ಜಾಲೋರ್ (ರಾಜಸ್ಥಾನ): ವೇಗವಾಗಿ ಚಲಿಸುತ್ತಿದ್ದ ಕಾರೊಂದರ ಟೈರ್ ಒಡೆದು ಗ್ರಾನೈಟ್ ಬ್ಲಾಕ್‌ಗಳಿಂದ ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಹೋರ್ ಉಪವಿಭಾಗದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 325 ರಲ್ಲಿ ಕಾರೊಂದು ಅಹೋರ್‌ನಿಂದ ತಖತ್‌ಗಢಕ್ಕೆ ಬರುತ್ತಿತ್ತು. ಈ ಸಂದರ್ಭದಲ್ಲಿ ಅಹೋರ್‌ನ ಸೆದರಿಯಾ ಪಯೌ ಬಳಿ ರಸ್ತೆಯಲ್ಲಿ ಟೈರ್ ಒಡೆದ ಕಾರಣ ರಸ್ತೆ ಬದಿ ಗ್ರಾನೈಟ್ ಬ್ಲಾಕ್‌ಗಳಿಂದ ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ಟ್ರಕ್‌ಗೆ ಗುದ್ದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಓದಿ: ರಾಯಚೂರಲ್ಲಿ ಭೀಕರ ರಸ್ತೆ ಅಪಘಾತ : ಯುವಕರಿಬ್ಬರ ಅಂಗಾಂಗಗಳು ಛಿದ್ರ ಛಿದ್ರ
ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ವಶಕ್ಕೆ ಪಡೆದ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್ಪಿ ಹರ್ಷವರ್ಧನ್ ಅಗರವಾಲಾ ಮತ್ತು ಜಿಲ್ಲಾಧಿಕಾರಿ ನಿಶಾಂತ್ ಜೈನ್ ಸ್ಥಳಕ್ಕೆ ಆಗಮಿಸಿದರು. ಮೃತದೇಹಗಳನ್ನು ಇನ್ನೂ ಗುರುತಿಸಬೇಕಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.