ಚೆನ್ನೈ: 2012ರಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ನೈಫರ್ ಡಾಗ್ ರಾಣಿ (sniffer dog 'Rani) ವಯೋಸಹಜ ಕಾರಣದಿಂದ ನಿನ್ನೆ ಸೇವೆಯಿಂದ ನಿವೃತ್ತಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಶ್ವಾನಕ್ಕೆ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.
ಪಲವಂತಂಗಲ್‌ನಲ್ಲಿರುವ ಸಿಎಸ್‌ಐಎಫ್ ಕಚೇರಿಯಲ್ಲಿ ಡಿಐಜಿ ಶ್ರೀರಾಮ್ ಅಧ್ಯಕ್ಷತೆಯಲ್ಲಿ ಶ್ವಾನದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಚೆನ್ನೈ ವಿಮಾನ ನಿಲ್ದಾಣದ ನಿರ್ದೇಶಕ ಶರತ್ ಕುಮಾರ್ ವಿಶೇಷ ಅತಿಥಿಯಾಗಿದ್ದರು. ಶ್ವಾನಕ್ಕೆ ಹೂವಿನ ಹಾರ ಹಾಕಿ, ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಧಿಕಾರಿಗಳು ಕೇಕ್ ಕತ್ತರಿಸಿ 'ರಾಣಿ'ಯ ಬಾಯಿ ಸಿಹಿ ಮಾಡಿಸಿದರು.
ಡಿಐಜಿ ಶ್ರೀರಾಮ್ ಮಾತನಾಡಿ, "ಪ್ರಸ್ತುತ ಒಂಭತ್ತು ಸ್ನೈಫರ್ ಡಾಗ್‌ಗಳು ಚೆನ್ನೈ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. 10 ವರ್ಷ 6 ತಿಂಗಳ ಕಾಲ ಕೆಲಸ ಮಾಡಿದ ರಾಣಿ ಎಂಬ ಸ್ನೈಫರ್ ಡಾಗ್ ಇಂದು ನಿವೃತ್ತಿಯಾಗಿದೆ. ಇನ್ನೂ 2 ಸ್ನೈಫರ್ ಡಾಗ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ನವೆಂಬರ್‌ನಲ್ಲಿ ತರಬೇತಿ ಮುಗಿಸಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯಕ್ಕೆ ಸೇರಲಿವೆ" ಎಂದರು.
ಇದನ್ನೂ ಓದಿ: ಎರಡೇ ದಿನದ ಹಸುಳೆಯ ಬಾವಿಗೆಸೆದ ಕ್ರೂರಿ; ಮಗು ಜೀವಂತ ಹೊರಬಂದಿದ್ದು ಹೀಗೆ!