ETV Bharat / bharat

ಕ್ರೂರ ರಕ್ತ ಚರಿತ್ರೆ ಮರೆತೇ ತವರಿಗೆ ಮರಳಲು ಪಂಡಿತರ ತವಕ: ಕುದಿ ಕಾಶ್ಮೀರದಲ್ಲಿ ನೆಮ್ಮದಿಯ ಸಿಂಚನ! - Union Home Minister Amit Shah

1990ರ ದಶಕದಲ್ಲಿ ಕಣಿವೆ ತೊರೆದಿದ್ದ ಕಾಶ್ಮೀರಿ ಪಂಡಿತರು ಕೇಂದ್ರ ಸರ್ಕಾರ 371 ವಿಶೇಷ ಸ್ಥಾನಮಾನ ರದ್ದತಿ ನಿರ್ಧಾರವನ್ನು ಸ್ವಾಗತಿಸಿದ್ದರು. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ ಘನತೆಯಿಂದ ತಾವು ತಮ್ಮ ತಾಯ್ನೆಲಕ್ಕೆ ವಾಪಸಾಗಲು ಇಚ್ಛಿಸುತ್ತಿದ್ದಾರೆ.

Kashmiri Pandits
Kashmiri Pandits
author img

By

Published : Feb 16, 2021, 11:43 AM IST

ಹೈದರಾಬಾದ್: ಹಲವು ದಶಕಗಳಿಂದ ತವರು ನೆಲದಿಂದ ದೂರ ತಳಲ್ಪಪಟ್ಟ ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆಯತ್ತ ಮರಳುತ್ತಿದ್ದಾರೆ. ಕೇಂದ್ರ ಸರ್ಕಾರ ಸಹ ಕಾಶ್ಮೀರಿ ಪಂಡಿತರನ್ನು ಗೌರವ ಹಾಗೂ ಘನತೆಯೊಂದಿಗೆ ಮತ್ತೆ ತವರು ರಾಜ್ಯಕ್ಕೆ ಮರಳಲು ಸುಗಮವಾದ ಹಾದಿ ಮಾಡಿಕೊಡುವುದಾಗಿ ಭರವಸೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 13ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, 2022ರ ವೇಳೆಗೆ ಕಣಿವೆಯಲ್ಲಿ ಸ್ಥಳಾಂತರಗೊಂಡ ಎಲ್ಲ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ನಿರ್ಮಿಸಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು.

1941ರ ಜನಗಣತಿಯ ಪ್ರಕಾರ ಬ್ರಾಹ್ಮಣರು ಮತ್ತು ಶೈವ ಧರ್ಮದ ಅನುಯಾಯಿಗಳು ಸೇರಿದಂತೆ ಹಿಂದೂ ಅಲ್ಪಸಂಖ್ಯಾತರು ಕಾಶ್ಮೀರ ಕಣಿವೆಯ ಜನಸಂಖ್ಯೆಯ ಸುಮಾರು ಶೇ 15ರಷ್ಟಿದ್ದರು. 1981ರ ಹೊತ್ತಿಗೆ ಅವರ ಸಂಖ್ಯೆ ಕೇವಲ ಶೇ 4ರಷ್ಟಕ್ಕೆ ಇಳಿಯಿತು.

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವರದಿಯ ಪ್ರಕಾರ, 1,400 ಹಿಂದೂಗಳ ಪೈಕಿ ಪಂಡಿತ್ ಸಮುದಾಯದ 219 ಸದಸ್ಯರು 1989 ಮತ್ತು 2004ರ ನಡುವೆ ಕಣಿವೆ ರಾಜ್ಯದಲ್ಲಿ ಹತ್ಯೆ ಮಾಡಲಾಯಿತು.

ಸರ್ಕಾರದ ಹಕ್ಕುಗಳಿಗೆ ವಿರುದ್ಧವಾಗಿ, ಪಂಡಿತರ ಒಕ್ಕೂಟ ಪ್ರತಿನಿಧಿಸುವ ರಾಜಕೀಯ ಗ್ರೂಪ್​ ಪನುನ್, ಕಾಶ್ಮೀರದಲ್ಲಿ 1990ರಿಂದ 1,341 ಪಂಡಿತರನ್ನು ಕೊಲ್ಲಲಾಯಿತು ಎಂದು ಹೇಳಿದೆ.

