ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್‌ನ ಉರ್ಸ್‌ನಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನ್ಪುರದ ಕವ್ವಾಲ್ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಆಯೋಗಿ ಆದಿತ್ಯನಾಥ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇಶದ ವಿರುದ್ಧವೂ ನೀಡಿರುವ ಅವಹೇಳನಕಾರಿ ಹೇಳಿಕೆಯ ವೈರಲ್ ವಿಡಿಯೋ ಆಧರಿಸಿ ರೇವಾ ಜಿಲ್ಲೆಯ ಮಂಗವಾನ್ ಪೊಲೀಸರು ಕವ್ವಾಲ್ ಷರೀಫ್ ಪರ್ವೇಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಪಂಚುಲಾಲ್ ಪ್ರಜಾಪತಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಪರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 505,153 ಮತ್ತು 280 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಗವಾನ್ ಪೊಲೀಸ್ ಠಾಣೆಯ ಪ್ರಭಾರಿ ಪಿಕೆ ದಹಿಯಾ ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಮಹಿಳೆಯ ಕೆನ್ನೆಗೆ ಮುತ್ತು: ಏಳು ವರ್ಷ ವಿಚಾರಣೆ, ಈಗ ಶಿಕ್ಷೆ ಪ್ರಕಟ