ETV Bharat / bharat

ಜೆಇಇ ಪರೀಕ್ಷಾ ಸಾಫ್ಟ್‌ವೇರ್ ಹ್ಯಾಕ್: ರಷ್ಯಾದ ಹ್ಯಾಕರ್‌ಗೆ ಜಾಮೀನು - ರಷ್ಯಾದ ಹ್ಯಾಕರ್‌ಗೆ ಜಾಮೀನು

ಜೆಇಇ ಪರೀಕ್ಷಾ ಸಾಫ್ಟ್‌ವೇರ್ ಹ್ಯಾಕ್ ಮಾಡಿದ ಆರೋಪದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿರುವ ರಷ್ಯಾದ ಪ್ರಜೆ ಮಿಖಾಯಿಲ್ ಶಾರ್ಗೆನ್‌ಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Nov 2, 2022, 6:22 PM IST

ನವದೆಹಲಿ: 800ಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಪ್ರಯೋಜನವಾಗಿದ್ದ ಜೆಇಇ ಪರೀಕ್ಷಾ ಸಾಫ್ಟ್‌ವೇರ್ ಹ್ಯಾಕ್ ಮಾಡಿದ ಆರೋಪದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ರಷ್ಯಾದ ಪ್ರಜೆ ಮಿಖಾಯಿಲ್ ಶಾರ್ಗೆನ್‌ಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ (2021) ಅಕ್ಟೋಬರ್ 3 ರಂದು ಬಂಧಿತನಾಗಿದ್ದ ಶಾರ್ಗೆನ್(25) ಜೆಇಇ (ಮುಖ್ಯ)-2021 ಪರೀಕ್ಷೆಯನ್ನು ನಡೆಸುವ iLeon ಸಾಫ್ಟ್‌ವೇರ್ ಅನ್ನು ಹ್ಯಾಕ್ ಮಾಡಿದ್ದ ಮತ್ತು ಪರೀಕ್ಷೆಯ ಸಮಯದಲ್ಲಿ ಶಂಕಿತ ಅಭ್ಯರ್ಥಿಗಳ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡಲು ಇತರ ಆರೋಪಿಗಳಿಗೆ ಸಹಾಯ ಮಾಡಿದ್ದನು ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಬ್ಯಾಂಕ್ ಅಕೌಂಟ್​ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಎಗರಿಸಿದ್ದ ಮೂವರ ಬಂಧನ

ಅಭ್ಯರ್ಥಿಗಳು ಮತ್ತು ಅವರ ಪೋಷಕರನ್ನು ನೇರವಾಗಿ ಸಂಪರ್ಕಿಸಿ ಹಣ ಮತ್ತು ದಾಖಲೆಗಳನ್ನು ಪಡೆದವರು ಸೇರಿದಂತೆ ಪ್ರಕರಣದ ಇತರ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ವಿಶೇಷ ಸಿಬಿಐ ನ್ಯಾಯಾಲಯವು ಗಮನಿಸಿದೆ. ಸಾಫ್ಟ್‌ವೇರ್ ಹ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಶಾರ್ಗೆನ್‌ನ ಪಾತ್ರವು ಇತರ ಆರೋಪಿಗಳಿಗೆ ಸರಿಸಮಾನವಾಗಿಲ್ಲ ಎಂಬ ಸಿಬಿಐನ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಷರತ್ತು ಬದ್ಧ ಜಾಮೀನು: ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಮತ್ತು ಸಹ - ಆರೋಪಿಗಳೊಂದಿಗೆ ಅರ್ಜಿದಾರರ ಕೆಲವು ಮೊಬೈಲ್ ಚಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಸಿಬಿಐ ವಾದದಲ್ಲಿ ಹುರುಳಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಶ್ಯೂರಿಟಿ ಮತ್ತು ಜಾಮೀನು ಷರತ್ತುಗಳೊಂದಿಗೆ ಶಾರ್ಗೆನ್ ಅವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.

ಅಕ್ಟೋಬರ್ 3 ರಂದು ಖಜಕಿಸ್ತಾನದ ಅಲ್ಮಾಟಿಯಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಶಾರ್ಗೆನ್ ಅವರನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಏಜೆನ್ಸಿಯು ಅಫಿನಿಟಿ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಮೂವರು ನಿರ್ದೇಶಕರಾದ ಸಿದ್ಧಾರ್ಥ್ ಕೃಷ್ಣ, ವಿಶ್ವಂಭರ್ ಮಣಿ ತ್ರಿಪಾಠಿ ಮತ್ತು ಗೋವಿಂದ್ ವರ್ಷ್ನಿ, ಜೊತೆಗೆ ಇತರ ಸಹವರ್ತಿಗಳ ವಿರುದ್ಧ ಸಾಫ್ಟ್‌ವೇರ್ ಹ್ಯಾಕ್ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.

ಮೂವರು ನಿರ್ದೇಶಕರು, ಇತರ ಸಹವರ್ತಿಗಳೊಂದಿಗೆ ಪಿತೂರಿ ನಡೆಸಿ, ಜೆಇಇ(ಮೇನ್ಸ್)ನ ಆನ್‌ಲೈನ್ ಪರೀಕ್ಷೆ ದುರ್ಬಳಕೆ ಮಾಡುತ್ತಿದ್ದಾರೆ ಮತ್ತು ಬೃಹತ್ ಮೊತ್ತದ ವಿನಿಮಯಕ್ಕಾಗಿ ಉನ್ನತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಭದ್ರತೆಗಾಗಿ ದೇಶದ ವಿವಿಧ ಭಾಗಗಳಲ್ಲಿ 10 ಮತ್ತು 12 ನೇ ತರಗತಿಯ ಅಂಕಪಟ್ಟಿಗಳು, ಬಳಕೆದಾರ ಐಡಿಗಳು, ಪಾಸ್‌ವರ್ಡ್‌ಗಳು ಮತ್ತು ಚೆಕ್‌ಗಳನ್ನು ಪಡೆಯುತ್ತಿದ್ದರು ಮತ್ತು ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ: ಫಲಿತಾಂಶ ನೋಡಲು ನೇರ ಲಿಂಕ್ ಇಲ್ಲಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.