ತೂತುಕುಡಿ(ತಮಿಳು ನಾಡು): ತೂತುಕುಡಿ ಜಿಲ್ಲೆಯ ತಿರುಚೆಂದೂರು ಬಳಿ ಕಾರಿನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕುಲಶೇಖರಪಟ್ಟಣಂ ಪೊಲೀಸರು ಎಬೆಂಕುಡಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು.
ಅಲ್ಲಿಗೆ ಬಂದ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಮೂರು ಪ್ಲಾಸ್ಟಿಕ್ ಕವರ್ ಗಳಲ್ಲಿದ್ದ ತಿಮಿಂಗಿಲದ ವಾಂತಿ(ಅಂಬರ್ ಗ್ರಿಸ್) ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಿಮಿಂಗಿಲದ ವಾಂತಿಯನ್ನು ಜಪ್ತಿ ಮಾಡಿದ್ದಾರೆ. ವಿರುದುನಗರ ಜಿಲ್ಲೆಯ ತಂಗಪಾಂಡಿ, ಧರ್ಮರಾಜ್, ಕಿಂಗ್ಸ್ಲಿ, ಮೋಹನ್, ತೂತುಕುಡಿ ಜಿಲ್ಲೆಯ ರಾಜನ್ ಹಾಗೂ ಕಾರಿನಲ್ಲಿ ಬಂದ ಚಾಲಕ ಕರುಪ್ಪಸ್ವಾಮಿ ಸೇರಿದಂತೆ 6 ಮಂದಿಯನ್ನು ಬಂಧಿಸಿ ಕುಲಶೇಖರಪಟ್ಟಣಂ ಠಾಣೆಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸುಗಂಧ ದ್ರವ್ಯಗಳಿಗೆ ಬಳಕೆ: 25 ಕೆಜಿ ತೂಕದ ಈ ತಿಮಿಂಗಿಲದ ವಾಂತಿಯ ಮೌಲ್ಯ ಸುಮಾರು 25 ಕೋಟಿ. ಇದನ್ನು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಕುಲಶೇಖರನ್‌ಪಟ್ಟಣಂ ಪೊಲೀಸರು ಈ ತಿಮಿಂಗಿಲದ ವಾಂತಿಯನ್ನು ತಿರುಚೆಂದೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಕಳೆದ ತಿಂಗಳು ಎಬೆಂಗುಡಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 11 ಕೆಜಿ ತಿಮಿಂಗಿಲದ ವಾಂತಿಯನ್ನು ಕುಲಶೇಖರಪಟ್ಟಣಂ ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ವಾಜಪೇಯಿ ಸೇರಿ ಮಾಜಿ ಪ್ರಧಾನಿಗಳ ಸ್ಮಾರಕಗಳಿಗೆ ರಾಹುಲ್ ಗಾಂಧಿ ಭೇಟಿ