ನವದೆಹಲಿ: ಕೋವಿಡ್ನಿಂದ ಜಾರಿಯಾದ ಲಾಕ್ಡೌನ್ನಿಂದಾಗಿ 2020ರ ಡಿಸೆಂಬರ್ ಅಂತ್ಯದವರೆಗೆ ರೈಲ್ವೆ ಇಲಾಖೆಗೆ 36,993.82 ಕೋಟಿ ರೂ. ನಷ್ಟವಾಗಿದೆ. 2019ಕ್ಕೆ ಹೋಲಿಸಿದ್ರೆ, 32,768.97 ಕೋಟಿ ರೂ. ಪ್ರಯಾಣಿಕರ ಆದಾಯದಲ್ಲಿ ಕುಸಿತವಾಗಿದೆ.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಾರತೀಯ ರೈಲ್ವೆ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ನಿಲ್ಲಿಸಿ, ಪ್ರಯಾಣಿಕರಿಗಾಗಿ ವಿಶೇಷ ಶ್ರಮಿಕ್ ರೈಲುಗಳನ್ನು ಮೇ.12, 2020ರಲ್ಲಿ ಆರಂಭಿಸಿತು.
ಓದಿ:ಕುಸ್ತಿಪಟು ಸನ್ನಿ ಜಾಧವ್ಗೆ ಕ್ರೀಡಾ ಇಲಾಖೆಯಿಂದ ಆರ್ಥಿಕ ಸಹಾಯ
ರೈಲುಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗಿದೆ. ಪ್ರಸ್ತುತ ಭಾರತೀಯ ರೈಲ್ವೆ 1206 ಮೇಲ್ / ಎಕ್ಸ್‌ಪ್ರೆಸ್ ವಿಶೇಷ ರೈಲುಗಳು, 204 ಪ್ಯಾಸೆಂಜರ್ ರೈಲುಗಳು ಮತ್ತು 5017 ಉಪನಗರ ರೈಲುಗಳನ್ನು ನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ 684 ಫೆಸ್ಟಿವಲ್ ಸ್ಪೆಷಲ್ ರೈಲುಗಳನ್ನು ಸಹ ಹೊಂದಿದೆ. ಭಾರತೀಯ ರೈಲ್ವೆ ಸದ್ಯ ಇರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಿಯಮಿತವಾಗಿ ರೈಲುಗಳ ಸೇವೆಯನ್ನು ಪುನರಾರಂಭಿಸಲು ಎಲ್ಲ ಸಿದ್ಧತೆ ನಡೆಸುತ್ತಿದೆ.
ಕೋವಿಡ್ನಿಂದ ಜಾರಿಯಾದ ಲಾಕ್ಡೌನ್ನಿಂದಾಗಿ 2020 ರ ಡಿಸೆಂಬರ್ ಅಂತ್ಯದವರೆಗೆ ರೈಲ್ವೆ ಇಲಾಖೆಗೆ 36,993.82 ಕೋಟಿ ರೂ. ನಷ್ಟವಾಗಿದೆ. 2019ಕ್ಕೆ ಹೋಲಿಸಿದ್ರೆ, 32,768.97 ಕೋಟಿ ರೂ. ಪ್ರಯಾಣಿಕರ ಆದಾಯದಲ್ಲಿ ಕುಸಿತವಾಗಿದೆ.