ETV Bharat / bharat

ವಿಜಯದಶಮಿ ಪಥಸಂಚಲನ: ಸರಸಂಘಚಾಲಕ್​ ಮೋಹನ್​ ಭಾಗವತ್​, ಶಂಕರ್​ ಮಹಾದೇವನ್​ ಭಾಗಿ - annual dusshera rally

ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯದಶಮಿ ಹಿನ್ನೆಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಥಸಂಚಲನ ನಡೆಯಿತು.

rss-chief-mohan-bhagwat-speech-on-annual-dusshera-rally-today-in-nagpur
ವಿಜಯದಶಮಿ ಪಥಸಂಚಲನ : ಸರಸಂಘಚಾಲಕ್​ ಮೋಹನ್​ ಭಾಗವತ್​, ಶಂಕರ್​ ಮಹಾದೇವನ್​ ಭಾಗಿ
author img

By ETV Bharat Karnataka Team

Published : Oct 24, 2023, 1:41 PM IST

ನಾಗಪುರ (ಮಹಾರಾಷ್ಟ್ರ) : ವಿಜಯದಶಮಿ ಹಿನ್ನಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ದೇಶಾದ್ಯಂತ ಪಥ ಸಂಚಲನ ನಡೆಯಿತು. ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯ ದಶಮಿ ಹಿನ್ನಲೆ ಪಥ ಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು ಭಾಗವಹಿಸಿದ್ದರು. ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್​​ ಮೋಹನ್​ ಭಾಗವತ್​ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹಾದೇವನ್​ ಪಾಲ್ಗೊಂಡಿದ್ದರು. ಪ್ರತಿವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ವಿಜಯದಶಮಿಯಂದು ಪಥ ಸಂಚಲನ ನಡೆಸುತ್ತಾರೆ.

ಪಥ ಸಂಚಲನದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಾಯಕ ಶಂಕರ್ ಮಹಾದೇವನ್​, ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು. ನನ್ನನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದು ತುಂಬಾ ಸಂತೋಷವಾಯಿತು. ಇದು ನನಗೆ ಸಂದ ದೊಡ್ಡ ಗೌರವ. ಈ ಸಂಬಂಧ ನಾನು ಆರ್​ಎಸ್​ಎಸ್​ ಮುಖ್ಯಸ್ಥರಾದ ಮೋಹನ್​ ಭಾಗವತ್​ ಮತ್ತು ಸಂಘ ಪರಿವಾರಕ್ಕೆ ಧನ್ಯವಾದವನ್ನು ಅರ್ಪಿಸುತ್ತೇನೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಬಳಿಕ ಮಾತನಾಡಿದ ಆರ್​ಎಸ್​ಎಸ್​ ಸರಸಂಘಚಾಲಕ್​ ಮೋಹನ್​ ಭಾಗವತ್​, ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ ಶಂಕರ್​ ಮಹಾದೇವನ್​ ಅವರು ಹೇಳಿದ್ದಕ್ಕಿಂತ ಹೆಚ್ಚು ಹೇಳುವ ಅಗತ್ಯ ಇಲ್ಲ. ಭಾರತದ ಕೀರ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಭಾರತವು ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಇಡೀ ಜಗತ್ತು ನಮ್ಮ ಆತಿಥ್ಯ ಮತ್ತು ಸಂಸ್ಕೃತಿಯನ್ನು ಅನುಭವಿಸಿದೆ. ಭಾರತ ತನ್ನ ನಾಯಕತ್ವದಿಂದ ಇಂದು ವಿಶ್ವದಲ್ಲಿ ಮನ್ನಣೆ ಮತ್ತು ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಎಲ್ಲ ವಿಭಾಗಗಳಲ್ಲೂ ಸಾಧನೆ: ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಏಷ್ಯನ್​ ಗೇಮ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ನಮ್ಮ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತ ಇಂದು ವಿಶ್ವದಲ್ಲೇ ಅಗ್ರಸ್ಥಾನಿಯಾಗಿದೆ. ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರಲ್ಲಿ ರಾಮಲಲ್ಲಾ ಕುಳಿತುಕೊಳ್ಳುತ್ತಾನೆ ಎಂದು ಹೇಳಿದರು.

ಭಾರತದ ಅಭಿವೃದ್ಧಿ ಬಯಸದ ಕೆಲವು ಜನರು ಈ ಜಗತ್ತಿನಲ್ಲಿ ಮತ್ತು ಭಾರತದಲ್ಲಿಯೂ ಇದ್ದಾರೆ. ಅಂತವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ನಾವು ನಮ್ಮ ಅರಿವಿಲ್ಲದ ಅಂತವರ ಬಲೆ ಸಿಕ್ಕಿಹಾಕಿಕೊಳ್ಳುತ್ತೇವೆ. ಇದರಿಂದಾಗಿ ಕೆಲವೊಮ್ಮೆ ಅನಗತ್ಯ ಅವಾಂತರಗಳು ಸೃಷ್ಟಿಯಾಗುತ್ತವೆ. ಭಾರತ ಮುಂದುವರೆದರೆ ಅವರ ಆಟ ನಡೆಯುವುದಿಲ್ಲ. ನಮ್ಮನ್ನು ವಿರೋಧಿಸುವುದಕ್ಕಾಗಿಯೇ ಕೆಲ ನಿರ್ದಿಷ್ಟ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

ವಿಜಯದಶಮಿ ಉತ್ಸವ ಸಂದರ್ಭ ಆರ್​ಎಸ್​ಎಸ್​ ಸರಸಂಘಚಾಲಕ್​ ಮೋಹನ್​ ಭಾಗವತ್​ ಸಂಘಸ್ಥಾಪಕರಾದ ಡಾ. ಕೇಶವ ಬಲಿರಾಮ್​ ಹೆಡಗೇವಾರ್​ ಅವರಿಗೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಗಾಯಕ , ಸಂಗೀತ ಸಂಯೋಜಕ ಶಂಕರ್ ಮಹಾದೇವನ್​, ಕೇಂದ್ರ ಸಚಿವ ನಿತಿನ್​ ಗಡ್ಕರಿ, ದೇವೇಂದ್ರ ಫಡ್ನವಿಸ್​​ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಸಾವಿರಾರು ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ನಾಲ್ಕು ವರ್ಷಗಳ ಬಳಿಕ ರಾಮಲೀಲಾದಲ್ಲಿ ಪ್ರಧಾನಿಯಿಂದ ರಾವಣ ದಹನ... ದೇಶದ ಜನರಿಗೆ ಮೋದಿ ದಸರಾ ಶುಭಾಶಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.