ETV Bharat / bharat

ದೇಶದ ಆರ್ಥಿಕತೆ, ನಿರುದ್ಯೋಗದ ಬಗ್ಗೆ ಆರ್​ಎಸ್​ಎಸ್​​ ಕಳವಳ - ದೇಶದಲ್ಲಿ ಆರ್ಥಿಕ ಹಿಂಜರಿಕೆ

ದೇಶದಲ್ಲಿ ಆರ್ಥಿಕ ಹಿಂಜರಿಕೆ, ನಿರುದ್ಯೋಗ ಸಮಸ್ಯೆಯ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಆರ್​ಎಸ್​ಎಸ್​ ಕೂಡ ಈ ಬಗ್ಗೆ ಧ್ವನಿ ಎತ್ತಿದೆ.

rss-expresses-concern-over-rising-income-inequality
ನಿರುದ್ಯೋಗದ ಬಗ್ಗೆ ಆರ್​ಎಸ್​ಎಸ್​​ ಕಳವಳ
author img

By

Published : Oct 3, 2022, 2:10 PM IST

ನವದೆಹಲಿ: ದೇಶದ ಆರ್ಥಿಕತೆ ಮತ್ತು ನಿರುದ್ಯೋಗದ ಬಗ್ಗೆ ಆರ್‌ಎಸ್‌ಎಸ್ ಆತಂಕ ವ್ಯಕ್ತಡಿಸಿದೆ. ಈ ಬಗ್ಗೆ ಮಾತನಾಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ "ನಮ್ಮ ಮುಂದಿನ ರಾಕ್ಷಸ ತರಹದ ಸವಾಲು" ಎಂದು ಪ್ರತಿಪಾದಿಸಿದ್ದಾರೆ.

ಇದಲ್ಲದೇ, ಕೇಂದ್ರ ಸರ್ಕಾರ ಆರ್ಥಿಕತೆ ಉತ್ತೇಜನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ್ಮನಿರ್ಭರದಡಿ ಎಫ್‌ಪಿಒ, ಜನ್​ಧನ್ ಮತ್ತು ಆರೋಗ್ಯ ರಕ್ಷಣೆ ಮತ್ತು ಡಿಜಿಟಲ್ ಕ್ರಾಂತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಇದರ ತಡೆಗೆ ಮಹತ್ವದ ಹೆಜ್ಜೆಗಳು ಎಂದು ಬಣ್ಣಿಸಿದ್ದಾರೆ.

ಆರ್​ಎಸ್​ಎಸ್​ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್​ ಏರ್ಪಡಿಸಿದ್ದ ವೆಬಿನಾರ್​ನಲ್ಲಿ ಅವರು ಮಾತನಾಡಿ, ದೇಶದ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. 23 ಕೋಟಿ ಜನರು ದಿನಕ್ಕೆ 375 ರೂ.ಗಿಂತ ಕಡಿಮೆ ಆದಾಯವನ್ನು ಪಡೆಯುತ್ತಿದ್ದಾರೆ ಎಂಬುದು ನೋವಿನ ಸಂಗತಿಯಾಗಿದೆ. ಬಡತನ ನಮ್ಮ ಮುಂದಿರುವ ರಾಕ್ಷಸಿ ಸವಾಲಾಗಿದೆ. ಅದನ್ನು ಮೆಟ್ಟಿ ನಿಲ್ಲುವುದೇ ನಮ್ಮ ಗುರಿಯಾಗಬೇಕು ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರಗಳ ದೋಷಯುಕ್ತ ಆರ್ಥಿಕ ನೀತಿಗಳು ಪ್ರಸ್ತುತ ಆರ್ಥಿಕತೆಯ ಹಿಂಜತರಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಹೊಸಬಾಳೆ ಅವರು, ಬಡತನದ ಜೊತೆಗೆ, ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಯಕರು ಹೇಳಿದರು.

ಓದಿ: ಸಾಕಪ್ಪಾ ಸಾಕು.. ನಮಗೊಂದು ಆಯೋಗ ರಚಿಸಿ.. ಪತ್ನಿಯರ ಕಾಟಕ್ಕೆ ಬೇಸತ್ತು ಪುರುಷರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.