ಪುದುಕೊಟ್ಟೈ(ತಮಿಳುನಾಡು): ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಫೈರಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡೊಂದು ಹಾರಿ ಬಂದು ಬಾಲಕನ ತಲೆಗೆ ತಗುಲಿ ತೀವ್ರ ಘಾಸಿ ಮಾಡಿದ ಘಟನೆ ತಮಿಳುನಾಡಿನ ಪುದುಕೊಟ್ಟೈನ ನರ್ತಮಲೈ ಎಂಬಲ್ಲಿ ನಡೆದಿದೆ. ಇದರಿಂದ ಕೆರಳಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಪುದುಕೊಟ್ಟೈನ ನರ್ತಮಲೈ ಎಂಬಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಫೈರಿಂಗ್ ರೇಂಜ್ ಇದ್ದು, ಸಿಬ್ಬಂದಿಗೆ ಫೈರಿಂಗ್ ತರಬೇತಿ ನೀಡಲಾಗುತ್ತಿತ್ತು. ಅಭ್ಯಾಸದ ವೇಳೆ ಹಾರಿದ ಗುಂಡೊಂದು ಸ್ವಲ್ಪ ದೂರವಿದ್ದ ಬಾಲಕನ ತಲೆ ಹೊಕ್ಕಿದೆ. ಇದರಿಂದ ಬಾಲಕ ತೀವ್ರ ಗಾಯಗೊಂಡಿದ್ದಾನೆ.
ತಕ್ಷಣವೇ ಆತನನ್ನು ಪುದುಕೊಟ್ಟೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಫೈರಿಂಗ್ ರೇಂಜ್ ಇರುವ ಸಮೀಪದಲ್ಲೇ ಬಾಲಕ ತನ್ನ ಅಜ್ಜನ ಜೊತೆ ವಾಸವಿದ್ದ ಎನ್ನಲಾಗಿದೆ.
ಇದರಿಂದ ಕೆರಳಿದ ಗ್ರಾಮಸ್ಥರು, ಸಂಬಂಧಿಕರು ಸಿಐಎಸ್ಎಫ್ ಸಿಬ್ಬಂದಿ ವಿರುದ್ಧ ಪ್ರತಿಭಟನೆಗಿಳಿದರು. ಅಲ್ಲದೇ ರಸ್ತೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಐಎಸ್ಎಫ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ಅಲ್ಲಿನ ಜಿಲ್ಲಾಧಿಕಾರಿ ಫೈರಿಂಗ್ ರೇಂಜ್ ಅನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: 2021ರಲ್ಲಿ ದೇಶಾದ್ಯಂತ 126 ಹುಲಿಗಳ ಸಾವು..10 ವರ್ಷಗಳಲ್ಲಿ ಇದೇ ಹೆಚ್ಚು!