ಮಂಡಿ(ಹಿಮಾಚಲ ಪ್ರದೇಶ): ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ಮಂಡಿ ಪೊಲೀಸರು ಆರಂಭಿಸಿರುವ ಅಭಿಯಾನ ಮುಂದುವರಿದಿದ್ದು, ಜಿಲ್ಲೆಯಲ್ಲಿ ಭಾನುವಾರ 2 ಮಾದಕ ವಸ್ತು ಸಾಗಾಟ ಪ್ರಕರಣಗಳು ವರದಿಯಾಗಿವೆ. ಮೊದಲ ಪ್ರಕರಣದಲ್ಲಿ ಆಟಿ ಪೊಲೀಸ್ ಠಾಣೆಯ ತಂಡ ಭಾರಿ ಪ್ರಮಾಣದ ಚರಸ್ ಸಾಗಿಸುತ್ತಿದ್ದ ರಷ್ಯಾ ಮೂಲದ ಮಹಿಳೆಯನ್ನು ಮಂಡಿಯಲ್ಲಿ ಬಂಧಿಸಿದ್ದಾರೆ. ಎರಡನೇ ಪ್ರಕರಣದಲ್ಲಿ ಧನೋಟು ಪೊಲೀಸ್ ಠಾಣೆಯ ತಂಡ ಚರಸ್ ಸಹಿತ ಯುವಕನೊಬ್ಬನನ್ನೂ ಬಂಧಿಸಲಾಗಿದೆ.
ಆಟಿ ಠಾಣೆ ಪೊಲೀಸರ ತಂಡ ಆಟಿ ಬಳಿ ವಾಹನಗಳನ್ನು ಪರಿಶೀಲನೆ ಮಾಡತೊಡಗಿತ್ತು.ಈ ವೇಳೆ ವೇಳೆ ರಷ್ಯಾದ ಮಹಿಳೆಯಿಂದ 2 ಕೆಜಿ 412 ಗ್ರಾಂ ಚರಸ್ ವಶಪಡಿಸಿಕೊಂಡಿದೆ. ಚರಸ್‌ನೊಂದಿಗೆ ಸಿಕ್ಕಿಬಿದ್ದ ಮಹಿಳೆಯನ್ನು ರಷ್ಯಾದ ಮಾಸ್ಕೋ ನಿವಾಸಿ ಓಲ್ಗಾ ಬ್ರಶ್ಕೋವಾ (49 ವರ್ಷ) ಎಂದು ಗುರುತಿಸಲಾಗಿದೆ.
ರಷ್ಯಾದ ಈ ಮಹಿಳೆ ಇಷ್ಟು ದೊಡ್ಡ ಪ್ರಮಾಣದ ಚರಸ್ ಅನ್ನು ಎಲ್ಲಿಂದ ತಂದಿದ್ದಾರೆ ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಮಂಡಿ ಜಿಲ್ಲೆಯ ವ್ಯಾಪ್ತಿಗೆ ಬರುವ ಧನೋಟು ಪೊಲೀಸ್ ಠಾಣೆಯ ತಂಡ ಜಿಂದ್ ಹರಿಯಾಣದಲ್ಲಿ ವಾಸಿಸುತ್ತಿದ್ದ ಯುವಕನನ್ನು 412 ಗ್ರಾಂ ಚರಸ್‌ನೊಂದಿಗೆ ಬಂಧಿಸಿದೆ. ಪೊಲೀಸರು ಯುವಕನನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಂಡಿ ಎಸ್ಪಿ ಶಾಲಿನಿ ಅಗ್ನಿಹೋತ್ರಿ ಎರಡೂ ಪ್ರಕರಣಗಳನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ವಿದೇಶಿ ಮಾದಕವಸ್ತು ದಂಧೆಕೋರರ ಬಂಧನ.. 1.09 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