ETV Bharat / bharat

ಡಿ. 31ರಂದು ಭರ್ಜರಿ ಲಿಕ್ಕರ್​ ಮಾರಾಟ.. ಸರ್ಕಾರದ ಖಜಾನೆಗೆ ಏರಿತು ಕಿಕ್ಕು - ತೆಲಂಗಾಣದಲ್ಲಿ ದಾಖಲೆಯ ಮದ್ಯ ಮಾರಾಟ

Liquor sale in Telangana: ಹೊಸ ವರ್ಷದ ಮುನ್ನಾದಿನವಾದ ನಿನ್ನೆ ತೆಲಂಗಾಣದಲ್ಲಿ ದಾಖಲೆಯ ಮಟ್ಟದ ಮದ್ಯ ಮಾರಾಟವಾಗಿದ್ದು, ಒಂದೇ ದಿನ 172 ಕೋಟಿ ರೂ. ಮೌಲ್ಯದ ಅಲ್ಕೊಹಾಲ್​​ ಸೇಲ್​ ಆಗಿದೆ.

Liquor sale in Telangana
Liquor sale in Telangana
author img

By

Published : Jan 1, 2022, 9:06 PM IST

ಹೈದರಾಬಾದ್​​(ತೆಲಂಗಾಣ): ಕೊರೊನಾ, ಒಮಿಕ್ರಾನ್​ ದೇಶದ ಬಹುತೇಕ ಎಲ್ಲ ವಲಯಗಳ ಮೇಲೆ ಅಡ್ಡ ಪರಿಣಾಮ ಬೀರಿದೆ. ಆದರೆ, ಅಬಕಾರಿ ಇಲಾಖೆ ಮೇಲೆ ಇದರಿಂದ ಯಾವುದೇ ರೀತಿಯ ವ್ಯತರಿಕ್ತ ಪರಿಣಾಮವಾಗಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. 2021ರ ಡಿಸೆಂಬರ್​​ 31ರಂದು ತೆಲಂಗಾಣ ರಾಜ್ಯ ದಾಖಲೆಯ ಮಟ್ಟದಲ್ಲಿ ಮದ್ಯ ಮಾರಾಟ ಮಾಡಿದ್ದು, ಬರೋಬ್ಬರಿ 172 ಕೋಟಿ ರೂ. ಅಲ್ಕೊಹಾಲ್​​ ಸೇಲ್​​ ಆಗಿದೆ.

ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 1.76 ಲಕ್ಷ ಬಾಕ್ಸ್​​​, 1.66 ಲಕ್ಷ ಬಿಯರ್​ ಮಾರಾಟವಾಗಿದ್ದು, ರಂಗಾರೆಡ್ಡಿಯಲ್ಲೇ 42.26 ಕೋಟಿ ರೂ. ಮೌಲ್ಯದ ಮದ್ಯ, ವಾರಂಗಲ್​​​ನಲ್ಲಿ 24.78 ಕೋಟಿ ಹಾಗೂ ಹೈದರಾಬಾದ್​​​ನಲ್ಲಿ 23.13 ಕೋಟಿ ರೂ. ಮೌಲ್ಯದ ಮದ್ಯ ಮಾರವಾಟವಾಗಿದೆ.

2021ರಲ್ಲಿ ರಂಗಾರೆಡ್ಡಿಯಲ್ಲಿ(ಇಡೀ ವರ್ಷ) 7,673 ಕೋಟಿ ರೂ., ನಲ್ಗೊಂಡ ಜಿಲ್ಲೆಯಲ್ಲಿ 3,289 ಕೋಟಿ ರೂ., ಹೈದರಾಬಾದ್​​​ನಲ್ಲಿ 3,208 ಕೋಟಿ ರೂ. ಮೌಲ್ಯದ ಮದ್ಯ ಸೇಲ್​​​ ಆಗಿದೆ ಎಂಬ ವರದಿ ಬಹಿರಂಗಗೊಂಡಿದೆ.

ಇದನ್ನೂ ಓದಿರಿ: ಮದ್ಯಪ್ರಿಯರಿಗೆ ಕಾಡದ ನೈಟ್ ಕರ್ಫ್ಯೂ : ಕಳೆದ ವರ್ಷಕ್ಕಿಂತಲೂ ಅಧಿಕ ಮಾರಾಟ

ಡಿಸೆಂಬರ್​ ತಿಂಗಳಲ್ಲೇ ದಾಖಲೆಯ 3,459 ಕೋಟಿ ರೂ. ಮದ್ಯ ಮಾರಾಟವಾಗಿದ್ದು, 40.48 ಲಕ್ಷ ಬಾಕ್ಸ್​​ ಮತ್ತು 34 ಲಕ್ಷ ಬಿಯರ್​​ ಸೇಲ್​​ ಆಗಿವೆ. 2021ರಲ್ಲಿ ತೆಲಂಗಾಣದಲ್ಲಿ 30,222 ಕೋಟಿ ರೂ. ಮೌಲ್ಯದ ಮದ್ಯ ಖರೀದಿಯಾಗಿದೆ.

ಆಂಧ್ರಪ್ರದೇಶದಲ್ಲೂ ಭರ್ಜರಿ ಮಾರಾಟ

ಪಕ್ಕದ ಆಂಧ್ರಪ್ರದೇಶದಲ್ಲೂ ಮದ್ಯ ಭರ್ಜರಿಯಾಗಿ ಮಾರಾಟವಾಗಿದ್ದು, ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಒಂದೇ ದಿನ 124.10 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.