರೋಪಿಗಳು ನೇಪಾಳದವರಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಹೋಟೆಲ್‌ನಲ್ಲಿ ರೂಮ್ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದ ನೇಪಾಳದ ಬರ್ದಿಯಾ ಮೂಲದ ಸಕಿಲ್ ಅನ್ಸಾರಿ ಅಲಿಯಾಸ್ ಸಲ್ಮಾನ್(23) ಮತ್ತು ಸಾಹಿಮುದ್ದೀನ್ ಅನ್ಸಾರಿ (22) ಬಂಧಿತ ಆರೋಪಿಗಳು.
ಭಾರತ ಪ್ರವಾಸದಲ್ಲಿರುವ ರಷ್ಯಾದ ಮಹಿಳೆ ಉತ್ತರ ಗೋವಾದಲ್ಲಿರುವ ಕ್ಯಾಲಂಗುಟ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸರ್ವೀಸ್ ನೀಡುವ ನೆಪದಲ್ಲಿ ರೂಮಿನೊಳಗೆ ಪ್ರವೇಶಿಸಿದ ಆರೋಪಿಗಳು ಆಕೆಯ ಜೊತೆಗೆ ಒತ್ತಾಯಪೂರ್ವಕವಾಗಿ ಸಂಭೋಗ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಮಹಿಳೆ ಇಬ್ಬರ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಕೇಸ್ ಪಡೆದ ಗೋವಾ ಪೊಲೀಸರು ಹೋಟೆಲ್ನ ಇಬ್ಬರು ನೇಪಾಳಿ ಸಿಬ್ಬಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಓದಿ: ವಿಡಿಯೋ ಸ್ಟ್ರೀಮಿಂಗ್ ವೇಳೆ ಕೊರಿಯನ್ ಯುವತಿಯೊಂದಿಗೆ ಅಸಭ್ಯ ವರ್ತನೆ