ಬಿಜ್ನೋರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಕೊತ್ವಾಲಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ನದಿಯ ನೀರು ಹರಿದ್ವಾರ ರಸ್ತೆ ಮೇಲೆಯೇ ಹರಿಯುತ್ತಿದೆ. ಈ ರಸ್ತೆ ಮಧ್ಯೆಯೇ ಬಸ್ ಸಿಲುಕಿಕೊಂಡಿದೆ. ಚಾಲಕನ ಈ ನೀರಿನಿಂದ ಬಸ್ ಅನ್ನು ಹೊರತೆಗೆಯಲು ಪ್ರಾರಂಭಿಸಿದನು. ಬಸ್ ಬಲವಾದ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರಿಂದ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ನೂಕುನುಗ್ಗಲು ಉಂಟಾಯಿತು. ಬಸ್ನಲ್ಲಿ ಸುಮಾರು 50 ಪ್ರಯಾಣಿಕರು ಸಿಲುಕಿದ್ದಾರೆ. ಕೆಲ ಪ್ರಯಾಣಿಕರು ಬಸ್‌ನ ಮೇಲೆ ಕುಳಿತು, ರಕ್ಷಿಸುವಂತೆ ಮನವಿ ಮಾಡಿದರು. ಪೊಲೀಸರ ತಂಡ ಕೂಡ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಸೇತುವೆ ಮೇಲೆ ಕ್ರೇನ್ ಇರಿಸಿ ಬಸ್ ಪಲ್ಟಿಯಾಗದಂತೆ ತಡೆಯುವ ಪ್ರಯತ್ನ ನಡೆಸಲಾಗುತ್ತಿದೆ. ಸಾವು ಬದುಕಿನ ನಡುವೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಮಂಡಾವಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ನಿರಂತರ ಮಳೆಯಾಗುತ್ತಿರುವುದರಿಂದ ನದಿಗಳೆಲ್ಲ ಉಕ್ಕಿ ಹರಿಯುತ್ತಿವೆ. ಬಿಜ್ನೋರ್‌ನ ಕೋಟಾ ನದಿಯೂ ಉಕ್ಕಿ ಹರಿಯುತ್ತಿದೆ. ಶನಿವಾರ ನದಿ ದಾಟುತ್ತಿದ್ದ ಪ್ರಯಾಣಿಕರಿಂದ ತುಂಬಿದ್ದ ಬಸ್ ನದಿಯ ಬಲವಾದ ಪ್ರವಾಹಕ್ಕೆ ಇದ್ದಕ್ಕಿದ್ದಂತೆ ಸಿಲುಕಿತು. ನದಿಯಲ್ಲಿ ಬಸ್ ಸಿಲುಕಿದ್ದರಿಂದ ಪ್ರಯಾಣಿಕರಲ್ಲಿ ಭಯ ಮೂಡಿತು. ಮತ್ತೊಂದೆಡೆ ಬಸ್ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಬಿಜ್ನೋರ್‌ನ ರಕ್ಷಣಾ ತಂಡವು ಹರಿದ್ವಾರ ರಸ್ತೆಯಲ್ಲಿ ಸಿಲುಕಿದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಯತ್ನಗಳು ನಡೆಸುತ್ತಿದೆ.
