ನವದೆಹಲಿ: ತೆಲಂಗಾಣದ ಮುಲುಗು ಜಿಲ್ಲೆಯ NH-163 ರ ಹೈದರಾಬಾದ್-ಭೂಪಾಲಪಟ್ಟಣಂ ಪ್ರದೇಶದ ದ್ವಿಪಥದ ರಸ್ತೆಯನ್ನು ಚತುಷ್ಪಥಕ್ಕೆ ವಿಸ್ತರಿಸಲು ಒಟ್ಟು ರೂ. 136.22 ಕೋಟಿ. ವೆಚ್ಚವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದರು.
ತೆಲಂಗಾಣ ಮತ್ತು ಆಂಧ್ರಪ್ರದೇಶದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಟ್ಟಿರುವ ಸೇತುವೆಯ ಮಾರ್ಗಗಳ ನವೀಕರಣಕ್ಕೆ 436.91 ಕೋಟಿ ರೂಪಾಯಿಯನ್ನು ಅನುಮೋದಿಸಲಾಗಿದೆ ಎಂದು ಗಡ್ಕರಿ ಹೇಳಿದರು. ಈ ಯೋಜನೆಯು ಪ್ರವಾಸಿ ತಾಣಗಳ ಜೊತೆ ಲಕ್ನವರಂ ಸರೋವರ ಮತ್ತು ಬೊಗೊಥಾ ಜಲಪಾತಗಳನ್ನು ಸಂಧಿಸುತ್ತದೆ. ಅಲ್ಲದೆ ರಸ್ತೆ ವಿಸ್ತರಣೆಯಿಂದ ತೆಲಂಗಾಣ ಮತ್ತು ಛತ್ತೀಸ್‌ಗಡದ ನಡುವೆ ಸಂಪರ್ಕವಾಗಲಿದೆ. ಇದೆಲ್ಲದಕ್ಕಿಂಥ ಮುಖ್ಯವಾಗಿ ಎಡಪಂಥೀಯ ಉಗ್ರ ಪೀಡಿತ ಜಿಲ್ಲೆ ಮುಳುಗು ಜಿಲ್ಲೆಯಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಸಚಿವರ ಅಭಿಪ್ರಾಯ.
ಜೊತೆಗೆ ಹೈದರಾಬಾದ್/ಕಲ್ವಕುರ್ತಿ ಮತ್ತು ತಿರುಪತಿ, ನಂದ್ಯಾಲ-ಚೆನ್ನೈ ಮುಂತಾದ ಪ್ರಮುಖ ಸ್ಥಳಗಳ ನಡುವಿನ ಸುಮಾರು 80 ಕಿ.ಮೀ ಅಂತರವನ್ನು ಈ ಯೋಜನೆ ಕಡಿಮೆ ಮಾಡಲಿದೆ. ನಲ್ಲಮಲ್ಲ ಅರಣ್ಯ ಹತ್ತಿರ ಇರುವ ನಂದ್ಯಾಲ ಪ್ರದೇಶವು ಕೃಷಿ ಉತ್ಪನ್ನಗಳ ಮತ್ತು ಅರಣ್ಯ ಉತ್ಪನ್ನಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಹಾಗೆ ಕೊಲ್ಲಾಪುರದಲ್ಲಿ ನಿರ್ಮಾಣವಾಗಲಿರುವ ಸೇತುವೆಯು ಎರಡೂ ರಾಜ್ಯಗಳಿಗೆ ಹೆಬ್ಬಾಗಿಲ ಜೊತೆ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ :ರಾಜ್ಯ ಸರ್ಕಾರಗಳೇ ಕಲ್ಲಿದ್ದಲು ಕಳ್ಳತನ ತಡೆಯಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