ETV Bharat / bharat

ಮನೆಗೆ ನುಗ್ಗಿ 2 ಕೋಟಿ ನಗದು, 1 ಕೆಜಿ ಚಿನ್ನಾಭರಣ ದರೋಡೆ

ಮನೆಗೆ ನುಗ್ಗಿದ ದುಷ್ಕರ್ಮಿಗಳು 2 ಕೋಟಿ ರೂ ನಗದು ಮತ್ತು 1 ಕೆಜಿ ಚಿನ್ನಾಭರಣ ದೋಚಿರುವ ಘಟನೆ ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯಲ್ಲಿ ನಡೆದಿದೆ.

robbery-in-latur-1-kg-of-gold-and-2-crore-cash-looted
ಮನೆಗೆ ನುಗ್ಗಿ 2 ಕೋಟಿ ನಗದು, 1 ಕೆಜಿ ಚಿನ್ನಾಭರಣ ದರೋಡೆ
author img

By

Published : Oct 12, 2022, 7:54 PM IST

ಲಾತೂರ್ (ಮಹಾರಾಷ್ಟ್ರ): ಮನೆಗೆ ನುಗ್ಗಿದ ದುಷ್ಕರ್ಮಿಗಳು ಎರಡು ಕೋಟಿ ರೂಪಾಯಿ ನಗದು ಹಾಗೂ ಒಂದು ಕೆಜಿ ಚಿನ್ನಾಭರಣ ದೋಚಿರುವ ಘಟನೆ ಲಾತೂರ್​ನ ವಿವೇಕಾನಂದ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕಾವಾ ನಾಕಾ ರಿಂಗ್ ರೋಡಿನ ಕನ್ಹಯ್ಯಾ ನಗರದ ಕಟ್ಪುರ್ ರಸ್ತೆಯಲ್ಲಿರುವ ರಾಜ್‌ಕುಮಾರ್ ಅಗರವಾಲ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಐದು ಮಂದಿ ದರೋಡೆ ನಡೆಸಿದ್ದು, ಈ ಪೈಕಿ ಮೂವರು 25 ರಿಂದ 30 ವರ್ಷ ವಯಸ್ಸಿನವರು ಮತ್ತಿಬ್ಬರು 35 ವರ್ಷ ಮೇಲ್ಪಟ್ಟವರು ಎಂದು ಹೇಳಲಾಗಿದೆ.

ಘಟನಾ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿರುವ ಮನೆಯವರು, ದರೋಡೆಕೋರರು ಮರಾಠಿಯಲ್ಲಿ ಮಾತನಾಡುತ್ತಿದ್ದರು. ದರೋಡೆಕೋರರಲ್ಲಿ ಒಬ್ಬರು ಮಿಲಿಟರಿ ಬಣ್ಣದ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು. ಇವರಲ್ಲಿ ನಾಲ್ವರು ಶೂ ಧರಿಸಿದ್ದರು ಮತ್ತು ಓರ್ವ ಚಪ್ಪಲಿ ಧರಿಸಿದ್ದ ಎಂದು ತಿಳಿದುಬಂದಿದೆ. ಪಿಸ್ತೂಲ್, ಚಾಕುಗಳನ್ನು ತೋರಿಸಿ ನಗದು ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ . ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಗಜಾನನ ಭತಲವಾಂಡೆ, ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗದಿರುವ ಕಾರಣ, ಕಳ್ಳರು ಎಷ್ಟು ಹಣವನ್ನು ಕದ್ದಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾರುಗಳಲ್ಲಿ 3 ಕೋಟಿಗೂ ಅಧಿಕ ನಗದು ಪತ್ತೆ: ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.