ETV Bharat / bharat

ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ಮಾರ್ಗ ರಿಂಗಲ್ ಬುಟ್ಟಿ.. ಸಂಪ್ರದಾಯದ ಜತೆ ಪರಿಸರ ಸ್ನೇಹ..

ಈ ರಿಂಗಲ್‌ನಿಂದ ಬುಟ್ಟಿಗಳು, ಕೈಕಂಬಗಳು, ಪಾತ್ರೆಗಳು, ಹೂದಾನಿ, ಟಿ-ಟ್ರೇಗಳು, ಡಸ್ಟ್‌ಬಿನ್, ಮ್ಯಾಟ್‌ಗಳು ಸೇರಿದಂತೆ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ..

author img

By

Published : May 17, 2021, 6:11 AM IST

ringal-can-become-a-source-of-employment-for-the-youth-returning-home
ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ಮಾರ್ಗ ರಿಂಗಲ್ ಬುಟ್ಟಿ

ಡೆಹ್ರಾಡೂನ್(ಉತ್ತರಾಖಂಡ್): ಪರ್ವತಗಳ ಮೇಲೆ ಅಸಂಖ್ಯಾತ ಅದ್ಭುತ ಸಂಗತಿಗಳಿವೆ. ಅವುಗಳ ಉಪಯುಕ್ತತೆಯೂ ಕಳೆದು ಹೋಗುತ್ತಿದೆ. ರಿಂಗಲ್ ಅಥವಾ ರಿಂಗ್ಲು ಉತ್ತರಾಖಂಡದ ಬಹುಮುಖ ಸಸ್ಯವಾಗಿದೆ.

ಇದನ್ನು ಬಿದಿರಿನ ಕುಲ ಎಂದು ಪರಿಗಣಿಸಲಾಗಿದೆ. ಉತ್ತರಾಖಂಡದಲ್ಲಿ ಇದನ್ನು ಕುಬ್ಜ ಬಿದಿರು ಅಂತಲೂ ಕರೆಯುತ್ತಾರೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಮನೆಗೆ ಮರಳುವ ಯುವಕರಿಗೆ ರಿಂಗಲ್ ಬುಟ್ಟಿ ತಯಾರಿಕೆಯು ಆರ್ಥಿಕ ಮೂಲವಾಗುತ್ತಿದೆ.

ಸಾವಿರದಿಂದ ಏಳು ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ ರಿಂಗಲ್ ಕಂಡು ಬರುತ್ತದೆ. ಆದಾಗ್ಯೂ, ರಿಂಗಲ್ ಗಿಡವು ಬಿದಿರಿನಷ್ಟು ಎತ್ತರವಾಗಿ ಬೆಳೆಯುವುದಿಲ್ಲ. ಇದು 10-12 ಅಡಿ ಎತ್ತರ ಮತ್ತು ಬಿದಿರಿಗಿಂತ ಹೆಚ್ಚು ತೆಳುವಾಗಿರುತ್ತದೆ.

ಇದಕ್ಕೆ ನೀರು ಮತ್ತು ತೇವಾಂಶ ಬೇಕಾಗುತ್ತದೆ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಭೂಕುಸಿತವನ್ನು ತಡೆಗಟ್ಟಲು ಸಹ ಇದು ಸಹಾಯಕವಾಗಿದೆ.

ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ಮಾರ್ಗ ರಿಂಗಲ್ ಬುಟ್ಟಿ..

ರುದ್ರಪ್ರಯಾಗ್‌ನ ರಾಣಿಗಡ್ ಪಟ್ಟಿಯ ಗ್ರಾಮ ಪಂಚಾಯತ್​ ವ್ಯಾಪ್ತಿಯ ಕೋಟ್ ಮಲ್ಲಾ ಗ್ರಾಮದ ನಿವಾಸಿ ಜಗತ್ ಸಿಂಗ್ ಜಂಗ್ಲಿ, ತಾವು ಸಂರಕ್ಷಿಸಿರುವ ಕಾಡನ್ನು ಸಾಮಾನ್ಯ ಜನರ ಅನುಕೂಲಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಕಾಡಿನ ಸಂರಕ್ಷಣೆಯ ಕುರಿತು ಮಾದರಿಯಾಗಿದ್ದಾರೆ.

ಇಲ್ಲಿ 300ಕ್ಕೂ ಹೆಚ್ಚು ಪೊದೆ ಮಾದರಿಯಲ್ಲಿ ಸಸ್ಯಗಳಿವೆ. ಇವುಗಳನ್ನು ಒಂದೂವರೆಯಿಂದ ಎರಡು ವರ್ಷಗಳಲ್ಲಿ ಹಂತಹಂತವಾಗಿ ಕೊಯ್ಲು ಮಾಡಲಾಗುತ್ತಿದೆ.

ಈ ರಿಂಗಲ್‌ನಿಂದ ಬುಟ್ಟಿಗಳು, ಕೈಕಂಬಗಳು, ಪಾತ್ರೆಗಳು, ಹೂದಾನಿ, ಟಿ-ಟ್ರೇಗಳು, ಡಸ್ಟ್‌ಬಿನ್, ಮ್ಯಾಟ್‌ಗಳು ಸೇರಿದಂತೆ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಜಂಗ್ಲಿ ಅವರ ಕಠಿಣ ಪರಿಶ್ರಮದಿಂದಾಗಿ ಹಸಿರು ಕಾಡು ಸೃಷ್ಟಿಯಾಗಿದೆ. ಇದು ಜನರಿಗೆ ಸ್ಫೂರ್ತಿದಾಯಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.