ನವದೆಹಲಿ: ಸತ್ಯಶೋಧಕರೆಲ್ಲರೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡಲೇಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನವದೆಹಲಿಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿ ಅಭಿನಂದಿಸಿದ ಮೋಹನ್ ಭಾಗವತ್, ಪ್ರತಿಯೊಬ್ಬ ಸತ್ಯಾನ್ವೇಷಕರು ಈ ಚಿತ್ರವನ್ನು ನೋಡಲೇಬೇಕು. ಅದ್ಭುತವಾಗಿ ಬರೆದ ಚಿತ್ರಕಥೆ, ಕಲಾತ್ಮಕ ಕೆಲಸ ಹಾಗೂ ಸಂಪೂರ್ಣ ಸಂಶೋಧನೆ ಒಳಗೊಂಡಿದೆ ಎಂದು ಹೇಳಿದರು.
ಓದಿ: ಬೆಳಗಾವಿ: ಪ್ರೀತಿಯ ಅಪ್ಪುಗಾಗಿ 17ನೇ ಸೀಟ್ ಬುಕ್ ಮಾಡಿದ ಅಭಿಮಾನಿ
ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ. ಇದು 1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಸುತ್ತುವ ಕಥೆ ಇದಾಗಿದೆ. 'ತಾಷ್ಕೆಂಟ್ ಫೈಲ್ಸ್', 'ಹೇಟ್ ಸ್ಟೋರಿ' ಮತ್ತು 'ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಚಿತ್ರಗಳಿಗೆ ಹೆಸರುವಾಸಿಯಾದ ವಿವೇಕ್ ಅಗ್ನಿಹೋತ್ರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ, ಗುಜರಾತ್ ಮತ್ತು ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.