ETV Bharat / bharat

ಮೇರಿ ಸಹೇಲಿ.. ಈ ವರ್ಷದಲ್ಲಿ 3,800ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಿದ ಆರ್‌ಪಿಎಫ್‌ - Railway Protection Force

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಮಹತ್ವದ ಕಾರ್ಯಾಚರಣೆ ನಡೆಸಿದೆ.

rpf
ಆರ್‌ಪಿಎಫ್‌
author img

By PTI

Published : Oct 16, 2023, 9:43 AM IST

ನವದೆಹಲಿ : ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 3,800 ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರಿಗೆ ತುರ್ತು ಸಂದರ್ಭಗಳಲ್ಲಿ ರೈಲ್ವೆ ರಕ್ಷಣಾ ಪಡೆ ಸಹಾಯ ಮಾಡುವ ಮೂಲಕ ಅವರನ್ನು ರಕ್ಷಿಸಿದೆ. ಮಾನವ ಕಳ್ಳಸಾಗಣೆದಾರರಿಂದ ರಕ್ಷಣೆ ಸೇರಿದಂತೆ ರೈಲುಗಳು ಮತ್ತು ನಿಲ್ದಾಣದ ಆವರಣದಲ್ಲಿ ಅಸುರಕ್ಷಿತ ಸಂದರ್ಭಗಳಲ್ಲಿ ಸಹಾಯ ಮಾಡಲಾಗಿದೆ ಎಂದು ಆರ್‌ಪಿಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ರಕ್ಷಣಾ ಪಡೆಯ ಒಂದು ತುಕಡಿಯು ದೆಹಲಿಯಲ್ಲಿ ನಡೆದ ಹಾಫ್ ಮ್ಯಾರಥಾನ್‌ನಲ್ಲಿ (Delhi Half Marathon) ಭಾಗಿಯಾಗಿ ಮಹಿಳೆಯರ ಸುರಕ್ಷತೆ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತು.

"ಮಹಿಳೆಯರಿಗೆ ರೈಲುಗಳಲ್ಲಿ ಸುರಕ್ಷಿತ ಪ್ರಯಾಣವನ್ನು ಉತ್ತೇಜಿಸಲು ಆರ್‌ಪಿಎಫ್‌ನ 25 ಸದಸ್ಯರ ತಂಡವು ದೆಹಲಿ ಹಾಫ್ ಮ್ಯಾರಥಾನ್ 2023 ರಲ್ಲಿ ಭಾಗವಹಿಸಿದೆ" ಎಂದು ಸಚಿವಾಲಯ ತಿಳಿಸಿದೆ.

"ಭಾರತೀಯ ರೈಲ್ವೆ ಜಾಲದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಗುರಿ ಹೊಂದಿರುವ ಆರ್‌ಪಿಎಫ್‌ನ ವಿವಿಧ ಉಪಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಅದರಲ್ಲೂ 'ಮೇರಿ ಸಹೇಲಿ' ಅಂತಹ ಅಭಿಯಾನದ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. 2023 ರಲ್ಲಿ ಆರ್‌ಪಿಎಫ್ ಸಿಬ್ಬಂದಿ ಗಮನಾರ್ಹ ಸಾಧನೆ ಪ್ರದರ್ಶಿಸಿದ್ದಾರೆ. ಸಂಚರಿಸುವ ರೈಲುಗಳ ಬಳಿ ಅಪಾಯಕ್ಕೆ ಸಿಲುಕಿದ್ದ 862 ಮಹಿಳೆಯರನ್ನು ರಕ್ಷಿಸಿದ್ದಾರೆ" ಎಂದು ಹೇಳಿದೆ.

