ಲುಧಿಯಾನ: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ಯುಕೆಯ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ, ರಿಷಿ ಸುನಕ್ಗೂ ಪಂಜಾಬ್‌ನ ಲುಧಿಯಾನ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ.
ಹೌದು, ಮಾಹಿತಿಯ ಪ್ರಕಾರ, ರಿಷಿ ಸುನಕ್ ಅವರ ಅಜ್ಜ ಅಜ್ಜಿ ಪಂಜಾಬ್ ಮೂಲದವರು. ಸುನಕ್ ಅವರ ತಾಯಿಯ ಕುಟುಂಬವು ಲುಧಿಯಾನಾದ ಜಸ್ಸೋವಾಲ್ ಸುದ್ದ್ ಗ್ರಾಮದಲ್ಲಿ ನೆಲೆಸಿತ್ತು. ರಿಷಿ ಅವರ ಅಜ್ಜ ರಘುಬೀರ್ ಸುನಕ್ ಲುಧಿಯಾನದ ವ್ಯಾಪಾರಿ ಕುಟುಂಬಕ್ಕೆ ಸೇರಿದವರಾಗಿದ್ದು, ಹಲವು ವರ್ಷಗಳ ಹಿಂದೆ ಕುಟುಂಬ ಸಮೇತರಾಗಿ ಆಫ್ರಿಕಾಕ್ಕೆ ವಲಸೆ ಹೋಗಿದ್ದರು. ಆದರೆ, ಅಲ್ಲಿನ ಸರ್ಕಾರವು ಭಾರತೀಯರನ್ನು ಹೊರಹಾಕಿದಾಗ, ಸುನಕ್ ಕುಟುಂಬವು ಇಂಗ್ಲೆಂಡ್‌ಗೆ ಹೋಯಿತು.
ಇದನ್ನೂ ಓದಿ: ಬ್ರಿಟನ್‌ನ ಮೊಟ್ಟ ಮೊದಲ ಹಿಂದೂ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ!
ರಿಷಿ ಸುನಕ್ ಅವರ ಅಜ್ಜ ಅಜ್ಜಿ ಕುಟುಂಬವು ಮುಲ್ಲನ್‌ಪುರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲುಧಿಯಾನಾದ ಜಸ್ಸೋವಾಲ್ ಗ್ರಾಮಕ್ಕೆ ಸೇರಿದೆ. ರಿಷಿ ಅವರು ಹಳ್ಳಿಯಲ್ಲಿ ರೇಶಮ್ ಎಂದು ಹೆಚ್ಚು ಜನಪ್ರಿಯರಾಗಿದ್ದರು. ಅತ್ಯಂತ ಸೌಮ್ಯ ಮತ್ತು ಕಠಿಣ ಪರಿಶ್ರಮಿ ಪಂಜಾಬಿ ಹಿಂದೂ ಕುಟುಂಬದ ಯುವಕನೊಬ್ಬ ಇಂಗ್ಲೆಂಡ್‌ನಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿರುವುದು ಭಾರತಕ್ಕೆ ಮತ್ತು ವಿಶೇಷವಾಗಿ ಪಂಜಾಬ್‌ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ಆರ್ಥಿಕ ಸಶಕ್ತ ದೇಶ ಕಟ್ಟುವೆ, ಮಾತಲ್ಲಿ ಅಲ್ಲ ಮಾಡಿ ತೋರಿಸುವೆ: ರಿಷಿ ಸುನಕ್ ಭರವಸೆ
ರಿಷಿ ಸೂನಕ್ ಅವರ ಅಜ್ಜ ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ಸಾಹಿಬ್ ಅವರೊಂದಿಗೆ ದೀರ್ಘಕಾಲ ಜೈಲಿನಲ್ಲಿದ್ದರು. ಆದ್ದರಿಂದ ರಾಜಕೀಯದ ಗುಣಗಳನ್ನು ಆನುವಂಶಿಕವಾಗಿ ಪಡೆದಿರುವ ರಿಷಿ ಸುನಕ್ಗೆ ಇಡೀ ಪಂಜಾಬ್ ರಾಜ್ಯವೇ ಅಭಿನಂದನೆ ಸಲ್ಲಿಸಿದೆ.