ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಹಲವಾರು ಬಾರಿ ಗಾಂಜಾ ಖರೀದಿಸಿ ಸುಶಾಂತ್ ಸಿಂಗ್‌ಗೆ ನೀಡಿದ್ದಾರೆ ಎಂದು ಎನ್‌ಸಿಬಿ ಆರೋಪಿಸಿ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಪಡಿಸಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಾವಿನ ನಂತರ ಡ್ರಗ್ಸ್-ಸಂಬಂಧಿತ ಪ್ರಕರಣ ಮುನ್ನೆಲೆಗೆ ಬಂದಿತು. NCB ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಅವರ ಗೆಳತಿ ರಿಯಾ ಮತ್ತು ಅವರ ಸಹೋದರ ಶೌವಿಕ್ರನ್ನು ಇತರ ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಬಂಧಿಸಲಾಗಿತ್ತು. ಅವರಲ್ಲಿ ಹಲವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಎನ್‌ಸಿಬಿ ಪ್ರಕರಣದ 35 ಆರೋಪಿಗಳ ವಿರುದ್ಧ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಓದಿ: ಎನ್‌ಸಿಬಿ ಕಚೇರಿಯಲ್ಲಿ ಮತ್ತೆ ಕಾಣಿಸಿಕೊಂಡ ರಿಯಾ, ಶೋವಿಕ್
ಚಾರ್ಜ್ಶೀಟ್ ಆರೋಪಗಳ ಪ್ರಕಾರ, ಎಲ್ಲಾ ಆರೋಪಿಗಳು ಮಾರ್ಚ್ ಮತ್ತು ಡಿಸೆಂಬರ್ 2020 ರ ನಡುವೆ ಮೇಲ್ಜಾತಿ ಸಮಾಜ ಮತ್ತು ಬಾಲಿವುಡ್‌ನಲ್ಲಿ ಮಾದಕವಸ್ತುಗಳನ್ನು ಖರೀದಿಸಲು, ಮಾರಾಟ ಮತ್ತು ವಿತರಿಸಲು ಸಂಚು ರೂಪಿಸಿದ್ದಾರೆ. ಆರೋಪಿಗಳು ಮಾದಕವಸ್ತು ಕಳ್ಳಸಾಗಣೆಗೆ ಹಣಕಾಸು ಒದಗಿಸಿದ್ದಾರೆ ಮತ್ತು ಗಾಂಜಾ, ಹಶಿಶ್, ಕೊಕೇನ್ ಮತ್ತು ಇತರ ಮಾದಕ ದ್ರವ್ಯಗಳನ್ನು ಮಾರಾಟ ಮಾಡಿದ್ದಾರೆ. ಆದ್ದರಿಂದ, ಎಲ್ಲಾ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಮತ್ತು 27 ಎ, 28 ಮತ್ತು 29 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ರಿಯಾ ಚಕ್ರವರ್ತಿ ಸೇರಿದಂತೆ ಪ್ರಕರಣದ ಆರೋಪಿಗಳು ಮತ್ತು ಮಾದಕವಸ್ತು ವ್ಯಾಪಾರಿಗಳಾದ ಸ್ಯಾಮ್ಯುಯೆಲ್ ಮಿರಾಂಡಾ, ಶೌವಿಕ್, ದೀಪೇಶ್ ಸಾವಂತ್ ಹಾಗೂ ಇತರ ಪೆಡ್ಲರ್‌ಗಳಿಂದ ಸುಶಾಂತ್‌ಗೆ ಹಲವಾರು ಬಾರಿ ಗಾಂಜಾ ನೀಡಿದ್ದಾರೆ. ಶೌವಿಕ್ ಮತ್ತು ಸುಶಾಂತ್ ಪ್ರಕಾರ, ಅವರು ಮಾರ್ಚ್ ಮತ್ತು ಸೆಪ್ಟೆಂಬರ್ 2020ರ ವರೆಗೆ ಡ್ರಗ್ಸ್‌ಗೆ ಹಣ ಪಾವತಿಸಿದ್ದಾರೆ ಎಂದು ಎನ್‌ಸಿಬಿ ತಿಳಿಸಿದೆ.
ರಿಯಾ ಸಹೋದರ ಶೌವಿಕ್ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಅವರಿಂದ ಗಾಂಜಾ ಮತ್ತು ಹಶಿಶ್ ಆರ್ಡರ್‌ಗಳನ್ನು ಪಡೆದು ಸುಶಾಂತ್‌ಗೆ ಹಸ್ತಾಂತರಿಸುತ್ತಿದ್ದರು ಎಂದು ಎನ್‌ಸಿಬಿ ಚಾರ್ಜ್ಶೀಟ್ನಲ್ಲಿ ವಿವರಿಸಿದೆ.