ರಾಜಕೀಯ ತಜ್ಞ ಅಲೆಕ್ಸಾಂಡರ್ ಇವಾನ್ಸ್ ಪ್ರಕಾರ, 1990ರಲ್ಲಿ ಕಣಿವೆಯಲ್ಲಿ ವಾಸಿಸುವ ಕಾಶ್ಮೀರಿ ಪಂಡಿತರಲ್ಲಿ 95 ಪ್ರತಿಶತದಷ್ಟು ಜನರು ಹೊರಟು ಹೋದರು. ಅದು 1,50,000ರಿಂದ 1,60,000 ಜನರ ಕಣಿವೆ ತೊರೆದಿದ್ದರು.

2010ರಿಂದ ನಾರ್ವೇಜಿಯನ್ ನಿರಾಶ್ರಿತರ ಮಂಡಳಿಯ ಆಂತರಿಕ ಸ್ಥಳಾಂತರ ಮಾನಿಟರಿಂಗ್ ಕೇಂದ್ರದ ವರದಿ, 1990 ರಿಂದ 2,50,000ಕ್ಕೂ ಹೆಚ್ಚು ಪಂಡಿತರನ್ನು ಕಾಶ್ಮೀರದಿಂದ ಸ್ಥಳಾಂತರಿಸಲಾಗಿದೆ ಎಂಬುದನ್ನು ಹೇಳುತ್ತದೆ.

ನೋಂದಾಯಿತ ಕಾಶ್ಮೀರ ಪಂಡಿತ್ ಕುಟುಂಬಗಳು

1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಪ್ರಾರಂಭವಾದ ಕಾರಣ, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಹಾಗೂ ದೇಶದ ಇತರೆಡೆಗಳಲ್ಲಿ ವಾಸಿಸುತ್ತಿರುವ ನೋಂದಾಯಿತ ವಲಸೆ ಕುಟುಂಬಗಳ ಸಂಖ್ಯೆ ಹೀಗಿದೆ.

ರಾಜ್ಯ/ಯುಟಿಎಸ್​ವಲಸೆ ಹೋದ ಕುಟುಂಬ ಸದಸ್ಯರು
ಜಮ್ಮು43,618
ದೆಹಲಿ/ ಎನ್​​ಸಿಆರ್​19,338
ಇತರ ರಾಜ್ಯ /ಯುಟಿಎಸ್​1995
ಒಟ್ಟ64,951

ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳ ಭರವಸೆ

2019ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಆಶ್ವಾಸ ನೀಡಿತ್ತು. ಇದಕ್ಕೂ ಮುನ್ನ 2014ರ ಪ್ರಣಾಳಿಕೆಯಲ್ಲಿ ಸಹ ಕಾಶ್ಮೀರಿ ಪಂಡಿತರು ತಮ್ಮ ಪೂರ್ವಜರ ಭೂಮಿಗೆ ಪೂರ್ಣ ಗೌರವ, ಭದ್ರತೆ ಮತ್ತು ಜೀವನೋಪಾಯದೊಂದಿಗೆ ಹಿಂದಿರುಗುವ ಭರವಸೆ ನೀಡಿತ್ತು.

ಪುನರ್ವಸತಿಯ ಆರಂಭಿಕ ಭರವಸೆಗಳು

ಮಾಜಿ ಹಣಕಾಸು ಸಚಿವ ದಿ. ಅರುಣ್ ಜೇಟ್ಲಿ ಅವರು 2014ರ ಕೇಂದ್ರ ಬಜೆಟ್​​ನಲ್ಲಿ ಕಾಶ್ಮೀರ ಪಂಡಿತರ ಪುನರ್ವಸತಿಗಾಗಿ 500 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ್ದರು. 2017ರಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನಗರದಲ್ಲಿ ಪಂಡಿತರಿಗೆ 6,000 ಸಾರಿಗೆ ವಸತಿ ಸೌಕರ್ಯ ನಿರ್ಮಿಸುವ ನಿರ್ಧಾರ ಘೋಷಿಸಿದ್ದರು. ಆದರೆ ಈ ಯೋಜನೆಯೂ ವಾಸ್ತವ ರೂಪಕ್ಕೆ ಇನ್ನು ಬಂದಿಲ್ಲ.

