ETV Bharat / bharat

ಕಾಂಗ್ರೆಸ್ ಪ್ರಧಾನ ಕಚೇರಿ, ಸೋನಿಯಾ ಗಾಂಧಿ ನಿವಾಸದ ಬಾಡಿಗೆ ಪಾವತಿಸಿಲ್ಲ: RTI ನಿಂದ ಬಹಿರಂಗ - rent of Sonia Gandhi residence

ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಾವು ಬಳಸುತ್ತಿರುವ ನಿವಾಸಗಳ ಬಾಡಿಗೆ ಪಾವತಿಸಿಲ್ಲ.

Sonia Gandhi
Sonia Gandhi
author img

By

Published : Feb 10, 2022, 7:49 PM IST

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಚೇರಿಯ ಬಾಡಿಗೆ ಹಾಗೂ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಾವು ಬಳಸುತ್ತಿರುವ ನಿವಾಸಗಳ ಬಾಡಿಗೆಯನ್ನು ಪಾವತಿಸಿಲ್ಲ ಎಂಬುದು ಆರ್‌ಟಿಐ ನೀಡಿದ ಉತ್ತರದಿಂದ ಬಹಿರಂಗವಾಗಿದೆ.

ಕಾರ್ಯಕರ್ತ ಸುಜಿತ್ ಪಟೇಲ್ ಸಲ್ಲಿಸಿದ ಅರ್ಜಿಗೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ. ಇದರ ಪ್ರಕಾರ, ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯು 12,69,902 ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಡಿಸೆಂಬರ್ 2012 ರಲ್ಲಿ ಕೊನೆಯ ಬಾರಿಗೆ ಬಾಡಿಗೆ ಕಟ್ಟಲಾಗಿದೆ.

ಹಾಗೆಯೇ, 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದ ಮೇಲೆ 4,610 ರೂ. ಬಾಡಿಗೆ ಬಾಕಿ ಇದೆ ಮತ್ತು ಕೊನೆಯ ಬಾಡಿಗೆಯನ್ನು ಸೆಪ್ಟೆಂಬರ್ 2020 ರಲ್ಲಿ ಪಾವತಿಸಲಾಗಿದೆ. ಇನ್ನು ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಅವರು ವಾಸವಿರುವ ದೆಹಲಿಯ ಚಾಣಕ್ಯಪುರಿಯಲ್ಲಿರುವ ಬಂಗಲೆಯ ಮೇಲೆ 5,07,911 ರೂ. ಬಾಡಿಗೆ ಉಳಿದುಕೊಂಡಿದ್ದು, ಆಗಸ್ಟ್ 2013 ರಲ್ಲಿ ಕೊನೆಯದಾಗಿ ಬಾಡಿಗೆ ಕಟ್ಟಲಾಗಿತ್ತು.

ಇದನ್ನೂ ಓದಿ: ಕಮಲ ಬಿಟ್ಟು ಕಾಂಗ್ರೆಸ್​ ಸೇರಿದ ಬಾಲಿವುಡ್​ ಬ್ಯೂಟಿ: ರಾಜಕೀಯ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟ ನಟಿಯ ಪಲಾಯನ

ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ಸ್ವಂತ ಕಚೇರಿ ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ. 2010ರ ಜೂನ್‌ನಲ್ಲಿ 9-ಎ ರೋಸ್ ಅವೆನ್ಯೂದಲ್ಲಿ ಪಕ್ಷದ ಕಚೇರಿ ನಿರ್ಮಿಸಲು ಕಾಂಗ್ರೆಸ್‌ಗೆ ಭೂಮಿ ಮಂಜೂರು ಮಾಡಲಾಗಿತ್ತು.

ಕಾಂಗ್ರೆಸ್ ಪಕ್ಷವು 2013 ರ ವೇಳೆಗೆ ಅಕ್ಬರ್ ರಸ್ತೆಯ ಕಚೇರಿ ಮತ್ತು ಒಂದೆರಡು ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು, ಆದರೆ ಪಕ್ಷವು ಇಲ್ಲಿಯವರೆಗೆ ಹಲವಾರು ಬಾರಿ ಅವಧಿ ವಿಸ್ತರಣೆಗಳನ್ನು ತೆಗೆದುಕೊಂಡಿದೆ. ಜುಲೈ 2020 ರಲ್ಲಿ, ಸರ್ಕಾರವು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಲೋಧಿ ರಸ್ತೆಯ ನಿವಾಸವನ್ನು ಒಂದು ತಿಂಗಳ ಅವಧಿಯಲ್ಲಿ ಖಾಲಿ ಮಾಡುವಂತೆ ನೋಟಿಸ್ ಕೂಡ ಕಳುಹಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.