ETV Bharat / bharat

ಹೈದರಾಬಾದ್‌ನಲ್ಲಿ 5.5 ಕೋಟಿ ರೂ. ಮೌಲ್ಯದ ಸ್ಯೂಡೋಪೆಡ್ರೈನ್ ವಶ.. - ಬೇಗಂಪೇಟೆ ಪೊಲೀಸರು

ಆಸ್ಟ್ರೇಲಿಯಾ ತಲುಪಬೇಕಿದ್ದ ಪಾರ್ಸೆಲ್‌ಗಳಲ್ಲಿ ಅಡಗಿಸಿಟ್ಟಿದ್ದ 5.5 ಕೋಟಿ ಮೌಲ್ಯದ 14.2 ಕೆಜಿ ಸ್ಯೂಡೋಪೆಡ್ರೈನ್ ಅನ್ನು ಹೈದರಾಬಾದ್​ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸ್ಯೂಡೋಪೆಡ್ರೈನ್
ಸ್ಯೂಡೋಪೆಡ್ರೈನ್
author img

By

Published : Nov 12, 2021, 1:10 AM IST

ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence) ಹಾಗೂ ಬೇಗಂಪೇಟೆ ಪೊಲೀಸರು (Begumpet police) ಜಂಟಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 5.5 ಕೋಟಿ ಮೌಲ್ಯದ 14.2 ಕೆಜಿ ಸ್ಯೂಡೋಪೆಡ್ರೈನ್ (Pseudoephedrine) ಅನ್ನು ವಶಪಡಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಲುಪಬೇಕಿದ್ದ ಪಾರ್ಸೆಲ್‌ಗಳಲ್ಲಿ ಕೆಲವು ಎನ್‌ಡಿಪಿಎಸ್‌ ವಸ್ತುಗಳನ್ನು ಅಡಗಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ತೆಲಂಗಾಣದ ಬೇಗಂಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂತಾರಾಷ್ಟ್ರೀಯ ಕೊರಿಯರ್ ಏಜೆನ್ಸಿಯಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಎರಡು ಪಾರ್ಸೆಲ್‌ಗಳಲ್ಲಿ ಸ್ಯೂಡೋಪೆಡ್ರೈನ್ ಪತ್ತೆಯಾಗಿದೆ.

ಫೋಟೋ ಫ್ರೇಮ್‌ಗಳು ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡ ಪಾರ್ಸೆಲ್‌ಗಳು ಇವಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದಾಗ ಫೋಟೋ ಫ್ರೇಮ್‌ನ 2 ಪದರಗಳ ನಡುವೆ ಬಿಳಿ ಬಣ್ಣದ ಪುಡಿಯಂತಹ ವಸ್ತುವನ್ನು ಹೊಂದಿರುವ ಪ್ಲಾಸ್ಟಿಕ್ ಕವರ್​ಗಳು ಪತ್ತೆಯಾಗಿದೆ. ಇದು 1985ರ ಎನ್‌ಡಿಪಿಎಸ್‌ ಕಾಯ್ದೆಯಡಿ ನಿಷೇಧಿಸಲ್ಪಟ್ಟ ಸ್ಯೂಡೋಪೆಡ್ರೈನ್ ಎಂಬ ಮಾದಕವಸ್ತು ಎಂಬುದು ತಿಳಿದು ಬಂದಿದೆ.

ಕಾಳ ಸಂತೆಯಲ್ಲಿಯೇ ಈ ಮಾದಕ ವಸ್ತುವಿನ ಬೆಲೆ ಒಂದು ಕೆಜಿಗೆ 40 ಲಕ್ಷ ರೂಪಾಯಿಯಿದೆ. ಕಳೆದ ಒಂದು ವರ್ಷದಲ್ಲಿ ಹೈದರಾಬಾದ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯವು ಸುಮಾರು 300ಕ್ಕೂ ಅಧಿಕ ಕೆಜಿ ಮಾದಕ ವಸ್ತುಗಳನ್ನು ಕೊರಿಯರ್​, ಸಮುದ್ರ, ವಾಯು ಮಾರ್ಗದ ಮೂಲಕ ಆಸ್ಟ್ರೇಲಿಯಾಗೆ ಸಾಗಿಸುತ್ತಿದ್ದ 15 ಪ್ರಕರಣಗಳನ್ನು ಭೇದಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.