2008ರ ಏಪ್ರಿಲ್​ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು 2004ರಲ್ಲಿ ಇದೇ ರೀತಿಯ ಪ್ಯಾಕೇಜ್ ಅನ್ನು ಪಂಡಿತರ ವಾಪಸಾತಿ ಮತ್ತು ಪುನರ್ವಸತಿಗಾಗಿ 1,618 ಕೋಟಿ ರೂ.ಪ್ಯಾಕೇಜ್ ಪ್ರಸ್ತಾಪ ಘೋಷಿಸಿತ್ತು. ಮನೆಗಳ ಪುನರ್ನಿರ್ಮಾಣ ಅಥವಾ ನಿರ್ಮಾಣಕ್ಕಾಗಿ 7.5 ಲಕ್ಷ ರೂ. ಸಹಾಯಧನದ ಆಶ್ವಾಸನೆ ನೀಡಿತ್ತು.

ಕಾಶ್ಮೀರ ಪಂಡಿತರ ವಲಸೆಗೆ ಕಾರಣವಾದ ಘಟನೆ

1984ರಲ್ಲಿ ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಅವರ ಸರ್ಕಾರವನ್ನು ಅವರ ಸೋದರ ಮಾವ ಗುಲಾಮ್ ಮೊಹಮ್ಮದ್ ಷಾ ಉರುಳಿಸಿದ್ದರು. ಷಾ, ಇದನ್ನು ಗುಲ್ಶಾ ಎಂದೂ ಕರೆದ. ಆ ನಂತರ ಅವರು ಮುಖ್ಯಮಂತ್ರಿಯಾದರು. ಆರಂಭಿಕ ನಂಬಿಕೆಗಳಿಗೆ ವಿರುದ್ಧವಾಗಿ ಅವರ ರಾಕ್ಷಸ ಕೃತ್ಯಗಳಿಂದ ಸರ್ಕಾರ ನಡೆಸಿದ್ದರು. ಅದು ಕಣಿವೆಯಲ್ಲಿ ಆಕ್ರಮಣಕಾರಿ ಇಸ್ಲಾಮೀಕರಣ ಪ್ರಾರಂಭವಾಗಿ ಕಾಶ್ಮೀರ ಪಂಡಿತರು ರಾಜ್ಯವನ್ನು ತೊರೆಯಲು ಮುನ್ನುಡಿಯಾಯಿತು.

1986ರ ಫೆಬ್ರವರಿಯಲ್ಲಿ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಪ್ರದೇಶದಲ್ಲಿ ಪಂಡಿತ್ ವಿರೋಧಿ ಗಲಭೆಗಳು ನಡೆದವು. ಆಗ ಪಂಡಿತರನ್ನು ಥಳಿಸಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ಹಲವು ಮನೆ ಮತ್ತು ದೇವಾಲಯಗಳನ್ನು ಸುಟ್ಟುಹಾಕಲಾಯಿತು.

1987ರಲ್ಲಿ ಕಾಂಗ್ರೆಸ್ ಮತ್ತು ಫಾರೂಕ್ ಅಬ್ದುಲ್ಲಾ ಅವರು ಚುನಾವಣೆ ನಡೆಸಿದರು. 'ಕಠಿಣ' ಚುನಾವಣೆ ಪ್ರತ್ಯೇಕತಾವಾದಿಗಳ ಗುಂಪುಗಳ ಏರಿಕೆಗೆ ಕಾರಣವಾಯಿತು. ಚುನಾವಣೆಯು ಸಮಸ್ಯೆಯನ್ನು ಇನ್ನಷ್ಟು ಹದಗೆಟ್ಟು, ಪ್ರತ್ಯೇಕತಾವಾದಿಗಳು, ಭಾರತ ವಿರೋಧಿ ಗುಂಪುಗಳು ತಮ್ಮ ಬಾಹ್ಯ ಉದ್ದೇಶಗಳನ್ನು ಪೂರೈಸಿಕೊಳ್ಳಲು ಚುನಾವಣೆಗಳಲ್ಲಿ ಸ್ಪರ್ಧಿಸಲು ಒಗ್ಗೂಡಿದರು. ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಫಾರೂಕ್ ಅಬ್ದುಲ್ಲಾ ಅವರ ಸರ್ಕಾರದ ಅಡಿ ಸಕ್ರಿಯವಾಯಿತು. ಧಾರ್ಮಿಕ ಸಂಘರ್ಷ ಮತ್ತು ಕೋಮು ದ್ವೇಷ ಹರಬ್ಬಿತು.

