ETV Bharat / bharat

ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಿಟ್ಟ ಧೀರೆ: ಕಾಡುಗಳ್ಳರ ವಿರುದ್ಧ ಫಾರೆಸ್ಟ್​ ಆಫೀಸರ್​ ಅಶ್ವಿನಾ ಸಮರ

author img

By

Published : Aug 10, 2022, 8:26 PM IST

ದೇಶ ರಕ್ಷಣೆಗೋಸ್ಕರ ಅನೇಕರು ತಮ್ಮ ಪ್ರಾಣ ಮುಡಿಪಾಗಿಟ್ಟಿದ್ದಾರೆ. ಅಂಥವರ ಸಾಲಿನಲ್ಲಿ ಗುಜರಾತ್​ನ ಈ ಮಹಿಳಾ ಫಾರೆಸ್ಟ್ ಆಫೀಸರ್​​ ಅಶ್ವಿನಾ ಪಾಟೀಲ್​ ಕೂಡ ಒಬ್ಬರು.

BRAVE RFO ASHWINA PATEL
BRAVE RFO ASHWINA PATEL

ಸೂರತ್​(ಗುಜರಾತ್​): ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಎಲ್ಲೆಡೆ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆ ಮಾಡಲಾಗ್ತಿದೆ. ಸ್ವಾತಂತ್ರ್ಯ ಸಮಯದಲ್ಲಿ ಅನೇಕ ವೀರಾಂಗನೆಯರು ಪ್ರಾಣಾರ್ಪಣೆ ಮಾಡಿದ್ದಾರೆ. ಈಗಲೂ ಅನೇಕರು ದೇಶದ ಒಳಿತಿಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ಹಾಗು ಜನಸೇವೆ ಮಾಡುತ್ತಿದ್ದಾರೆ. ಅಂತಹ ವೀರಾಗ್ರಣಿಗಳ ಸಾಲಿನಲ್ಲಿ ಗುಜರಾತ್​ನ ಸೂರತ್​​ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಫಾರೆಸ್ಟ್​ ಆಫೀಸರ್​(ಆರ್‌ಎಫ್‌ಒ) ಅಶ್ವಿನಾ ಪಾಟೀಲ್​​ ಕೂಡ ಒಬ್ಬರು.

ಕಾಡುಗಳ್ಳರ ವಿರುದ್ಧ ಫಾರೆಸ್ಟ್​ ಆಫೀಸರ್​ ಅಶ್ವಿನಾ ಸಮರ

ತಾಪಿ ವಿಭಾಗದ ಖೇರವಾಡ ರೇಂಜ್ ಆಫೀಸರ್​ ಆಗಿ ಕೆಲಸ ಮಾಡುತ್ತಿರುವ ಇವರು ಮರಗಳ್ಳತನ ಮಾಫಿಯಾ ವಿರುದ್ಧ ನಿರಂತರ ಸಮರ ಸಾರುತ್ತಿದ್ದಾರೆ. ರಾಯಲ್‌ ಎನ್‌ಫೀಲ್ಡ್‌​ ಬೈಕ್​ ಮೂಲಕ ಅರಣ್ಯ ಪ್ರದೇಶದಲ್ಲಿ ಒಬ್ಬಂಟಿಯಾಗಿ ಈಕೆ ಗಸ್ತು ತಿರುಗುತ್ತಾರೆ. ಇಲ್ಲಿಯವರೆಗೆ, ಮೂರು ಸಲ ಮರಗಳ್ಳರಿಂದ ಮಾರಣಾಂತಿಕವಾಗಿ ಹಲ್ಲೆಗೂ ಒಳಗಾಗಿದ್ದಾರೆ.

