ETV Bharat / bharat

ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರುಪಾಯಿ; ಸೆನ್ಸೆಕ್ಸ್‌ 700 ಅಂಕ ಇಳಿಕೆ! - ಸೆನ್ಸೆಕ್ಸ್‌

ಇಂದು ಮುಂಬೈ ಷೇರು ಮಾರುಕಟ್ಟೆ ವ್ಯವಹಾರ ಆರಂಭವಾಗುತ್ತಿದ್ದಂತೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 700 ಅಂಕಗಳಷ್ಟು ಇಳಿಕ ಕಂಡಿತು. ಇದೇ ವೇಳೆ ಡಾಲರ್‌ ಎದುರು ರುಪಾಯಿ ಮೌಲ್ಯವೂ ಸಾರ್ವಕಾಲಿಕ ಹಿನ್ನೆಡೆ ಅನುಭವಿಸಿದೆ.

ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
author img

By

Published : May 9, 2022, 11:18 AM IST

ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಇಂದು ಬೆಳಗ್ಗೆ ವ್ಯವಹಾರ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ ಕಂಡಿತು. ಇದೇ ವೇಳೆ ರುಪಾಯಿ ಮೌಲ್ಯವೂ ಸಾರ್ವಕಾಲಿಕವಾಗಿ ಕೆಳಗಿಳಿಯಿತು. ಶಾಂಘೈನಲ್ಲಿ ವಿಧಿಸಲಾಗಿರುವ ಕೋವಿಡ್‌-19 ಕಠಿಣ ನಿರ್ಬಂಧಗಳು ಚೀನಾದ ಆರ್ಥಿಕತೆಯ ಮೇಲೆ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರುವ ಆತಂಕದಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಷೇರು ಮೌಲ್ಯ ಗಣನೀಯ ಕುಸಿದಿದೆ.

ಸದ್ಯ, ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್‌ ಶೇ 1.34 ರಷ್ಟು ಅಥವಾ 218 ಅಂಕ ಕುಸಿದು 16,192ರಲ್ಲಿ ವ್ಯವಹಾರ ನಡೆಸುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್‌ ಶೇ 1.24ರ ಅಥವಾ 732 ಅಂಕ ಕುಸಿದು 54,099 ರಲ್ಲಿ ವಹಿವಾಟು ನಡೆಸುತ್ತಿದೆ.

ಯಾರಿಗೆ ನಷ್ಟ?: ನಿಫ್ಟಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು, ಲೋಹ, ಇಂಧನ ಉತ್ಪಾದಕ- ಮಾರಾಟ ಕಂಪನಿಗಳ ಷೇರುಗಳು ಶೇ 2ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದವು.

ಕುಸಿದ ರುಪಾಯಿ: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಈಗ 77.42 ರಷ್ಟಿದೆ. ಇದು ಸಾರ್ವಕಾಲಿಕ ಕುಸಿತ ಎಂದೇ ಹೇಳಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೋವಿಡ್ ಭೀತಿ: 3,207 ಹೊಸ ಸೋಂಕಿತರು ಪತ್ತೆ, 29 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.