ETV Bharat / bharat

ಆರ್​​ಎಸ್​ಎಸ್​ನಿಂದ ದೇಶದ ಸಾಂಸ್ಥಿಕ ಸಮತೋಲನ ನಾಶವಾಗಿದೆ: ರಾಹುಲ್ ಗಾಂಧಿ - ಆರ್​​ಎಸ್​ಎಸ್ ದೇಶದ ಸಾಂಸ್ಥಿಕ ಸಮತೋಲನ ನಾಶ

ತಮಿಳುನಾಡಿನಲ್ಲಿ ಚುನಾವಣೆ ರಂಗೇರುತ್ತಿದ್ದು, ಕಾಲೇಜ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿ ಮಾತನಾಡಿದರು.

Rahul Gandhi
Rahul Gandhi
author img

By

Published : Feb 27, 2021, 5:12 PM IST

ತೂತುಕುಡಿ(ತಮಿಳುನಾಡು): ಕಳೆದ ಆರು ವರ್ಷಗಳಿಂದ ಚುನಾಯಿತ ಸಂಸ್ಥೆ ಮತ್ತು ಮುಕ್ತ ಪತ್ರಿಕಾ ವ್ಯವಸ್ಥೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ಎಸ್​ಎಸ್​) ದೇಶದಲ್ಲಿನ ಸಾಂಸ್ಥಿಕ ಸಮತೋಲನ ಹಾಳುಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಆರ್​ಎಸ್​ಎಸ್​ ವಿರುದ್ಧ ರಾಹುಲ್​ ವಾಗ್ದಾಳಿ

ತಮಿಳುನಾಡಿನ ತೂತುಕುಡಿಯಲ್ಲಿನ ಕಾಲೇಜ್​ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್​ ಗಾಂಧಿ, ಒಂದು ರಾಷ್ಟ್ರ ತನ್ನ ಸಂಸ್ಥೆಗಳೊಂದಿಗೆ ಸಮತೋಲನದಲ್ಲಿರಬೇಕು. ಆ ಸಮತೋಲನಕ್ಕೆ ತೊಂದರೆಯಾದರೆ ರಾಷ್ಟ್ರವು ತೊಂದರೆಗೀಡಾಗುತ್ತದೆ. ಚುನಾಯಿತ ಸಂಸ್ಥೆಗಳಾದ ಲೋಕಸಭೆ, ವಿಧಾನಸಭೆ, ಪಂಚಾಯಿತಿಗಳು, ಮುಕ್ತ ಪತ್ರಿಕಾ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡುವ ಮೂಲಕ ರಾಷ್ಟ್ರದ ಸಮತೋಲನದಲ್ಲಿಡುತ್ತವೆ.

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಸಂಗಾತಿ ತೇಜೋವಧೆ ಮಾಡಿದರೆ ವಿಚ್ಛೇದನ ಪಡೆಯಬಹುದು : ಸುಪ್ರೀಂ

ಆದರೆ ಕಳೆದ ಆರು ವರ್ಷಗಳಿಂದ ನಾನು ನೋಡಿದ ಪ್ರಕಾರ ಎಲ್ಲ ವ್ಯವಸ್ಥೆಗಳ ಮೇಲೆ ದಾಳಿಯಾಗಿದೆ. ಪ್ರಜಾಪ್ರಭುತ್ವದ ಅಬ್ಬರ ನಿಧಾನವಾಗಿ ಸಾಯುತ್ತಿದೆ.ಆರ್​​ಎಸ್​ಎಸ್​ ಸಾಂಸ್ಥಿಕ ಸಮತೋಲನ ನಾಶ ಮಾಡಿದೆ ಎಂದಿದ್ದಾರೆ. ದೇಶದ್ರೋಹ, ಕಾನೂನಿನ ದುರುಪಯೋಗ, ಜನರ ಕೊಲೆ, ಬೆದರಿಕೆ ಇವೆಲ್ಲವೂ ಇದರ ಲಕ್ಷಣಗಳಾಗಿದ್ದು, ಆರ್​​ಎಸ್​ಎಸ್​ ಸಂಘಟನೆಯೊಂದಿಗೆ ಸೇರಿಕೊಂಡಿವೆ ಎಂದು ವೈನಾಡು ಸಂಸದ ಹೇಳಿದ್ದಾರೆ.

ಪ್ರಧಾನ ಮಂತ್ರಿ ಉಪಯುಕ್ತ ಅಥವಾ ನಿಷ್ಪ್ರಯೋಜಕವೇ ಎಂಬ ಪ್ರಶ್ನೆ ಅಲ್ಲ. ಅವರು ಯಾರಿಗೆ ಉಪಯುಕ್ತರು ಎಂಬ ಪ್ರಶ್ನೆ? ಪ್ರಧಾನಿಯಿಂದ ಇಬ್ಬರಿಗೆ ಅತ್ಯಂತ ಉಪಯುಕ್ತವಾಗಿದೆ. ಹಮ್​ ದೋ ಹಮಾರಾ ದೋ ಎಂಬ ಘೋಷಣೆ ಅವರಿಗೆ ಸರಿಯಾಗಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಏಪ್ರಿಲ್​ 6ರಂದು ತಮಿಳುನಾಡಿನ 234 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ. 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.