ETV Bharat / bharat

ಮದುವೆ ನಾಟಕವಾಡಿ ಗಂಡನ ಮನೆಯಿಂದ ನಗ, ನಾಣ್ಯ ದೋಚುವ ಚೆಲುವೆ: 31ನೇ ಶಾದಿಯಲ್ಲಿ ಸೆರೆ

ಮದುವೆಯ ನಾಟಕವಾಡುವ ಯುವತಿಯರು ವರನ ಮನೆಯಿಂದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗುವ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿವೆ.

Etv Bharat
Etv Bharat
author img

By

Published : Aug 25, 2022, 3:49 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಕಲಿ ವಧುಗಳ ಕಾಟ ಜೋರಾಗಿದೆ. ಇದೀಗ ಮಥುರಾ ಮತ್ತು ಲಖನೌದಲ್ಲಿ ಎರಡು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮಾಯಕ ಹುಡುಗರನ್ನು ಪ್ರೀತಿಯ ಬಲೆಗೆ ಬೀಳಿಸುವ ಈ ವಂಚಕಿಯರು ಮದುವೆ ಮಾಡಿಕೊಂಡು, ಬಳಿಕ ಗಂಡನ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚುತ್ತಿದ್ದಾರೆ. ಇಂಥ ದುಷ್ಕೃತ್ಯಕ್ಕಾಗಿ ಯುವತಿಯರು ಪ್ರಿಯಕರನ ನೆರವು ಪಡೆಯುತ್ತಿದ್ದಾರೆ.

ರಾಜಸ್ಥಾನದಲ್ಲಿ ಓದುತ್ತಿದ್ದೇನೆ. ಲಖನೌ ಗೋಸೈಗಂಜ್​​​ ಪ್ರದೇಶದಲ್ಲಿ ವಾಸವಿರುವುದಾಗಿ ಪರಿಚಯಿಸಿಕೊಂಡ ಯುವತಿಯೊಬ್ಬಳು ಮದುವೆ ದಿನ ಚಿನ್ನಾಭರಣದೊಂದಿಗೆ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಈ ಹಿಂದೆಯೂ ಕೂಡ ಇಂತಹ ಅನೇಕ ಪ್ರಕರಣಗಳಲ್ಲಿ ಈಕೆ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಮತ್ತಷ್ಟು ವಿವರ: 2022ರ ಜುಲೈ 4ರಂದು ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ತನ್ನ ಅತ್ತೆ ಹಾಗೂ ಗಂಡನಿಗೆ ಆಹಾರದಲ್ಲಿ ಅಮಲು ಬರುವ ಪದಾರ್ಥ ತಿನ್ನಿಸಿ, ಮೂರ್ಛೆಗೊಳಿಸಿದ್ದಾಳೆ. ನಂತರ ಮನೆಯಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಆಗಿದ್ದಾಳೆ. ಬೆಳಗ್ಗೆದ್ದು ನೋಡಿದಾಗ ಎಲ್ಲರಿಗೂ ದಿಗ್ಬ್ರಮೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ವಧುವಿಗೋಸ್ಕರ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸಿದ್ದಾರೆ.

ಇದೇ ಯುವತಿ ಇಲ್ಲಿಯವರೆಗೆ 31 ಬಾರಿ ಮದುವೆ ಮಾಡಿಕೊಂಡಿದ್ದಾಳೆ. ಕಳೆದ ವರ್ಷ ಮಧ್ಯಪ್ರದೇಶದ ಜಬಲ್ಪುರನ ಯುವಕನನ್ನು ವರಿಸಿದ್ದಳು. ಉಡುಗೊರೆಯಾಗಿ ನೀಡಿದ್ದ 5 ಲಕ್ಷ ರೂಪಾಯಿ ಹಾಗೂ ಆಭರಣಗಳನ್ನು ತೆಗೆದುಕೊಂಡು ಗಾಯಬ್ ಆಗಿದ್ದಳು. ಗಂಡನ ಮೇಲೆ ತನ್ನ ಸಹಚರರಿಂದ ಹಲ್ಲೆ ಕೂಡಾ ಮಾಡಿಸಿದ್ದಳಂತೆ.

ಇದನ್ನೂ ಓದಿ: ಮದುವೆ ನೆಪದಲ್ಲಿ ವ್ಯಕ್ತಿಗೆ ವಂಚನೆ: 10 ಲಕ್ಷ ಪಡೆದು ಮೊದಲ ಗಂಡನೊಂದಿಗೆ ಮಹಿಳೆ ಪರಾರಿ!

ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶದಲ್ಲೆಲ್ಲಾ ಇದೇ ರೀತಿ ಮದುವೆ ಮಾಡಿಕೊಂಡಿರುವ ಯುವತಿ ಚಿನ್ನ, ಬೆಳ್ಳಿ, ನಗದು ದೋಚಿದ್ದಾಳೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಮದುವೆ ಮಾಡಿಕೊಳ್ಳಲು ಹೋಗಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಳು. ಅವಮಾನದಿಂದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿಲ್ಲ ಎನ್ನಲಾಗ್ತಿದೆ. ಮ್ಯಾಟ್ರಿಮೋನಿಯಲ್​ ವೆಬ್​​​ಸೈಟ್ ಮೂಲಕ ಯುವಕರನ್ನು ಹುಡುಕಿಕೊಂಡು ಅವರನ್ನು ಭೇಟಿಯಾಗಿ, ಪ್ರೀತಿಯ ನಾಟಕವಾಡಿ ಈಕೆ ಮೋಸಗೊಳಿಸುತ್ತಿದ್ದಳು. ಈ ಹಿಂದೆ ಸೆಪ್ಟೆಂಬರ್​​ 2020ರಲ್ಲೂ ದೇವಸ್ಥಾನದಲ್ಲಿ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದ ಯುವತಿ, ಅತ್ತೆಯ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಾಕಷ್ಟು ಹಣದೊಂದಿಗೆ ಓಡಿ ಹೋಗಿದ್ದಳು ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.