ನವದೆಹಲಿ: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಾಟ್ ಸಮುದಾಯದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅಮಿತ್ ಶಾ ಇತ್ತೀಚೆಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರಿಗೆ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಜಯಂತ್ ಚೌಧರಿ ತಿರಸ್ಕರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಯಂತ್ ಚೌಧರಿ, ಬಿಜೆಪಿ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಶಾ ತಿರುಗೇಟು ನೀಡಿದ್ದಾರೆ. ಮೊದಲಿಗೆ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿ ಮೃತಪಟ್ಟ 700 ರೈತರ ಕುಟುಂಬಗಳನ್ನು ನಿಮ್ಮ ಪಕ್ಷಕ್ಕೆ ಆಹ್ವಾನಿಸಿ, ನನ್ನನ್ನು ನಿಮ್ಮ ಪಕ್ಷಕ್ಕೆ ಆಹ್ವಾನಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
न्योता मुझे नहीं, उन +700 किसान परिवारों को दो जिनके घर आपने उजाड़ दिए!!
— Jayant Singh (@jayantrld) January 26, 2022 " class="align-text-top noRightClick twitterSection" data="
">न्योता मुझे नहीं, उन +700 किसान परिवारों को दो जिनके घर आपने उजाड़ दिए!!
— Jayant Singh (@jayantrld) January 26, 2022न्योता मुझे नहीं, उन +700 किसान परिवारों को दो जिनके घर आपने उजाड़ दिए!!
— Jayant Singh (@jayantrld) January 26, 2022
ಉತ್ತರ ಪ್ರದೇಶ ಚುನಾವಣೆಗೆ ಆರ್‌ಎಲ್‌ಡಿ - ಎಸ್‌ಪಿ ಮೈತ್ರಿಯನ್ನು ಉಲ್ಲೇಖಿಸಿ ಮಾತನಾಡಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ 'ಚುನಾವಣೆ ನಂತರ ಹಲವು ಮಾರ್ಗಗಳಿವೆ. ಅಮಿತ್ ಶಾ ಅವರು ಜಯಂತ್ ಚೌಧರಿಗೆ ಪಕ್ಷಕ್ಕೆ ಸೇರಲು ಆಹ್ವಾನ ನೀಡಿದ್ದಾರೆ. ಈಗ ಸದ್ಯಕ್ಕೆ ಜಯಂತ್ ಚೌಧರಿ ತಪ್ಪು ದಾರಿಯಲ್ಲಿದ್ದಾರೆ' ಎಂದಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬುಧವಾರ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ನಿವಾಸದಲ್ಲಿ ಉತ್ತರ ಪ್ರದೇಶದ ಜಾಟ್ ನಾಯಕರೊಂದಿಗೆ ಅಮಿತ್ ಶಾ ಸಭೆ ಮುಕ್ತಾಯವಾಯಿತು. ಈ ಸಭೆಯಲ್ಲೇ ಜಯಂತ್ ಚೌಧರಿ ಸೇರಿದಂತೆ ಚುನಾವಣಾ ವಿಚಾರಗಳ ಬಗ್ಗೆ ಚರ್ಚಿಸಲಾಗಿತ್ತು. ಆರ್‌ಎಲ್‌ಡಿ ಪಕ್ಷದ ಮುಖ್ಯಸ್ಥ ಬಿಜೆಪಿ ಆಹ್ವಾನವನ್ನು ತಿರಸ್ಕಾರ ಮಾಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಇದನ್ನೂ ಓದಿ: ಪ್ರತಿಪಕ್ಷ ನಾಯಕರಾಗಿ ಯೋಗಿ ನೋಡಲು ಬಯಸುತ್ತೇನೆ: ರಾಕೇಶ್ ಟಿಕಾಯತ್