ETV Bharat / bharat

'ಪರಸ್ಪರ ಪ್ರೀತಿಸಿ, ಯುದ್ಧ ಕೈಬಿಡಿ': ಹಿಂದೂ ಪದ್ಧತಿಯಂತೆ ಮದ್ವೆಯಾದ ರಷ್ಯಾ-ಉಕ್ರೇನ್​ ಜೋಡಿಯ ಮನವಿ

author img

By

Published : Sep 6, 2022, 7:19 AM IST

Updated : Sep 6, 2022, 8:03 AM IST

ಉಕ್ರೇನ್​​-ರಷ್ಯಾ ಜೋಡಿಯೊಂದು ಭಾರತದ ಹಿಮಾಚಲ ಪ್ರದೇಶದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿಶೇಷ ಮನವಿ ಮಾಡಿಕೊಂಡಿದ್ದಾರೆ.

Ukrainian woman marriage
Ukrainian woman marriage

ಧರ್ಮಶಾಲಾ(ಹಿಮಾಚಲ ಪ್ರದೇಶ): ಕಳೆದ ಫೆಬ್ರವರಿ ತಿಂಗಳಿಂದ ರಷ್ಯಾ-ಉಕ್ರೇನ್​ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಉಭಯ ದೇಶಗಳ ಮಿಲಿಟರಿ ಸಿಬ್ಬಂದಿ ಹಾಗು ಉಕ್ರೇನ್‌ನ ಸಾಕಷ್ಟು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ದೊಡ್ಡ ಸಂಖ್ಯೆಯ ಜನರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ರಷ್ಯಾದಲ್ಲಿ ಹುಟ್ಟಿ ಬೆಳೆದ ಯುವಕ ಹಾಗೂ ಉಕ್ರೇನ್​ನಲ್ಲಿ ವಾಸವಿದ್ದ ಯುವತಿ ಭಾರತಕ್ಕೆ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಈ ವಿಶೇಷ ಕಲ್ಯಾಣ ನಡೆಯಿತು.

ಹಿಂದೂ ಪದ್ಧತಿಯಂತೆ ಮದ್ವೆಯಾದ ರಷ್ಯಾ-ಉಕ್ರೇನ್​ ಜೋಡಿ

ಧರ್ಮಶಾಲಾದಲ್ಲಿ ಉಕ್ರೇನ್​​ ಯುವತಿ ಅಲೋನಾ ಬುರ್ಮಾಕ್​​(28) ಹಾಗೂ ರಷ್ಯಾದ ಸೆರ್ಜಿ ನೊವೆಕಿನ್​(37) ವಿವಾಹವಾದರು. ಭಾರತದ ವಿಶೇಷ ವಿವಾಹ ಕಾಯ್ದೆಯ ಅನುಸಾರ, ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಬಳಿಕ ಮಾತನಾಡುತ್ತಾ, 'ಪರಸ್ಪರ ಪ್ರೀತಿ ಮಾಡಿ, ಯುದ್ಧ ಬೇಡ' ಎಂದು ಉಕ್ರೇನ್​ ಹಾಗೂ ರಷ್ಯಾ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಆಫ್ಘಾನ್​ ವಧು-ಫ್ರಾನ್ಸ್​​​ ವರನಿಗೂ ಭಾರತದಲ್ಲಿ ಮದುವೆ... ದೆಹಲಿ ಹೈಕೋರ್ಟ್​​ನಿಂದ ಈ ಆದೇಶ!

"ಕಳೆದ ಆರು ವರ್ಷಗಳಿಂದಲೂ ಇಸ್ರೇಲ್​​ನಲ್ಲಿ ಒಟ್ಟಿಗೆ ವಾಸವಿದ್ದೇವೆ. ನಾವು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದೇವೆ. ರಷ್ಯಾ-ಉಕ್ರೇನ್​​ ಒಂದೇ ದೇಶ. ಅವರೆಲ್ಲರೂ ಸಹೋದರರಂತೆ ಬಾಳಬೇಕು. ಪರಸ್ಪರ ಪ್ರೀತಿಸಬೇಕೇ ಹೊರತು ಯುದ್ಧ ಮಾಡುವುದಲ್ಲ. ಹಿಂಸಾಚಾರ ಒಳ್ಳೆಯದಲ್ಲ" ಎಂದರು.

ಧರ್ಮಶಾಲಾ ಎಸ್​​​ಡಿಎಂ ಶಿಲ್ಪಾ ಬಿಕ್ತಾ ಮಾತನಾಡಿ, "ಭಾರತದ ವಿಶೇಷ ವಿವಾಹ ಕಾಯ್ದೆಯಡಿ ಪ್ರತಿ ವರ್ಷ ಶೇ. 40ರಷ್ಟು ಮದುವೆ ನೋಂದಣಿಯಾಗುತ್ತವೆ. ನಿನ್ನೆ ಕೂಡ ಅಂತಹದ್ದೊಂದು ಮದುವೆ ನಡೆಯಿತು. ಉಕ್ರೇನ್​​ ಹಾಗೂ ರಷ್ಯಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು" ಎಂದು ತಿಳಿಸಿದರು.

Last Updated : Sep 6, 2022, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.