ನವದೆಹಲಿ: ಭಾರತದ ವಿದ್ಯಮಾನಗಳ ಬಗ್ಗೆ ಸಮರ್ಥ ವಾದ ಮಂಡಿಸಲು ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ. 1987ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ರುಚಿರಾ ಕಾಂಬೋಜ್ ಅವರು ಪ್ರಸ್ತುತ ಭೂತಾನ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಟಿ.ಎಸ್.ತಿರುಮೂರ್ತಿ ವಿಶ್ವಸಂಸ್ಥೆಯ ಮಹತ್ವದ ಹುದ್ದೆಯಲ್ಲಿದ್ದರು.
ಇದನ್ನೂ ಓದಿ: ಬಿಜೆಪಿಗೆ ಶಿವಸೇನೆ ತಿರುಮಂತ್ರ: 106 ಕಮಲ ಶಾಸಕರು ಗುಜರಾತ್ಗೆ ಶಿಫ್ಟ್, ಅಖಾಡಕ್ಕಿಳಿದ ಅಮಿತ್ ಶಾ-ನಡ್ಡಾ