ETV Bharat / bharat

ಕೇಂದ್ರ ಸಚಿವ ನಿಸಿತ್ ಪ್ರಮಣಿಕ್​ ಭಾರತದವರೇ ಅಲ್ವಾ? ಮೋದಿ ಸಂಪುಟದಲ್ಲಿ ವಿದೇಶಿಗನಿಗೆ ಸಿಕ್ತಾ ಸಚಿವ ಸ್ಥಾನ? - ಲೋಕಸಭಾ ಸಂಸದ ಪ್ರಮಣಿಕ್

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ರಿಪುನ್​ ಬೋರಾ ರಾಷ್ಟ್ರೀಯತೆ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಮಾಡುತ್ತಿದ್ದು, ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ.

ವಿದೇಶಿಗರಿಗೆ ಸಿಕ್ತಾ ಮಂತ್ರಿಗಿರಿ?
ವಿದೇಶಿಗರಿಗೆ ಸಿಕ್ತಾ ಮಂತ್ರಿಗಿರಿ?
author img

By

Published : Jul 18, 2021, 9:51 AM IST

ನವದೆಹಲಿ /ಕೋಲ್ಕತ್ತಾ: ಹೊಸದಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ನಿಸಿತ್ ಪ್ರಮಣಿಕ್​​ ರಾಷ್ಟ್ರೀಯತೆ ಬಗ್ಗೆ ಈಗ ಪ್ರಶ್ನೆ ಉದ್ಭವಿಸಿದೆ. ಕೇಂದ್ರ ಸಚಿವ ನಿಸಿತ್ ಪ್ರಮಣಿಕ್​ ಬಾಂಗ್ಲಾದೇಶದ ಮೂಲದವರಾಗಿದ್ದಾರೆ ಎಂದು ಆರೋಪಿಸಿರುವ ಅಸ್ಸೋಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ರಿಪುನ್ ಬೋರಾ, ಈ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಕೂಡ ಬಿಜೆಪಿಯು ಇಂಥವರನ್ನು (ನಿಸಿತ್ ಪ್ರಮಣಿಕ್) ಹೇಗೆ ಸಂಪುಟಕ್ಕೆ ಸೇರಿಸಿಕೊಂಡಿತು ಎಂದು ಪ್ರಶ್ನಿಸಿದೆ. ಪಶ್ಚಿಮ ಬಂಗಾಳದ ಲೋಕಸಭಾ ಸಂಸದ ಪ್ರಮಣಿಕ್​, ಭಾರತದಲ್ಲೇ ಹುಟ್ಟಿ ಬೆಳೆದಿದ್ದು, ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.

ನಿಮಗೇನಾದರೂ ನಿಸಿತ್ ಪ್ರಮಣಿಕ್ ಅವರ ರಾಷ್ಟ್ರೀಯತೆ ಬಗ್ಗೆ ಅನುಮಾನವಿದ್ದರೆ, ದಯವಿಟ್ಟು ನ್ಯಾಯಾಲಯದ ಮೊರೆ ಹೋಗಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಟಿಎಂಸಿಗೆ ತಿರುಗೇಟು ನೀಡಿದ್ದಾರೆ.

ತಮ್ಮ ಟ್ವಿಟರ್​ನಲ್ಲಿ ಬರಾಕ್​ ಬಾಂಗ್ಲಾ, ಖಾಸಗಿ ಟಿವಿ ತ್ರಿಪುರ ಮತ್ತು ಡಿಜಿಟಲ್​​ ಮಾಧ್ಯಮದಲ್ಲಿ ವರದಿಯಾಗಿರುವ ನಿಸಿತ್ ಪ್ರಮಣಿಕ್ ಸುದ್ದಿಗಳನ್ನು ಉಲ್ಲೇಖಿಸಿರುವ ಬೋರಾ, ನಿಸಿತ್ ಪ್ರಮಣಿಕ್ ಅವರ ಜನ್ಮಸ್ಥಳ ಬಾಂಗ್ಲಾ ಗೈಬಂಧ ಜಿಲ್ಲೆಯ ಹರಿನಾಥಪುರ. ಅವರು ಕಂಪ್ಯೂಟರ್​​ ಕೋರ್ಸ್ ಮಾಡಲು ಪಶ್ಚಿಮ ಬಂಗಾಳಕ್ಕೆ ಬಂದರು. ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ ಬಳಿಕ ನಿಸಿತ್​, ಟಿಎಂಸಿಗೆ ಸೇರಿದರು. ನಂತರದ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಹಿನ್ನೆಲೆಯ ಪರಿಶೀಲನೆ ನಡೆದಿಲ್ಲವೇ..? ನಾಚಿಕೆಯಾಗಬೇಕು ನಿಮಗೆ ಎಂದು ಬರೆದಿರುವ ಪತ್ರವೊಂದನ್ನು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ;35ನೇ ವಯಸ್ಸಿಗೆ ಕೇಂದ್ರ ಸಚಿವ ಸ್ಥಾನ! ಶಾಲಾ ಶಿಕ್ಷಕನಾಗಿ ಸಂಸದನಾದ ಯುವಕನಿಗೆ ಮೋದಿ ಮಣೆ

ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಇಂದ್ರಾನಿಲ್ ಸೇನ್, ಕೇಂದ್ರ ಸಚಿವ ನಿಸಿತ್​ ಪ್ರಮಣಿಕ್ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದೇನೆ. ಈಗಿನ ಕೇಂದ್ರ ಸಚಿವರು ವಿದೇಶಿ ಪ್ರಜೆಯೇ? ನರೇಂದ್ರ ಮೋದಿ ಸರ್ಕಾರದಲ್ಲಿ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನಿಸಿತ್ ಪ್ರಮಣಿಕ್​ ಅವರ ತವರೂರು ಯಾವುದು? ಅವರ ಮೂಲ ಸ್ಥಳ ಯಾವುದು ಅನ್ನೋದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಗೊಂದಲ ನಿವಾರಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.