ಕಾನ್ಪುರ (ಉತ್ತರ ಪ್ರದೇಶ): ದೆಹಲಿಯಿಂದ ಬಿಹಾರದ ಜಯನಗರಕ್ಕೆ ತೆರಳುತ್ತಿದ್ದ ಸ್ವತಂತ್ರ ಸಂಗ್ರಾಮ್ ಸೇನಾನಿ ವಿಶೇಷ ರೈಲಿನಲ್ಲಿ 1.4 ಕೋಟಿ ಪತ್ತೆಯಾಗಿರುವ ಘಟನೆ ಕಾನ್ಪುರದಲ್ಲಿ ಕಂಡು ಬಂದಿದೆ.
ಪ್ಯಾಂಟ್ರಿ ಕಾರಿನಲ್ಲಿ (ಅಡುಗೆ ಬೋಗಿ) ಬ್ಯಾಗ್ ಬಿದ್ದಿರುವುದು ಕಂಡು ಬಂದಿದೆ. ಸೋಮವಾರ ರಾತ್ರಿ ಕಾನ್ಪುರಗೆ ರೈಲು ತಲುಪಿದಾಗ ಪ್ಯಾಂಟ್ರಿ ಸಿಬ್ಬಂದಿ ಈ ವಿಷಯವನ್ನು ಜಿಆರ್‌ಪಿಗೆ ವರದಿ ಮಾಡಿದರು.
ಬ್ಯಾಗ್ ತೆಗೆದು ನೋಡಿದಾಗ ನೋಟುಗಳಿಂದ ತುಂಬಿರುವುದು ಕಂಡು ಬಂದಿದೆ. ನೋಟುಗಳ ಎಣಿಕೆ ಕಾರ್ಯ ಮಂಗಳವಾರ ರಾತ್ರಿ ಪೂರ್ಣಗೊಂಡಿತು. ಬಳಿಕ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣವನ್ನು ನೀಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಅಲ್ಲಿ ಬ್ಯಾಗ್ ಬಿಟ್ಟವರ್ಯಾರು ಎಂಬುದು ಪ್ಯಾಂಟ್ರಿ ಸಿಬ್ಬಂದಿಗೆ ತಿಳಿದಿಲ್ಲ. ಇದುವರೆಗೂ ಬ್ಯಾಗ್ನ ಹಕ್ಕುದಾರರು ಬಂದಿಲ್ಲ ಎಂದು ರೈಲ್ವೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.