"ಆಪರೇಷನ್ ನನ್ಹೆ ಫರಿಷ್ಟೆ" (Operation Nanhe Farishte) ಅಡಿಯಲ್ಲಿ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಅಪಾಯಕ್ಕೆ ಸಿಲುಕಿದ್ದ 2,898 ಯುವತಿಯರನ್ನು ರಕ್ಷಿಸಿದ್ದಾರೆ. ಇದಲ್ಲದೇ, ಆರ್‌ಪಿಎಫ್ ಸಿಬ್ಬಂದಿ 51 ಅಪ್ರಾಪ್ತ ಬಾಲಕಿಯರು ಮತ್ತು ಆರು ಮಹಿಳೆಯರನ್ನು ಮಾನವ ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಿದ್ದಾರೆ. ರೈಲಿನ ಪ್ರಯಾಣದ ಸಮಯದಲ್ಲಿ ಹೆರಿಗೆ ನೋವಿಗೆ ಒಳಗಾದ 130 ತಾಯಂದಿರಿಗೆ ಮಹಿಳಾ ಸಿಬ್ಬಂದಿ ಸಹಾಯ ಮಾಡಿದ್ದಾರೆ ಎಂದು ತಿಳಿಸಿದೆ.

ಇನ್ನು 1,85,000ಕ್ಕೂ ಹೆಚ್ಚು ಸಹಾಯವಾಣಿ ಕರೆಗಳಿಗೆ ಆರ್‌ಪಿಎಫ್ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸಲು ತ್ವರಿತವಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷವಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಮಹಿಳೆಯರು, ನಿರ್ಗತಿಕರು, ಅಸ್ವಸ್ಥರು, ವೃದ್ಧರು ಮತ್ತು ವಿಶೇಷಚೇತನರಿಗೆ ಸಹಾಯ ಮಾಡಿದ್ದಾರೆ. ರೈಲ್ವೆಯು ಸಾರ್ವಜನಿಕ ಸಾರಿಗೆಯ ಪ್ರಾಥಮಿಕ ವಿಧಾನವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯು ನಮ್ಮ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಪ್ರಮುಖವಾಗಿದೆ ಎಂದು ನಾರಿಯರಿಗೆ ಇಲಾಖೆ ಅಭಯ ನೀಡಿದೆ.

"ಮೇರಿ ಸಹೇಲಿ" ತಂಡದಲ್ಲಿ ಕೆಲಸ ಮಾಡುವ ಆರ್‌ಪಿಎಫ್‌ನ ಮಹಿಳಾ ಸಿಬ್ಬಂದಿ ದೇಶದ ವಿಶಾಲವಾದ ರೈಲ್ವೆ ನೆಟ್‌ವರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದೂರದ ಊರುಗಳಿಗೆ ರೈಲುಗಳಲ್ಲಿ ಒಂಟಿಯಾಗಿ ಪ್ರಯಾಣಿಸುವ ಅಸಂಖ್ಯಾತ ಮಹಿಳೆಯರಿಗೆ ಸಹಾಯ ಮತ್ತು ಭದ್ರತೆಯನ್ನು ನೀಡುತ್ತಾರೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಪುರುಷ ಸಹವರ್ತಿಗಳೊಂದಿಗೆ ಸೇರಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ 25 ಸದಸ್ಯರ ತಂಡವು "ಭಾರತದ ವಿವಿಧ ಭಾಗಗಳಿಂದ ಮತ್ತು ವಿವಿಧ ಶ್ರೇಣಿಯ ಅಧಿಕಾರಿಗಳು, ಡೈರೆಕ್ಟರ್ ಜನರಲ್‌ನಿಂದ ಹಿಡಿದು ಕಾನ್ಸ್​ಟೇಬಲ್‌ಗಳ ವರೆಗೆ ಮತ್ತು ಆರ್‌ಪಿಎಫ್‌ನ ಪ್ಯಾನ್-ಇಂಡಿಯನ್ ಪಾತ್ರವನ್ನು ಪ್ರತಿನಿಧಿಸುತ್ತದೆ. ಆರ್‌ಪಿಎಫ್ ನಾರಿಶಕ್ತಿಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ರಿಯಲ್ ಮ್ಯಾಂಗೋ ಬಳಸಿ ರೈಲ್ವೆ ಟಿಕೆಟ್ ಬುಕ್ಕಿಂಗ್​​: 994 ಮಂದಿ ಅರೆಸ್ಟ್​​​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.