ಜೆಸಿಬಿ ಯಂತ್ರದಿಂದ ಪ್ರಯಾಣಿಕರ ರಕ್ಷಣೆ: ಬಿಜ್ನೋರ್ ನ ನಜೀಬಾಬಾದ್ ಡಿಪೋದಿಂದ ಶನಿವಾರ ಬೆಳಗ್ಗೆ ಸುಮಾರು 8 ಗಂಟೆಗೆ ಬಸ್ ಹರಿದ್ವಾರಕ್ಕೆ ಹೊರಟಿತ್ತು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಗಡಿಯಲ್ಲಿರುವ ಕೊತ್ವಾಲಿ ನದಿಯಲ್ಲಿ ವಿಪರೀತ ಪ್ರವಾಹದ ಕಾರಣ, ಆ ಮೂಲಕ ಹಾದು ಹೋಗುತ್ತಿದ್ದ ಬಸ್ ಇದ್ದಕ್ಕಿದ್ದಂತೆ ನೀರಿನಲ್ಲಿ ಸಿಲುಕಿಕೊಂಡಿತು. ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಬಸ್‌ನಲ್ಲಿದ್ದ ಸುಮಾರು 50 ಪ್ರಯಾಣಿಕರು ನೀರಿನಲ್ಲಿ ಸಿಲುಕಿಕೊಂಡರು. ಮಾಹಿತಿ ಪಡೆದ ಉತ್ತರಾಖಂಡ ಹರಿದ್ವಾರ ಮತ್ತು ಉತ್ತರ ಪ್ರದೇಶದ ಬಿಜ್ನೋರ್ ರಕ್ಷಣಾ ತಂಡ ಅರ್ಧಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಜೆಸಿಬಿ ಯಂತ್ರದ ಮೂಲಕ ಎಲ್ಲ ಪ್ರಯಾಣಿಕರನ್ನು ಆಡಳಿತ ಮಂಡಳಿ ರಕ್ಷಣೆ ಮಾಡಿದೆ.
ಎಲ್ಲ ಪ್ರಯಾಣಿಕರು ಸುರಕ್ಷಿತ- ಎಸ್ಪಿ ಪ್ರವೀಣ್ ರಂಜನ್ ಸಿಂಗ್ ಮಾಹಿತಿ: ಘಟನೆಯ ಕುರಿತು ನಗರ ಎಸ್ಪಿ ಪ್ರವೀಣ್ ರಂಜನ್ ಸಿಂಗ್ ಅವರು ದೂರವಾಣಿಯಲ್ಲಿ ಮಾತನಾಡಿ, ನದಿಯ ಪ್ರವಾಹದಲ್ಲಿ ಬಸ್ ಸಿಲುಕಿಕೊಂಡಿದೆ. ಜೆಸಿಬಿ ಯಂತ್ರದ ಮೂಲಕ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದರು.
ಬಿಯಾಸ್‌ನಲ್ಲಿ ಈವರೆಗೆ 20 ಮೃತದೇಹಗಳು ಪತ್ತೆ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಯಾಸ್ ನದಿಯ ದಡದಲ್ಲಿ 3 ಮೃತದೇಹಗಳು ಮೃತದೇಹ ಪತ್ತೆಯಾಗಿವೆ. ಭಾರೀ ಮಳೆಯಿಂದಾಗಿ ಬಿಯಾಸ್ ನದಿ ಉಗ್ರ ಸ್ವರೂಪ ಪಡೆದುಕೊಂಡಿದೆ. ಬಿಯಾಸ್ ಪ್ರವಾಹದಲ್ಲಿ ಹಲವು ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ನಾಶವಾಗಿವೆ. ಈಗ ದುರಂತದ ನಂತರ ಎಲ್ಲೆಡೆ ವಿನಾಶದ ಚಿತ್ರಗಳು ಹೊರಬರುತ್ತಿವೆ. ಇದೇ ವೇಳೆ, ಬಿಯಾಸ್ ನದಿಯಲ್ಲಿ ಮೃತದೇಹ ಪತ್ತೆ ಕಾರ್ಯ ನಡೆಯುತ್ತಿದೆ. ಕುಲು ಜಿಲ್ಲೆಯ ಬಿಯಾಸ್‌ನಲ್ಲಿ ಈದುವರೆಗೆ 20 ಮೃತದೇಹಗಳು ಪತ್ತೆಯಾಗಿದ್ದು, ಈ ಪೈಕಿ 15 ಮಂದಿಯನ್ನು ಗುರುತಿಸಲಾಗಿದೆ. ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಕ್ಕಿ ಹರಿದ ದೂಧ್ ಗಂಗಾ, ಕೃಷ್ಣಾ, 16 ಸೇತುವೆಗಳು ಜಲಾವೃತ: ಬಂಗಾಲಿ ಬಾಬಾ ದರ್ಗಾಕ್ಕೂ ಜಲ ದಿಗ್ಭಂಧನ!