ETV Bharat / bharat

ಆರ್​ಎಸ್​ಎಸ್​ನ ಭಗವಾಧ್ವಜ ಜಾಗದಲ್ಲಿ ಹಾರಿದ ತಿರಂಗ.. ಸಂಘದ ಡಿಪಿ ಬದಲು - ಸಾಮಾಜಿಕ ಜಾಲತಾಣಗಳ ಡಿಪಿ

ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ಆರ್​ಎಸ್​ಎಸ್​ ತನ್ನ ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ಭಗವಾಧ್ವಜದ ಬದಲಾಗಿ ತ್ರಿವರ್ಣ ಧ್ವಜ ಚಿತ್ರವನ್ನು ಹಾಕಿದೆ.

Etv Bharatrss changes profile pictures to national flag
ಆರ್​ಎಸ್​ಎಸ್​ನ ಭಗವಾಧ್ವಜ ಜಾಗದಲ್ಲಿ ಹಾರಿದ ತಿರಂಗ
author img

By

Published : Aug 13, 2022, 12:37 PM IST

ನವದೆಹಲಿ: ದೇಶಾದ್ಯಂತ ಹರ್​ ಘರ್​ ತಿರಂಗಾ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಆ. 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಅಳವಡಿಸಲು ಮನವಿ ಮಾಡಿದ್ದರು. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಡಿಪಿ ಬದಲಿಸಿರಲಿಲ್ಲ. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಅಮೃತ ಮಹೋತ್ಸವಕ್ಕೆ 2 ದಿನಗಳ ಮುಂಚೆ ಪ್ರೊಫೈಲ್​ ಬದಲಿಸಿ ತಿರಂಗ ಹಾರಿಸಲಾಗಿದೆ.

ಪ್ರಧಾನಿ ಮೋದಿ ಅವರ ಮನವಿಯ ಮೇರೆಗೆ ಜನರು ಡಿಪಿ ಚಿತ್ರವನ್ನು ಬದಲಿಸಿ ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ಸ್ವತಃ ಪ್ರಧಾನಿಯವರೇ ಚಿತ್ರ ಬದಲಿಸಿದ್ದರು. ಆದರೆ, ಬಿಜೆಪಿ ಜೊತೆ ಸಿದ್ಧಾಂತಗಳನ್ನು ಹಂಚಿಕೊಂಡಿರುವ ಸಂಘ ತನ್ನ ಸಾಮಾಜಿಕ ಜಾಲತಾಣಗಳ ಡಿಪಿ ಚಿತ್ರ ಮಾತ್ರ ಬದಲಿಸದೇ ಭಗವಾಧ್ವಜವನ್ನು ಮುಂದುವರಿಸಿತ್ತು.

ಇದು ವಿಪಕ್ಷಗಳ ಟೀಕೆಗೆ ಆಹಾರವಾಗಿತ್ತು. ನಾಗ್ಪುರದ ಆರ್​ಎಸ್​ಎಸ್​ ಕಚೇರಿಯ ಮೇಲೆ 52 ವರ್ಷಗಳಿಂದ ಹಾರಿಸಲಾಗದ ತ್ರಿವರ್ಣ ಧ್ವಜವನ್ನು ಪ್ರಧಾನಿ ಮೋದಿ ಹೇಳಿದ ಬಳಿಕ ಹಾರಿಸುತ್ತಾರೆಯೇ ಎಂದು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಪ್ರಶ್ನಿಸಿದ್ದರು. ಅಲ್ಲದೇ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸಂಘ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳುತ್ತದೆಯೇ. ಅಂದು ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಹೋದ ಯುವಕರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದರು.

ಸ್ವಾತಂತ್ರ್ಯ ದಿನಕ್ಕೆ 2 ದಿನಗಳ ಮುಂಚೆ ಸಂಘದ ಟ್ವಿಟರ್​​​ ಖಾತೆಯ ಡಿಪಿಯನ್ನು ತ್ರಿವರ್ಣ ಧ್ವಜದ ಚಿತ್ರವನ್ನು ಅಳವಡಿಸಿದೆ. ಅಲ್ಲದೇ, ಸಂಘದ ಸರ ಸಂಘಚಾಲಕರಾದ ಮೋಹನ್​ ಭಾಗ್ವತ್​ ಅವರ ಟ್ವಿಟರ್​​ ಖಾತೆಯ ಚಿತ್ರವೂ ತ್ರಿವರ್ಣಮಯವಾಗಿದೆ.

ಸಂಘದ ಕಚೇರಿ ಮೇಲೆ ತಿರಂಗ: ಸಂಘದ ಕಚೇರಿಯ ಮೇಲೆ ಕೆಲ ದಿನಗಳ ಹಿಂದೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಸಂಘದ ಶಾಖೆಗಳಲ್ಲಿಯೂ ಧ್ವಜ ಹಾರಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಸಹ- ಪ್ರಭಾರಿಯಾದ ನರೇಂದ್ರ ಠಾಕೂರ್ ಅವರು ಶುಕ್ರವಾರವಷ್ಟೇ ಹೇಳಿಕೆ ನೀಡಿ, ಸಂಘವು ತನ್ನೆಲ್ಲಾ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯದ ಅಮೃತದ ಘಳಿಗೆಯನ್ನು ಆಚರಿಸುತ್ತಿದೆ. ಆರೆಸ್ಸೆಸ್ ಕಾರ್ಯಕರ್ತರು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಹೇಳಿದ್ದರು.

ವಿಪಕ್ಷಗಳಿಂದ ವ್ಯಾಪಕವಾಗಿ ಕೇಳಿ ಬಂದ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆರ್​​ಎಸ್​ಎಸ್​ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು, ಇಂತಹ ವಿಷಯಗಳನ್ನು ರಾಜಕೀಯಗೊಳಿಸಬಾರದು. ಆರ್‌ಎಸ್‌ಎಸ್ 'ಹರ್ ಘರ್ ತಿರಂಗ' ಮತ್ತು 'ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮಗಳಿಗೆ ಬೆಂಬಲವನ್ನು ನೀಡಿದೆ ಎಂದು ಹೇಳಿದ್ದರು.

ಓದಿ: ನಿವಾಸಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ಅಭಿಯಾನದಲ್ಲಿ ಭಾಗಿಯಾಗಲು ಅಮಿತ್​ ಶಾ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.