1988ರ ಜುಲೈನಲ್ಲಿ ಕಡಿಮೆ ತೀವ್ರತೆಯ ಎರಡು ಬಾಂಬು ದಾಳಿಗಳು ಶ್ರೀನಗರವನ್ನು ಬೆಚ್ಚಿ ಬೀಳಿಸಿದವು. 1989ರ ಸೆಪ್ಟೆಂಬರ್‌ನಲ್ಲಿ ಪಂಡಿತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ ಟಿಕಾ ಲಾಲ್ ತಪ್ಲೂ ಅವರನ್ನು ಅವರ ನಿವಾಸದ ಮುಂದೆ ಶಸ್ತ್ರಸಜ್ಜಿತರ ಗುಂಡು ಹೊಡೆದು ಸಾಯಿಸಿದ್ದರು.

1990ರಲ್ಲಿ ಫಾರೂಕ್ ಅಬ್ದುಲ್ಲಾ ರಾಜೀನಾಮೆ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಡಳಿತ ಪ್ರಾರಂಭವಾಯಿತು. ಸಾಕಷ್ಟು ರಾಜಕೀಯ ಅಶಾಂತಿ ಮತ್ತು ಹಿಂದೂ ವಿರೋಧಿ ಚಳವಳಿಗಳು ಉದ್ಬವಿಸಿ ಪಂಡಿತರು ರಾಜ್ಯ ತೊರೆಯಲು ಪ್ರಚೋದನೆ ನೀಡಿದವು. 1990ರ ಜನವರಿಯಲ್ಲಿ ಭಾರತದ ವಿರೋಧಿ, ಪಂಡಿತ್ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಕಣಿವೆಯಾದ್ಯಂತ ಮಸೀದಿಗಳಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಮುಂದಿನ ಕೆಲವು ತಿಂಗಳಲ್ಲಿ ನೂರಾರು ಮುಗ್ಧ ಪಂಡಿತರನ್ನು ಹಿಂಸಿಸಲಾಯಿತು, ಅತ್ಯಾಚಾರ ಮಾಡಿ ಕೊಲ್ಲಲಾಯಿತು. ವರ್ಷದ ಅಂತ್ಯದ ವೇಳೆಗೆ ಸುಮಾರು 3,50,000 ಪಂಡಿತರು ಕಣಿವೆಯಿಂದ ತಪ್ಪಿಸಿಕೊಂಡು ಜಮ್ಮು ಮತ್ತು ಕಾಶ್ಮೀರ ಮತ್ತು ಇತರೆಡೆಗಳಲ್ಲಿ ಆಶ್ರಯ ಪಡೆದಿದ್ದರು. ಕೆಲವರು ಮಾತ್ರವೇ ಅಲ್ಲೆ ಉಳಿದು ಕೊಂಡರು.

1997ರ ಮಾರ್ಚ್​ನಲ್ಲಿ ಉಗ್ರರು ಸಂಗ್ರಂಪೋರಾ ಗ್ರಾಮದಲ್ಲಿ ಏಳು ಕಾಶ್ಮೀರಿ ಪಂಡಿತರನ್ನು ಅವರ ಮನೆಗಳಿಂದ ಹೊರಗೆಳೆದು ಗುಂಡು ಹಾರಿಸಿ ಹತ್ಯೆ ಮಾಡಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 23 ಕಾಶ್ಮೀರಿ ಪಂಡಿತರನ್ನು 1998ರ ಜನವರಿಯಲ್ಲಿ ವಂಧಮಾ ಗ್ರಾಮದಲ್ಲಿ ಗುಂಡು ಹಾರಿಸಲಾಯಿತು. 2003ರ ಮಾರ್ಚ್​ನಲ್ಲಿ ನಾಡಿಮಾರ್ಗ್ ಗ್ರಾಮದಲ್ಲಿ ಶಿಶುಗಳು ಸೇರಿದಂತೆ 24 ಕಾಶ್ಮೀರಿ ಪಂಡಿತರನ್ನು ಕ್ರೂರವಾಗಿ ಗುಂಡಿಕ್ಕಿ ಕೊಲ್ಲಲಾಯಿತು. 2019ರ ಆಗಸ್ಟ್​ನಲ್ಲಿ ನರೇಂದ್ರ ಮೋದಿ ಸರ್ಕಾರ 370ನೇ ವಿಧಿ ರದ್ದುಪಡಿಸಿತು. ಈ ನಿರ್ಧಾರವನ್ನು ಕಾಶ್ಮೀರಿ ಪಂಡಿತರು ಸ್ವಾಗತಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.