ಅನಂತಪುರ (ಆಂಧ್ರಪ್ರದೇಶ): ಮನೆಗೆ ಬಂದ ವಿದ್ಯುತ್ ಬಿಲ್ವೊಂದು ಗಂಡ-ಹೆಂಡತಿ ಮಧ್ಯೆ ಕಲಹ ತಂದಿಟ್ಟಿದೆ. ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಕುಟುಂಬದಲ್ಲಿ ಬಿರುಕು ಮೂಡಿ, ಪತಿ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಪುಲ್ಲೂರು ಗ್ರಾಮದಲ್ಲಿ ನಡೆದಿದೆ.
ಪ್ರತಿ ತಿಂಗಳು ನಾರಾಯಣಸ್ವಾಮಿಯವರ ಕುಟುಂಬಕ್ಕೆ 200 ರಿಂದ 300 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ, ಈ ಬಾರಿ ಬರೋಬ್ಬರಿ 16,000 ವಿದ್ಯುತ್ ಬಿಲ್ ಬಂದಿದೆ. ಇದರಿಂದಾಗಿ ದಂಪತಿ ಮಧ್ಯೆ ಜಗಳ ಶುರುವಾಗಿ ನಾರಾಯಣ ಸ್ವಾಮಿ ಮನೆ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ:ಪತ್ನಿಯಿಂದಲೇ ಗಂಡನ ಕೊಲೆಗೆ ಸುಪಾರಿ... ಮುಂದೇನಾಯ್ತು?
ಪತಿ ಕಾಣೆಯಾಗಿದ್ದಾರೆಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಹಿಳೆಯನ್ನು ವಿಚಾರಿಸಿದಾಗ ಘಟನೆಗೆ ಕಾರಣ ಏನೆಂಬುದು ತಿಳಿದು ಬಂದಿದೆ. ಘಟನೆ ಹಿಂದೆ ವಿದ್ಯುತ್ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿತನ ಇರುವುದು ಕಂಡು ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.