BRAVE RFO ASHWINA PATEL
ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಾಗಿಟ್ಟ ಧೀರೆ

10,200 ಹೆಕ್ಟೇರ್ ಅರಣ್ಯ ರಕ್ಷಣೆ: ಮಹಿಳಾ ಅರಣ್ಯಾಧಿಕಾರಿ ಅಶ್ವಿನಾ ತಾವು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿ 10,200 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಮರಗಳ್ಳರಿಂದ ರಕ್ಷಿಸಿದ್ದಾರೆ. ಇವರ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಈ ಪ್ರದೇಶದ ಜನರು ಕೊಂಡಾಡುತ್ತಾರೆ. ಅಶ್ವಿನಾ ಪಟೇಲ್​ ಕೆಲಸ ನಿರ್ವಹಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಚಿರತೆ, ಹುಲಿ ಸೇರಿದಂತೆ ಅನೇಕ ಕಾಡುಪ್ರಾಣಿಗಳು ಹೆಚ್ಚಾಗಿವೆ. ಇವುಗಳಿಂದ ರಕ್ಷಣೆ ಮಾಡಿಕೊಳ್ಳುತ್ತಾ ಆರ್​ಎಫ್​ಒ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ.

ಇದನ್ನೂ ಓದಿ: ನಾರಿ ಶಕ್ತಿ ಸಾಬೀತುಪಡಿಸಿದ ಕಾಸರಗೋಡು ಯುವತಿ: ಬೈಕ್​ನಲ್ಲಿ ದೇಶ-ವಿದೇಶ ಸುತ್ತಿ ಬಂದ್ರು ಅಮೃತಾ ಜೋಷಿ

ರಾಯಲ್ ಎನ್‌ಫೀಲ್ಡ್‌​ ಬೈಕ್​​ನಲ್ಲಿ ಗಸ್ತು: ದಟ್ಟ ಅರಣ್ಯ ಪ್ರದೇಶವಾಗಿರುವ ಕಾರಣ ಸರ್ಕಾರಿ ವಾಹನಗಳಲ್ಲಿ ಗಸ್ತು ತಿರುಗುವುದು ತುಂಬಾ ಕಷ್ಟ. ಹೀಗಾಗಿ, ಬುಲೆಟ್​​ ಮೇಲೆ ಗಸ್ತು ತಿರುತ್ತೇನೆಂದು ಅವರು ಹೇಳಿದ್ದಾರೆ. ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವುದು ಇನ್ನೂ ಕಷ್ಟಕರ. ಆದರೆ, ಮರಗಳ್ಳರ ಬಗ್ಗೆ ಮಾಹಿತಿ ಸಿಕ್ಕಾಗಲೆಲ್ಲ ಬುಲೆಟ್ ಮೂಲಕ ತೆರಳುತ್ತೇನೆ ಎಂದು ಅವರು ಹೇಳುತ್ತಾರೆ. ಅರಣ್ಯ ಪ್ರದೇಶದಲ್ಲಿ ಅನೇಕ ಬೆಲೆ ಬಾಳುವ ಮರಗಳಿದ್ದು, ಮಹಾರಾಷ್ಟ್ರದಿಂದ ಮರಗಳ್ಳರು ಇಲ್ಲಿಗೆ ಆಗಮಿಸುತ್ತಾರೆ ಎಂದರು.

ಔಷಧೀಯ ಗಿಡಮೂಲಿಕೆ ಹೆಚ್ಚಿಸಲು ಕ್ರಮ: ಅರಣ್ಯ ರಕ್ಷಣೆ ಮಾಡುವುದರ ಜೊತೆಗೆ ಅಶ್ವಿನಾ ಅವರು ಕಾಡಿನಲ್ಲಿ ವಿವಿಧ ಔಷಧೀಯ ಗುಣಗಳಿರುವ ಗಿಡಮೂಲಿಕೆ ಡಿಗಳನ್ನು ಬೆಳೆಸುವ ನಿರ್ಧಾರ ಕೈಗೊಂಡಿದ್ದು, ಅದಕ್ಕೋಸ್ಕರ ನರ್ಸರಿಯನ್ನೂ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.