ETV Bharat / bharat

200 ಕೋಟಿ ರೂಪಾಯಿ ವಂಚನೆ ಪ್ರಕರಣ: ತಿಹಾರ್​ ಜೈಲಿನ ಐವರು ಅಧಿಕಾರಿಗಳು ಅರೆಸ್ಟ್ - ದೆಹಲಿ ಪೊಲೀಸ್​ನ ಆರ್ಥಿಕ ಅಪರಾಧಗಳ ವಿಭಾಗ

ತಿಹಾರ್ ಜೈಲಿನ ಐವರು ಅಧಿಕಾರಿಗಳನ್ನು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಮತ್ತು ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್​ಗೆ ಸಹಕಾರ ನೀಡಿರುವ ಆರೋಪದಲ್ಲಿ ಬಂಧಿಸಲಾಗಿದೆ.

Rs 200 crore extortion case: Five Tihar jail officials arrested
200 ಕೋಟಿ ರೂಪಾಯಿ ವಂಚನೆ ಪ್ರಕರಣ: ತಿಹಾರ್​ ಜೈಲಿನ ಐವರು ಅಧಿಕಾರಿಗಳು ಅರೆಸ್ಟ್
author img

By

Published : Nov 10, 2021, 11:22 AM IST

ನವದೆಹಲಿ: ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್​ಗೆ ಲಂಚ ಪಡೆಯಲು ಸಹಾಯ ಮಾಡಿದ ಆರೋಪದಲ್ಲಿ ಸುಮಾರು ಐದು ಮಂದಿ ಜೈಲು ಅಧಿಕಾರಿಗಳನ್ನು ದೆಹಲಿ ಪೊಲೀಸ್​ನ ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿದೆ.

ಬಂಧಿತ ಜೈಲು ಅಧಿಕಾರಿಗಳನ್ನು ಸುನೀಲ್ ಕುಮಾರ್, ಸುಂದರ್ ಬೋರಾ, ಮಹೇಂದ್ರ ಪ್ರಸಾದ್, ಲಕ್ಷ್ಮೀ ದತ್ ಮತ್ತು ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್‌ಕೆ ಸಿಂಗ್, ಬಂಧಿತ ಜೈಲು ಅಧಿಕಾರಿಗಳು ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ ಮತ್ತು ಅವರಿಂದ ಲಂಚ ಸ್ವೀಕರಿಸಿರುವ ಆರೋಪವಿದೆ ಎಂದಿದ್ದಾರೆ.

ಸುನಿಲ್ ಕುಮಾರ್ ಮತ್ತು ಸುಂದರ್ ಬೋರಾ ಜೈಲು ಸೂಪರಿಂಡೆಂಟ್ ಆಗಿದ್ದು, ಮಹೇಂದ್ರ ಪ್ರಸಾದ್ ಮತ್ತು ಪ್ರಕಾಶ್ ಚಂದ್ ಡೆಪ್ಯುಟಿ ಸೂಪರಿಂಡೆಂಟ್ ಆಗಿದ್ದಾರೆ ಎಂದು ಆರ್​ಕೆ ಸಿಂಗ್ ಹೇಳಿದ್ದಾರೆ. ಆರ್ಥಿಕ ಅಪರಾಧಗಳ ವಿಭಾಗವು ಬಂಧಿತ ಜೈಲು ಅಧಿಕಾರಿಗಳನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನವೆಂಬರ್ 12ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಈ ಪ್ರಕರಣದಲ್ಲಿ ಈವರೆಗೆ 19 ಮಂದಿಯನ್ನು ಬಂಧಿಸಲಾಗಿದೆ. 200 ಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಜೈಲು ಅಧಿಕಾರಿಗಳ ನೆರವಿನೊಂದಿಗೆ ಅಪರಾಧ ನಡೆಸುತ್ತಿರುವುದು ಪತ್ತೆಯಾಗಿತ್ತು.

ಫೋರ್ಟಿಸ್ ಹೆಲ್ತ್‌ಕೇರ್ ಪ್ರಮೋಟರ್​​​ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಅನೇಕ ವ್ಯಕ್ತಿಗಳಿಗೆ ಸುಮಾರು 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ವಿರುದ್ಧ ವಂಚನೆ ಮತ್ತು ಸುಲಿಗೆ ಕೇಸ್​ ದಾಖಲಾಗಿತ್ತು.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಮತ್ತೊಂದು ಪ್ರಕರಣ ದಾಖಲಿಸಿದ ಸಿಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.