ETV Bharat / bharat

ಅತಿ ದೊಡ್ಡ ಇ-ತ್ಯಾಜ್ಯ ರೋಬೋ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

ಬೆರ್ಹಾಂಪುರ ನಗರದಲ್ಲಿರುವ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್​​ನಲ್ಲಿ ತರಬೇತಿ ಪಡೆದವರು ಇ-ತ್ಯಾಜ್ಯ ರೋಬೋ ಕಲಾಕೃತಿಯನ್ನು ರಚನೆ ಮಾಡಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ಗೆ ಸೇರ್ಪಡೆಯಾಗಿದೆ.

Robo registered as the tallest e-waste sculpture
ಅತಿ ದೊಡ್ಡ ಇ-ತ್ಯಾಜ್ಯ ರೋಬೋ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ
author img

By

Published : Feb 6, 2022, 6:54 AM IST

ಬೆರ್ಹಾಂಪುರ, ಒಡಿಶಾ: ಎಲೆಕ್ಟ್ರಾನಿಕ್ ವೇಸ್ಟ್ ಮೂಲಕ ಒಡಿಶಾದಲ್ಲಿ ನಿರ್ಮಿಸಲಾಗಿರುವ ರೋಬೋ ಮಾದರಿಯ ಕಲಾಕೃತಿಯೊಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲಾಗಿದೆ. ಬೆರ್ಹಾಂಪುರದಲ್ಲಿರುವ ಈ ರೋಬೋ 30 ಅಡಿ ಎತ್ತರ ಮತ್ತು 3 ಟನ್ ತೂಕವಿದ್ದು, ಎತ್ತರದ ಇ-ತ್ಯಾಜ್ಯದ ಕಲಾಕೃತಿ ಎಂದು ದಾಖಲಾಗಿದೆ.

2021ರ ವಿಶ್ವ ಪರಿಸರ ದಿನದಂದು ಬೆರ್ಹಾಂಪುರ ನಗರದಲ್ಲಿರುವ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್​​ನಲ್ಲಿ ತರಬೇತಿ ಪಡೆದವರು ಈ ಕಲಾಕೃತಿಯನ್ನು ರಚನೆ ಮಾಡಿದ್ದು, ಈ ಆ ಕಲಾಕೃತಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ಗೆ ಸೇರ್ಪಡೆಯಾಗಿದೆ.

ಎಲೆಕ್ಟ್ರಾನಿಕ್ ಆಟಿಕೆಗಳು, ಪ್ರಿಂಟರ್, ಪ್ರಿಂಟರ್ ಕಾರ್ಟ್ರಿಡ್ಜ್, ರ್‍ಯಾಮ್​, ಕೀಬೋರ್ಡ್, ಮೌಸ್, ಪಿಸಿಬಿ, ಮಾನಿಟರ್, ಮೊಬೈಲ್ ಫೋನ್‌ಗಳು, ಸಿಡಿ ಪ್ಲೇಯರ್, ಟಿವಿ ಮತ್ತು ವಿಸಿಆರ್ ಮುಂತಾದ ಎಲೆಕ್ಟ್ರಾನಿಕ್ ತ್ಯಾಜ್ಯಗಳಿಂದ ದೈತ್ಯಾಕಾರದ ರೋಬೋ ಅನ್ನು ರಚಿಸಲಾಗಿದೆ.

ಇದನ್ನೂ ಓದಿ: ಜಿಯೋದಿಂದ ಟೂ ಪ್ಲಾಟ್ಫಾರ್ಮ್​ನಲ್ಲಿ 15 ಮಿಲಿಯನ್ ಡಾಲರ್ ಹೂಡಿಕೆ

ಈ ಹಿಂದೆ, ಬೆರ್ಹಾಂಪುರದ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್​​ ಆವರಣದಲ್ಲಿ ಸ್ಥಾಪಿಸಲಾಗಿದ್ದ ತ್ಯಾಜ್ಯ ಕಲಾಕೃತಿಗಳ ಪಾರ್ಕ್​ ಅನ್ನು ಏಷ್ಯಾದ ಅತಿದೊಡ್ಡ ತ್ಯಾಜ್ಯ ಕಲಾಕೃತಿಗಳ ಪಾರ್ಕ್ ಎಂದು ಘೋಷಿಸಲಾಗಿತ್ತು. ಈಗ ಇಲ್ಲಿರುವ ರೋಬೋ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲಿಸಲ್ಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.