ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಯುಎಸ್ ಫೆಡರಲ್ ರಿಸರ್ವ್ ಮತ್ತೊಂದು ಹಂತದ ಪಾಲಿಸಿ ರೇಟ್ಗಳನ್ನು ಹೆಚ್ಚಿಸಿದ ನಂತರ ಜಾಗತಿಕವಾಗಿ ದುರ್ಬಲ ಆರ್ಥಿಕ ಸೂಚನೆಗಳ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಭಾರತೀಯ ಶೇರು ಬೆಲೆಗಳು ಸ್ವಲ್ಪಮಟ್ಟಿಗೆ ಕುಸಿದವು.
ಬೆಳಗ್ಗೆ 9.33 ಕ್ಕೆ, ಸೆನ್ಸೆಕ್ಸ್ 152.82 ಪಾಯಿಂಟ್ ಅಥವಾ 0.26 ರಷ್ಟು ಇಳಿಕೆಯಾಗಿ 59,303.96 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 46.40 ಪಾಯಿಂಟ್ ಅಥವಾ 0.26 ರಷ್ಟು ಇಳಿಕೆಯಾಗಿ 17,671.95 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿತು.
ಪ್ರಸ್ತುತ ಜಾಗತಿಕ ಅಪಾಯದ ಸನ್ನಿವೇಶದಲ್ಲಿ ಭಾರತದ ಉತ್ತಮ ಪ್ರದರ್ಶನವು ಮುಂದುವರಿಯುತ್ತದೆಯೇ ಎಂಬುದು ಭಾರತದ ಮಾರುಕಟ್ಟೆಯ ದೃಷ್ಟಿಕೋನದಿಂದ ಈಗಿನ ದೊಡ್ಡ ಪ್ರಶ್ನೆಯಾಗಿದೆ. ಹೂಡಿಕೆದಾರರು ಆಶಾವಾದಿಗಳಾಗಿರಲಿ. ಆದರೆ ಭಾರತದ ಆರ್ಥಿಕ ಸ್ಥಿತಿಯ ಮೌಲ್ಯಮಾಪನಗಳು ಮೇಲ್ಮಟ್ಟದಲ್ಲಿರುವುದರಿಂದ ಹೂಡಿಕೆದಾರರು ಜಾಗರೂಕರಾಗಿರಬೇಕು ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಸರ್ವಿಸಸ್ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಹಣಕಾಸು, ಬಂಡವಾಳ ಸರಕುಗಳು, ಆಯ್ದ ಆಟೋಗಳು, ಟೆಲಿಕಾಂ ಮತ್ತು ನಿರ್ಮಾಣ ಸಂಬಂಧಿತ ಶೇರುಗಳನ್ನು ಕುಸಿತದ ಆಧಾರದ ಮೇಲೆ ಖರೀದಿಸಬಹುದು ಎಂದು ವಿಜಯಕುಮಾರ್ ಹೇಳಿದರು.
ಏತನ್ಮಧ್ಯೆ ಭಾರತೀಯ ಕರೆನ್ಸಿ ರೂಪಾಯಿಯು ಭಾವನಾತ್ಮಕವಾಗಿ ನಿರ್ಣಾಯಕವಾದ 80ರ ಗಡಿಯನ್ನು ಮತ್ತೊಮ್ಮೆ ದಾಟಿದೆ. ಇದರ ಹಿಂದಿನ ದಿನದ ಮುಕ್ತಾಯದ 79.97 ಕ್ಕೆ ಹೋಲಿಸಿದರೆ ಯುಎಸ್ ಡಾಲರ್ ವಿರುದ್ಧ 80.44 ರ ಹೊಸ ಸಾರ್ವಕಾಲಿಕ ಮಟ್ಟ 80.44 ಅನ್ನು ರೂಪಾಯಿ ಇಂದು ಮುಟ್ಟಿದೆ. ಯುಎಸ್ ಡಾಲರ್ ಸೂಚ್ಯಂಕ ಪ್ರಸ್ತುತ ಪ್ರಬಲವಾಗಿರುವುದರಿಂದ ರೂಪಾಯಿ ದರದಲ್ಲಿ ಈ ತೀವ್ರ ಇಳಿಕೆ ಕಂಡುಬಂದಿದೆ.
ಯುಸ್ನಲ್ಲಿನ ಪ್ರಮುಖ ಪಾಲಿಸಿ ರೇಟ್ ಅನ್ನು 75 ಬೇಸಿಸ್ ಪಾಯಿಂಟ್‌ಗಳಿಂದ 3.0-3.25 ಶೇಕಡಾಕ್ಕೆ ಏರಿಸಲಾಗಿದೆ. ಇದು ಅದೇ ಪ್ರಮಾಣದ ಮೂರನೇ ಸತತ ಏರಿಕೆಯಾಗಿದೆ.
ಇದನ್ನೂ ಓದಿ: ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