ETV Bharat / bharat

ಜನರು 2 ರಿಂದ 4 ತಿಂಗಳು ಈರುಳ್ಳಿ ತಿನ್ನದಿದ್ದರೆ ವ್ಯತ್ಯಾಸವಾಗೋದಿಲ್ಲ: ಮಹಾರಾಷ್ಟ್ರ ಸಚಿವ ದಾದಾ ಭೂಸೆ - ಕೇಂದ್ರದ ವಿರುದ್ಧ ಅಸಮಾಧಾನ

''ಎರಡು ನಾಲ್ಕು ತಿಂಗಳ ಕಾಲ ಜನರು ಈರುಳ್ಳಿ ಸೇವಿಸದಿದ್ದರೆ, ಯಾವುದೇ ವ್ಯತ್ಯಾಸವಾಗುವುದಿಲ್ಲ'' ಎಂದು ಮಹಾರಾಷ್ಟ್ರ ಸೇನಾ - ಬಿಜೆಪಿ ಸರ್ಕಾರದ ಪಿಡಬ್ಲ್ಯೂಡಿ ಸಚಿವ ದಾದಾ ಭೂಸೆ ಅವರು ವಿಚಿತ್ರ ಸಲಹೆ ನೀಡಿದ್ದಾರೆ. ಬೆಲೆ ಏರಿಕೆಯನ್ನು ತಡೆಯಲು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆಗಳ ನಡುವೆಯೇ ಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಪಿಡಬ್ಲ್ಯೂಡಿ ಸಚಿವ ದಾದಾ ಭೂಸೆ
If people don't eat onions for 2-4 months, it makes no difference: Maharashtra Minister Bhuse
author img

By ETV Bharat Karnataka Team

Published : Aug 22, 2023, 12:10 PM IST

ಮುಂಬೈ (ಮಹಾರಾಷ್ಟ್ರ): ಈರುಳ್ಳಿ ಮೇಲೆ ಶೇ 40 ರಫ್ತು ಸುಂಕ ವಿಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆಗಳ ಮಧ್ಯೆಯೇ, ಮಹಾರಾಷ್ಟ್ರದ ಸಚಿವ ದಾದಾ ಭೂಸೆ ಅವರು ಜನರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ''ಜನರು ಪ್ರಮುಖ ಅಡಿಗೆ ಪದಾರ್ಥಗಳಲ್ಲಿ ಬಳಕೆಯಾಗುವ ಈರುಳ್ಳಿಯನ್ನು ಎರಡರಿಂದ ನಾಲ್ಕು ತಿಂಗಳುಗಳವರೆಗೆ ಸೇವಿಸದಿದ್ದರೆ, ಯಾವುದೇ ವ್ಯತ್ಯಾಸವೇನು ಆಗುವುದಿಲ್ಲ'' ಎಂದು ಅವರು ಹೇಳಿದ್ದಾರೆ. ರಾಜ್ಯ ಪಿಡಬ್ಯ್ಲೂಡಿ ಸಚಿವ ಭೂಸೆಯವರು, ''ರಫ್ತು ಸುಂಕವನ್ನು ವಿಧಿಸುವ ನಿರ್ಧಾರವನ್ನು ಸರಿಯಾಗಿ ಚರ್ಚೆಸಿ ತೆಗೆದುಕೊಳ್ಳಬೇಕಿತ್ತು ಎಂದು ಸೋಮವಾರ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಆಗಸ್ಟ್ 19 ರಂದು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿ ಬೆಲೆ ಏರಿಕೆ ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಿದೆ. ಹಣಕಾಸು ಸಚಿವಾಲಯವು ಅಧಿಸೂಚನೆಯ ಮೂಲಕ ಡಿಸೆಂಬರ್ 31, 2023 ರವರೆಗೆ ಈರುಳ್ಳಿಯ ಮೇಲೆ 40 ಪ್ರತಿಶತ ರಫ್ತು ಸುಂಕವನ್ನು ವಿಧಿಸಿದೆ. "ನೀವು 10 ಲಕ್ಷ ರೂ. ಮೌಲ್ಯದ ವಾಹನವನ್ನು ಬಳಸಿದಾಗ, ನೀವು ಚಿಲ್ಲರೆ ದರಕ್ಕಿಂತ 10 ರೂ. ಅಥವಾ ರೂ 20 ರಷ್ಟು ಹೆಚ್ಚಿನ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಈರುಳ್ಳಿ ಖರೀದಿಸಲು ಸಾಧ್ಯವಾಗದವರು ಎರಡರಿಂದ ನಾಲ್ಕು ತಿಂಗಳ ಕಾಲ ಈರುಳ್ಳಿ ತಿನ್ನದಿದ್ದರೆ, ಯಾವುದೇ ವ್ಯತ್ಯಾಸವೇನಾಗುವುದಿಲ್ಲ'' ಎಂದು ಸಚಿವ ಭೂಸೆ ಹೇಳಿದರು.

ರಫ್ತು ಸುಂಕ ವಿಧಿಸುವ ನಿರ್ಧಾರವನ್ನು ಸರಿಯಾದ ಆಲೋಚಿಸಿ ತೆಗೆದುಕೊಳ್ಳಬೇಕಿತ್ತು ಎಂದು ಅವರು ಹೇಳಿದರು. ಕೆಲವೊಮ್ಮೆ ಈರುಳ್ಳಿ ಕ್ವಿಂಟಲ್‌ಗೆ 200 ರೂ. ದರ ಇರುತ್ತದೆ. ಆದರೆ, ಕೆಲವೊಮ್ಮೆ ಕ್ವಿಂಟಲ್‌ಗೆ 2,000 ರೂ. ಬೆಲೆ ಕೂಡಾ ಇರುತ್ತದೆ. ಚರ್ಚೆ ನಡೆಸಿ, ಸರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಭೂಸೆ ಹೇಳಿದರು.

ರೈತರು, ವ್ಯಾಪಾರಿಗಳಿಂದ ಪ್ರತಿಭಟನೆ: ನಿನ್ನೆ (ಸೋಮವಾರ) ವ್ಯಾಪಾರಸ್ಥರು ನಾಸಿಕ್‌ನ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಈರುಳ್ಳಿ ಹರಾಜನ್ನು ಅನಿರ್ದಿಷ್ಟಾವಧಿಗೆ ಮುಚ್ಚಲು ನಿರ್ಧರಿಸಿದರು. ಕೇಂದ್ರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಅನಿರ್ದಿಷ್ಟಾವಧಿಯವರೆಗೆ ಈರುಳ್ಳಿ ಹರಾಜಿನಲ್ಲಿ ಪಾಲ್ಗೊಳ್ಳದಂತೆ ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲ್‌ಗಾಂವ್ ಸೇರಿದಂತೆ ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ರಫ್ತು ಸುಂಕ ಹಿಂಪಡೆಯುವಂತೆ ಒತ್ತಾಯಿಸಿ ಹಲವಾರು ರೈತರು ಮತ್ತು ವ್ಯಾಪಾರಿಗಳು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: 15ನೇ ಬ್ರಿಕ್ಸ್​ ಶೃಂಗಸಭೆ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.